ಚಂದನವನಕ್ಕೆ ಮತ್ತೆ ಕಮ್ ಬ್ಯಾಕ್ ಮಾಡಿದ ಮುದ್ದಾದ ‘ನಿಧಿ’
ನಿಧಿ ಸುಬ್ಬಯ್ಯ ಟ್ಯಾಲೆಂಟೆಡ್ ಕನ್ನಡ ನಾಯಕಿಯರ ಪೈಕಿ ಒಬ್ಬರು.. ಹೀಗಾಗೆ ಬಾಲಿವುಡ್ ಗು ಹೋಗಿ ಬಂದ ಈ ಬ್ಯೂಟಿ ಡಾಲ್ ಆನಂತರ ಕನ್ನಡ ಚಿತ್ರರಂಗದಿಂದಲೇ ಕಾಣೆಯಾಗಿಬಿಟ್ಟಿದ್ದು.. ಕಳೆದ 2 ವರ್ಷಗಳಿಂದ ಸುದ್ದಿ ಇಲ್ಲದ ನಿಧಿ ಈಗ ಇದೇ ಚಂದನವನ್ನದಲ್ಲಿ ಹೊಳೆಯೋಕೆ ಶುರು ಮಾಡಿದೆ.. ಈ ಮೂಲಕ ಮತ್ತೆ ನಾಯಕಿಯಾಗಿ ಹೊಸ ಹುಮ್ಮಸ್ಸಿನೊಂದಿಗೆ ಬರ್ತಿದ್ದಾರೆ…
ಹ್ಯಾಟ್ರಿಕ್ ಹೀರೊ ಜೊತೆಗೆ ಪಂಚರಂಗಿ ಚೆಲುವೆ..
ಹೌದು, ನಿಧಿ ಸುಬ್ಬಯ್ಯ ಎರಡು ವರ್ಷಗಳ ನಂತರ ಒಪ್ಪಿಕೊಂಡಿರುವ ಸಿನಿಮಾ ಪಿ.ವಾಸು ನಿರ್ದೇಶನದಲ್ಲಿ ಮೂಡಿ ಬರಲಿರುವ ಆನಂದ್.. ಈ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ನಾಯಕನಾಗಿ ಕಾಣಿಸಿಕೊಳ್ತಿದ್ದಾರೆ.. ಶಿವಣ್ಣನ ಎವರ್ ಗ್ರೀನ್ ಸಿನಿಮಾ ಟೈಟಲ್ ಅನ್ನೇ ಇಲ್ಲು ಬಳಸಲಾಗ್ತಿದೆ..
ಹಳ್ಳಿ ಹುಡಗಿಯಾದ ಅಣ್ಣಬಾಂಡ್ ಬೆಡಗಿ..
ನಿಧಿ ಸುಬ್ಬಯ್ಯ ಈ ಚಿತ್ರವನ್ನ ಒಪ್ಪಿಕೊಳ್ಳಲು ಪ್ರಮುಖ ಕಾರಣ ತನ್ನ ಪಾತ್ರವಂತೆ.. ಹಳ್ಳಿ ಹುಡುಗಿಯಾಗಿ ಬಣ್ಣ ಹಚ್ಚಲಿರುವ ನಿಧಿ, ಕ್ಯಾರೆಕ್ಟರ್ ನಲ್ಲಿ ವಿಭಿನ್ನತೆ ಇದ್ಯಂತೆ.. ಅದರ ಜೊತೆಗೆ ಶಿವಣ್ಣ ಜೊತೆಗೆ ಅಭಿನಯಿಸೋಕೆ ತುಂಬಾ ಖುಷಿ ಇದೆ ಎಂದಿದ್ದಾರೆ.. ಅಂದಹಾಗೆ ಎಲ್ಲ ಅಂದುಕೊಂಡ ಹಾಗೆ ನಡೆದಿದ್ರೆ, ಸಿಂಪಲ್ ಸುನಿ ನಿರ್ದೇಶನದ ಮನಮೋಹಕ ಚಿತ್ರದಲ್ಲಿ ನಿಧಿ ಸುಬ್ಬಯ್ಯ ಆಕ್ಟ್ ಮಾಡಬೇಕಿತ್ತು.. ಆದ್ಯಾಕೋ ಚಿತ್ರ ಮಾತ್ರ ಸೆಟ್ಟೇರಲೇ ಇಲ್ಲ.. ಆದರೀಗ ನಿಧಿ ಮತ್ತೆ ಸೆಂಚುರಿ ಸ್ಟಾರ್ ನ ಸಿನಿಮಾದ ಆಫರ್ ಗಿಟ್ಟಿಸಿಕೊಂಡಿದ್ದು, ಖುಷಿಯಲ್ಲಿದ್ದಾರೆ.. ಈ ಚಿತ್ರ ಈಕೆಗೆ ಒಂದೊಳ್ಳೆ ಬ್ರೇಕ್ ನೀಡಲಿ ಅನ್ನೋದಷ್ಟೆ ನಮ್ಮ ಆಶಯ..