ಕನ್ನಡ ಬಿಗ್ ಬಾಸ್ ಸೀಸನ್ 6 ಗೆ ದಿನಗಣನೆ ಶುರುವಾಗಿದೆ.
ಕಳೆದ ಐದು ಸೀಸನ್ ಗಳಿಗಿಂತ ಈ ಬಾರಿಯ ಬಿಗ್ ಬಾಸ್ ತುಂಬಾ ಸ್ಪೆಷಲ್ ಆಗಿರಲಿದೆ.
ಈ ಬಾರಿ ಸೆಲಬ್ರಿಟಿಗಳಿರಲ್ಲ, ಮಿನಿ ಸೆಲಬ್ರಿಟಿಗಳು ಮತ್ತು ಜನಸಾಮಾನ್ಯರು ಇರ್ತಾರೆ ಎಂದು ಕಲರ್ಸ್ ವಾಹಿನಿಯ ಬ್ಯುಸ್ ನೆಸ್ ಹೆಡ್ ಪರಮೇಶ್ವರ ಗುಂಡ್ಕಲ್ ಅವರೇ ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ಹೇಳಿದ್ದಾರೆ . ಈ ಬಾರಿಯ ಬಿಗ್ ಬಾಸ್ ಒಂದು ರೀತಿಯಲ್ಲಿ ಜನಸಾಮಾನ್ಯರ ಬಿಗ್ ಬಾಸೇ ಆಗಿರಲಿದೆ.
ಈ ಬಾರಿ ಯಾರೆಲ್ಲಾ ಬಿಗ್ ಬಾಸ್‌ಮನೆಗೆ ಹೋಗ್ತಾರೆ ಅನ್ನೋ ಚರ್ಚೆ ನಡೀತಾ ಇದೆ.
ಡಬ್ ಸ್ಮ್ಯಾಶ್ ಸ್ಟಾರ್ ನಿಖಿಲ್ ಗೌಡ ಬಿಗ್ ಬಾಸ್ ಗೆ ಹೋಗುತ್ತಾರೆ ಎಂದು ಹೇಳಲಾಗುತ್ತಿದೆ.
ಶಿವಮೊಗ್ಗ ಮೂಲದ ನಿಖಿಲ್ ಡಬ್ ಸ್ಮ್ಯಾಶ್ ಮೂಲಕ ಮನೆಮಾತಾಗಿದ್ದಾರೆ. ಇವರು ಬಿಗ್ ಬಾಸ್ ಗೆ ಹೋದಲ್ಲಿ ಎಂಟರ್ಟೇನ್ಮೆಂಟ್ ಗೆ ಬರವಿಲ್ಲ ಎಂಬುದು ಅಭಿಮಾನಿಗಳ ಮಾತು…