ನಿಖಿಲ್ ಹೊಸ ಸಿನಿಮಾಗೆ ಬಂದ್ರು ತೆಲುಗು ಡೈರೆಕ್ಟರ್..! ಚಿತ್ರದ ಸ್ಪೆಷಾಲಿಟಿ ಏನು ಗೊತ್ತಾ..?

Date:

ನಿಖಿಲ್ ಹೊಸ ಸಿನಿಮಾಗೆ ಬಂದ್ರು ತೆಲುಗು ಡೈರೆಕ್ಟರ್..! ಚಿತ್ರದ ಸ್ಪೆಷಾಲಿಟಿ ಏನು ಗೊತ್ತಾ..?

ನಿಖಿಲ್ ಕುಮಾರ್ ಸ್ವಾಮಿ ಜಾಗ್ವರ್ ನಂತರ ಕುರುಕ್ಷೇತ್ರ ಚಿತ್ರದಲ್ಲಿ ಅಭಿನಯಿಸಿದ್ದಾರೆ.. ಆದ್ಯಾಕೋ ಈ ಚಿತ್ರ ಇನ್ನು ತೆರೆಗೆ ಬರೋಕೆ‌ ಸಾಧ್ಯವಾಗಿಲ್ಲ.. ಈ ನಡುವೆ ಸೀತಾರಾಮ ಕಲ್ಯಾಣದ ಮೂಲಕ ಕಮಾಲ್ ಮಾಡೋಕೆ‌ ರೆಡಿಯಾಗಿರೋ ಈ ಜಾಗ್ವರ್ ಹುಡುಗ, ರಚಿತಾ ರಾಮ್ ಜೊತೆಗೆ ಡ್ಯುಯೆಟ್ ಹಾಡಿದ್ದಾರೆ.. ಎ ಹರ್ಷ ನಿರ್ದೇಶನದಲ್ಲಿ ಮೂಡಿ ಬಂದಿರೋ ಈ ಸಿನಿಮಾ ರಿಲೀಸ್ ಗೆ ಸಿದ್ದವಾಗಿದೆ

ಇನ್ನೂ ನಿಖಿಲ್ ಕುಮಾರ್ ಸ್ವಾಮಿ ತಮ್ಮ ಮುಂದಿನ ಚಿತ್ರದ ತಯಾರಿಯನ್ನ ನಡೆಸಿದ್ದಾರೆ.. ತನ್ನ 4ನೇ ಸಿನಿಮಾವನ್ನ ಓಕೆ ಮಾಡಿದ್ದು, ತೆಲುಗಿನ ಡೈರೆಕ್ಟರ್ ಈತನಿಗೆ ಆಕ್ಷನ್ ಕಟ್ ಹೇಳಲ್ಲಿದ್ದಾರೆ.. ಗುಂಡೆ ಜಾರಿ ಗಲ್ಲಂತೈಂದಿ, ಒಕ ಲೀಲಾ ಕೋಸಮ್ ನಂತಹ ಸಿನಿಮಾಗಳನ್ನ ನಿರ್ದೇಶನ ಮಾಡಿದ್ದ ವಿಜಯ್ ಕುಮಾರ್ ಕನ್ನಡಕ್ಕೆ ಆಗಮಿಸುತ್ತಿದ್ದಾರೆ.. ಈ ಚಿತ್ರವು ಚೆನ್ನಾಂಬಿಕಾ ಪ್ರೊಡೆಕ್ಷನ್ ನಲ್ಲೇ ತಯಾರಾಗಲಿರೋದು ವಿಶೇಷ..

ಈಗಾಗ್ಲೇ ಮಾಸ್ ಆಡಿಯನ್ಸ್ ನ ತನ್ನತ್ತ ಸೆಳೆಯುತ್ತಿರುವ ನಿಖಿಲ್ ಮ್ಯಾನರಿಸಂಗ್ ಸೂಟ್ ಆಗುವ ಸಬ್ಜೆಕ್ಟ್ ಇದಂತೆ.. ಮಾಸ್ ಕಥೆಯೊಂದಿಗೆ ಫ್ಯಾಮಿಲಿ ಎಂಟ್ರಟೈನರ್ ಚಿತ್ರವಾಗಿರಲ್ಲಿದ್ದು, ದೊಡ್ಡ ಬಜೆಟ್ ನಲ್ಲಿ ಸಿನಿಮಾ ಸಿದ್ದವಾಗಲಿದೆ.. ಅಂದಹಾಗೆ ಡಿಸಂಬರ್ 16 ರಂದು ಕುಮಾರಸ್ವಾಮಿ ಅವರ ಹುಟ್ಟುಹಬ್ಬವಿದ್ದು, ಅಂದೇ ಈ ಸಿನಿಮಾದ ಘೋಷಣೆಯಾಗಲಿದೆ..

 

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...