ಬಿಗ್ ಬಾಸ್ ಖ್ಯಾತಿಯ ಬೇಬಿ ಡಾಲ್ ನಿವೇದಿತಾ ಗೌಡ ಅವರ ವಿರುದ್ಧ ದೂರು ದಾಖಲಾಗಿದೆ.
ನಿವೇದಿತಾ ಅಪಾಯಕಾರಿ ಕಿಕಿ ಡ್ಯಾನ್ಸ್ ಮಾಡಿದ್ದೇ ದೂರು ದಾಖಲಾಗಲು ಕಾರಣ.
ಕಿಕಿ ಚಾಲೆಂಜ್ ಗಾಗಿ ಇಂಗ್ಲಿಷ್ ಹಾಡಿಗೆ ನಿವೇದಿತಾ ಹೆಜ್ಜೆ ಹಾಕಿದ್ದರು. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತವಾಗಿತ್ತು.

ಅಪಾಯಕಾರಿ ಎಂದು ಗೊತ್ತಿದ್ದರೂ ನಿವೇದಿತಾ ಡ್ಯಾನ್ಸ್ ಮಾಡಿ ಪ್ರಚೋದಿಸಿದ್ದಾರೆ ಎಂದು ಕನ್ನಡ ಒಕ್ಕೂಟ ಸಂಘಟನೆ ಹಲಸೂರು ಗೇಟ್ ಪೊಲೀಸರಿಗೆ ದೂರು ನೀಡಿದೆ. ನಿವೇದಿತಾ ಅವರ ವಿರುದ್ಧ ಕ್ರಮಕ್ಕೆ ಕನ್ನಡ ಚಳುವಳಿ ನಾಗೇಶ್ ಮನವಿ ಮಾಡಿದ್ದಾರೆ.






