ಗ್ರಾಹಕರೇ ಎಚ್ಚರ..! ನವೆಂಬರ್ 23 ರಂದು ದೇಶದಾದ್ಯಂತ ಮೆಡಿಕಲ್ ಬಂದ್.!

1
82

ನವೆಂಬರ್ 23ಕ್ಕೆ ನೀವೇನಾದ್ರೂ ಔಷಧಿಯನ್ನು ತಗೊಳ್ಬೇಕು ಅಂತ ಏನಾದ್ರೂ ಅನ್ಕೊಂಡು ಮೆಡಿಕಲ್ ಶಾಪ್‍ಗಳತ್ರ ಮುಖಮಾಡಿದ್ರೆ ಖಂಡಿತ ನಿಮಗೆ ನಿರಾಸೆಯಾಗೋದು ಸತ್ಯ..! ಯಾಕಂದ್ರೆ ಅಂದು ದೇಶವ್ಯಾಪಿ ಔಷಧಿ ಮಳಿಗೆಗಳು ಇರೋದು ಬಹುತೇಕ ಡೌಟ್..! ಹೌದು.. ರಾಷ್ಟ್ರದಲ್ಲಿ ಆನ್‍ಲೈನ್ ಮೂಲಕ ಔಷಧ ಮಾರಾಟಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಲು ಮುಂದಾಗುತ್ತಿರುವುದನ್ನು ಖಂಡಿಸಿ ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘಟನೆ ಇದೇ ನವೆಂಬರ್ 23ಕ್ಕೆ ದೇಶದಾದ್ಯಂತ ಮೆಡಿಕಲ್ ಶಾಪ್‍ಗಳ ಬಂದ್‍ಗೆ ಕರೆ ನೀಡಿದೆ. ಈ ಕುರಿತು ಮಾಹಿತಿ ನೀಡಿರುವ ಅಖಿಲ ಭಾರತ ಔಷಧಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಜೆ.ಎಸ್ ಶಿಂಧೆ ಯಾವುದೇ ಕಾರಣಕ್ಕೂ ಕೇಂದ್ರ ಸರ್ಕಾರ ಆನ್‍ಲೈನ್ ಮೂಲಕ ಔಷಧಿ ಮಾರಾಟಕ್ಕೆ ಅವಕಾಶ ನೀಡಬಾರದು ಎಂದು ಹೇಳಿದ್ದಾರೆ. ಇದೇ ವೇಳೆ ನಮ್ಮ ಔಷಧ ಮಾರಾಟವನ್ನು ಮುಂದುವರಿದ ದೇಶಗಳಿಗೆ ಹೋಲಿಕೆ ಮಾಡಿ ನೋಡಬಾರದು ಎಂದು ತಿಳಿಸಿದ್ದಾರೆ. ಈಗಾಗಲೇ ಕೆಲ ವೆಬ್‍ಸೈಟ್‍ಗಳಲ್ಲಿ ಅಕ್ರಮವಾಗಿ ಔಷಧ ಮಾರಾಟ ಹೆಚ್ಚಾಗುತ್ತಿದ್ದು ಸರ್ಕಾರ ಈ ಕುರಿತು ಯಾವುದೇ ಕಠಿಣ ಕ್ರಮಕ್ಕೆ ಮುಂದಾಗಿಲ್ಲ. ಇದು ಮುಂದೆ ಗ್ರಾಹಕರ ಮೇಲೆ ಗಂಭಿರ ಪರಿಣಾಮ ಉಂಟಾಗುವ ಸಾಧ್ಯತೆ ಹೆಚ್ಚಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಆನ್‍ಲೈನ್‍ಗಳಲ್ಲಿ ಔಷಧಿ ಖರೀದಿ ಮಾಡಿದ ಗ್ರಾಹಕರು ಅದರಿಂದ ಸಾಕಷ್ಟು ಸಮಸ್ಯೆಗಳನ್ನು ಅನುಭವಿಸಿದ್ದಾರೆ. ಈ ಕುರಿತಾಗಿ ನ್ಯಾಯಾಲಯವೇ ಗಂಭೀರವಾಗಿ ಪರಿಗಣಿಸಿದೆ. ಹೀಗಿರುವಾಗ ಕೇಂದ್ರ ಸರ್ಕಾರ ಮಾತ್ರ ಈ ಕುರಿತಾಗಿ ನಿರ್ಲಕ್ಷ್ಯ ವಹಿಸುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಡುತ್ತಿದೆ ಎಂದು ಅವರು ದೂರಿದ್ದಾರೆ.

Like us on Facebook  The New India Times

POPULAR  STORIES :

ಲವ್ ಅಟ್ ಫಸ್ಟ್ ಸೈಟ್ ಅಂದ್ರೆ ಇದೇನಾ..!

ಹಾಲಿಗಿಂತ ಬಿಯರ್ ಆರೋಗ್ಯಕ್ಕೆ ಒಳ್ಳೆಯದು…!

ಟಾಪ್-2 ನಿಂದ ಮೈಕ್ರೋಮ್ಯಾಕ್ಸ್ ಔಟ್.. ನಂ.1 ಯಾರ್ ಗೊತ್ತಾ..?

ಭಾರತದ ಕಾಂಡೋಮ್ ಜಾಹೀರಾತಿಗೆ ಗೇಲ್, ಬ್ರಾವೋ ಸಖತ್ ಸ್ಟೆಪ್

1 COMMENT

LEAVE A REPLY

Please enter your comment!
Please enter your name here