ತಮಿಳು ಚಿತ್ರರಂಗದ ಖ್ಯಾತ ನಟ, ರಜಿನಿಕಾಂತ್ ಅಳಿಯ ಧನುಷ್ ತಮ್ಮ ಪುತ್ರ ಆತನನ್ನು ಮತ್ತೆ ತಮ್ಮ ಬಳಿ ಹಿಂದಿರುಗಿಸಿ ಕೊಡಬೇಕೆಂದು ಮಧುರೈನ ದಂಪತಿಯೊಬ್ಬರು ಕೋರ್ಟ್‍ಗೆ ದೂರು ನೀಡಿದ್ದಾರೆ. ಇನ್ನು ಈ ದಂಪತಿಗಳ ದೂರಿನ ವಿಚಾರಣೆ ನಡೆಸಿರುವ ಮಧುರೈ ಜಿಲ್ಲಾ ನ್ಯಾಯಾಲಯ ನಟ ಧನುಷ್ ಅವರನ್ನು ಕೋರ್ಟ್‍ಗೆ ಹಾಜಹಾಗುವಂತೆ ಸಮನ್ಸ್ ಜಾರಿ ಮಾಡಿದೆ..! ಜನವರಿ 12ನೇ ತಾರೀಕಿನ ಒಳಗಾಗಿ ಕೋರ್ಟ್‍ಗೆ ಬಂದು ತಮ್ಮ ಹೇಳಿಕೆ ನೀಡಬೇಕೆಂದು ಕೋರ್ಟ್ ಆದೇಶ ಹೊರಡಿಸಿದೆ.
ಇನ್ನು ಮಧುರೈನ ದಂಪತಿಗಳಾದ ಕದಿರೇಸನ್ ಹಾಗೂ ಮಿನಾಕ್ಷಿ ದಂಪತಿ ಧನುಷ್ ನಮ್ಮ ಮಗ ಎಂದು ಕೋರ್ಟ್‍ಗೆ ದೂರು ನೀಡಿದ್ದಾರೆ. ವೃತ್ತಿಯಲ್ಲಿ ಸರ್ಕಾರಿ ಬಸ್ ಕಂಡೆಕ್ಟರ್ ಆಗಿರುವ ಕದಿರೀಸನ್ ಅವರಿಗೆ ಒಟ್ಟು ಮೂವರು ಮಕ್ಕಳಿದ್ದು ಅದರಲ್ಲಿ ಧನುಷ್ ಕೂಡ ಒಬ್ಬರು ಎನ್ನಲಾಗ್ತಾ ಇದೆ. ಇವರ ಹೇಳಿಕೆಯ ಪ್ರಕಾರ ಧನುಷ್ ಅವರ ನಿಜವಾದ ಹೆಸರು ಕಲೈ ಸೆಲ್ವನ್. 1985ರಲ್ಲಿ 10ನೇ ತರಗತಿಯವರೆಗು ಮೇಲೂರಿನಲ್ಲಿ ಶಿಕ್ಷಣ ಮುಗಿಸಿದ ಧನುಷ್, ಪಿಯು ವ್ಯಾಸಂಗಕ್ಕಾಗಿ ತಿರಪತ್ತೂರಿಗೆ ಕಳುಹಿಸಲಾಗಿತ್ತು. ಆದ್ರೆ ಚಿತ್ರರಂಗದ ಕಡೆ ಹೆಚ್ಚು ಆಸಕ್ತಿ ಹೊಂದಿದ್ದ ಧನುಷ್ ತನ್ನ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿ ಮನೆ ಬಿಟ್ಟು ಹೋಗಿದ್ದರಂತೆ. ನಂತರ ತಮಿಳಿನ ಪ್ರಖ್ಯಾತ ನಿರ್ದೇಶಕ ಕಸ್ತೂರಿ ರಾಜ ಅವರೊಂದಿಗೆ ಕೆಲಸಕ್ಕೆ ಸೇರಿಕೊಂಡಿದ್ದ.
ನಾವು ಎಷ್ಟು ಬಾರಿ ಭೇಟಿಯಾಗಲು ಪ್ರಯತ್ನ ಪಟ್ಟರೂ ಅದು ಸಾಧ್ಯವಾಗ್ಲೇ ಇಲ್ಲ ಎಂದು ಕೋರ್ಟ್‍ಗೆ ತಿಳಿಸಿದ್ದಾರೆ. ಸದ್ಯಕ್ಕೆ ಅನಾರೋಗ್ಯದಿಂದ ಬಳಲುತ್ತಿರುವ ಕದಿರೇಸನ್ ಹಾಗೂ ಮೀನಾಕ್ಷಿ ದಂಪತಿಗೆ ಆರ್ಥಿಕ ಸಮಸ್ಯೆ ಎದುರಾಗಿದೆ. ಹೀಗಾಗಿ ಕುಟುಂಬ ನಿರ್ವಹಣೆ ಕಷ್ಟವಾಗುತ್ತಿದ್ದು, ಧನುಷ್ ಅವರಿಂದ ಮಾಸಿಕ 65 ಸಾವಿರ ರೂ. ನೆರವು ಕೊಡಿಸುವಂತೆ ಬೇಡಿಕೆ ಇಟ್ಟಿದ್ದಾರೆ. ಇನ್ನು ಧನುಷ್ ತಮ್ಮ ಮಗ ಎಂಬ ಪುರಾವೆಯಾಗಿ ಕದಿರೇಸನ್ ದಂಪತಿ ಧನುಷ್ ಅವರ ಬಾಲ್ಯದ ಫೋಟೋ ಸೇರಿದಂತೆ ಕುಟುಂಬದ ಹಲವು ಫೋಟೋಗಳನ್ನು ಕೋರ್ಟ್‍ಗೆ ಒದಗಿಸಿದ್ದಾರೆ. ಧನುಷ್ ನಮ್ಮ ಮಗ ಎಂದು ಸಾಬೀತು ಪಡಿಸಲು ತಮ್ಮ ಬಳಿ ಸಾಕ್ಷಾಧರಗಳಿದ್ದು, ಅಗತ್ಯ ಬಿದ್ದರೆ ಡಿಎನ್‍ಎ ಪರೀಕ್ಷೆಗೂ ಸಿದ್ದ ಎಂದು ಕದಿರಾಸನ್ ದಂಪತಿ ತಿಳಿಸಿದ್ದಾರೆ.
Like us on Facebook The New India Times
POPULAR STORIES :
500ರೂ. ಹೊಸ ನೋಟಿನಲ್ಲಿ ತಪ್ಪು: ಆರ್‍ಬಿಐ ಸ್ಪಷ್ಟನೆ
ಮಲ್ಯರಂತೆ ನನ್ನ ಸಾಲ ಮನ್ನಾ ಮಾಡಿ: ಮಂಡ್ಯ ರೈತನ ಮನವಿ.
ಬಿಬಿಸಿ ಹೊರ ತಂದಿರುವ ವಿಶ್ವದ ಪ್ರಭಾವಿ 100 ಮಹಿಳೆಯರ ಪಟ್ಟಿಯಲ್ಲಿ ಸಾಲುಮರದ ತಿಮ್ಮಕ್ಕ
ಇನ್ಮುಂದೆ ಬಿಗ್ ಬಜಾರ್‍ನಲ್ಲೂ ಮನಿ ವಿತ್‍ಡ್ರಾ ಮಾಡ್ಕೊಳ್ಳಿ..!
ಅವನಿಗೆ ಅವಳು ಇಷ್ಟವಾಗಿದ್ದು ಪ್ರತಿಭಟನೆಯಲ್ಲಿ. ಅವಳು ಇವನ ಮುಖ ನೋಡಿದ್ದು ಸೆರಗು ಸಿಕ್ಕಿಬಿದ್ದಾಗ.!
50 ಲಕ್ಷ ಮಂದಿಗೆ ಸ್ಮಾರ್ಟ್ ಫೋನ್ & 1 ವರ್ಷ ಡೇಟಾ ಉಚಿತ
ರೈಲ್ವೇ ಆಫರ್: ಇನ್ಮುಂದೆ ಆನ್‍ಲೈನ್ ಬುಕಿಂಗ್‍ಗೆ ಹೆಚ್ಚುವರಿ ಶುಲ್ಕ ಇಲ್ಲ..!