No menu items!
13.3 C
Munich
Friday, May 1, 2026

ಹಣ ಸಿಗದಿದ್ದಕ್ಕೆ ಆರ್‍ಬಿಐ ಗವರ್ನರ್ ವಿರುದ್ದವೇ ಕೇಸ್

Must read

500 ಮತ್ತು 1000 ಮುಖಬೆಲೆಯ ನೋಟುಗಳ ಚಲಾವಣೆ ರದ್ದತಿಯ ಬಿಸಿ ಇದೀಗ ಆರ್‍ಬಿಐ ಗವರ್ನರ್ ಅವರಿಗೂ ಬಿಟ್ಟಿಲ್ಲ ನೋಡಿ.. ಯಾಕೆ ಅಂತೀರಾ..? 10 ಸಾವಿರ ಹಣ ಪಡೆದುಕೊಳ್ಳೊಕೆ ಒಂದು ಗಂಟೆಗೂ ಹೆಚ್ಚು ಕಾಲ ಸರತಿ ಸಾಲಿನಲ್ಲಿ ನಿಂತಿದ್ದರೂ ಹಣ ದಕ್ಕದ ಕಾರಣ ಬೇಸತ್ತ ರಾಜಸ್ಥಾನದ ಕಾಂಗ್ರೆಸ್ ಶಾಸಕ ವಿಶ್ವೇಂದ್ರ ಸಿಂಗ್ ಆರ್‍ಬಿಐ ಗವರ್ನರ್ ಊರ್ಜಿತ್ ಪಟೇಲ್ ಅವರ ವಿರುದ್ದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ..!
ಕಳೆದ ಗುರುವಾರದಂದು ವಿಶ್ವೇಂದ್ರ ಪಟೇಲ್ ಭರತ್‍ಪುರದಲ್ಲಿರುವ ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್‍ಗೆ ತೆರಳಿ ತಮ್ಮ ಖಾತೆಯಲ್ಲಿದ್ದ 10 ಸಾವಿರ ರೂ ಡ್ರಾ ಮಾಡಲು ಸರತಿ ಸಾಲಿನಲ್ಲಿ ನಿಂತಿದ್ದರು. ಒಂದು ಗಂಟೆಯ ನಂತರ ಅವರ ಪಾಳಿ ಬಂದಾಗ, ಬ್ಯಾಂಕ್ ಸಿಬ್ಬಂದಿ ತಮ್ಮ ಬಳಿ ಇರೋದು ಕೇವಲ 30 ಲಕ್ಷ. ಎಲ್ಲರಿಗೂ 2 ಸಾವಿರಗಿಂತ ಹೆಚ್ಚಿನ ಹಣ ಡ್ರಾ ಮಾಡಲು ಅವಕಾಶ ನೀಡಲಾಗುವುದಿಲ್ಲ. ದಯವಿಟ್ಟು ಸಹಕರಿಸಿ ಎಂದು ಕೇಳಿಕೊಂಡಿದ್ದಾರೆ. ಇದೇ ವೇಳೆ ತಾಳ್ಮೆ ಕಳೆದುಕೊಂಡ ಸಿಂಗ್ ಆರ್‍ಬಿಐ ನಿಂದ ನಿಮಗೆ ನಿರ್ದೇಶನ ಬಂದಿಲ್ಲವೆ.? ನನ್ನ ಖಾತೆಯಲ್ಲಿರುವ ಹಣ ತೆಗೆಯಲು ಸಾಧ್ಯವಿಲ್ಲ ಎಂದಾದರೆ ಏನು ಮಾಡಬೇಕು ಎಂದು ವಾಗ್ವಾದಕ್ಕಿಳಿದಿದ್ದಾರೆ. ಕೊನೆಗೆ ಬೇಸತ್ತ ಸಿಂಗ್ ಸೀದಾ ಪೊಲೀಸ್ ಠಾಣೆಗೆ ತೆರಳಿ ನೋಟು ರದ್ದತಿ ವಿಚಾರ ಆರ್‍ಬಿಐಗೆ ಗೊತ್ತಿದ್ದರೂ ಅವರು ಅಗತ್ಯ ಕರೆನ್ಸಿಗಳನ್ನು ಮುದ್ರಿಸದೆ ದೇಶದ ಜನತೆಗೆ ಮೋಸ ಮಾಡಿದ್ದಾರೆ. ಇದೊಂದು ಪಿತೂರಿ. ಹೀಗಾಗಿ ಆರ್‍ಬಿಐ ಗವರ್ನರ್ ಹಾಗೂ ಬ್ಯಾಂಕ್‍ನ ಹಿರಿಯ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಿ ಎಂದು ದೂರು ದಾಖಲಿಸಿದ್ದಾರೆ. ಇನ್ನು ಪೊಲೀಸರು ದೂರು ದಾಖಲಿಸಿಕೊಂಡಿದ್ದರೂ, ವಿಚಾರಣೆ ನಡೆಸದೇ ಎಫ್‍ಐಆರ್ ದಾಖಲಿಸಿಲಾಗದು ಎಂದು ಹೇಳಿದ್ದಾರೆ. ಆದರೆ ಸಿಂಗ್ ತಾನು ಕೋರ್ಟ್ ಮೆಟ್ಟಿಲೇರುವುದಾಗಿ ತಿಳಿಸಿದ್ದಾರೆ.

Like us on Facebook  The New India Times

POPULAR  STORIES :

500ರೂ. ಹೊಸ ನೋಟಿನಲ್ಲಿ ತಪ್ಪು: ಆರ್‍ಬಿಐ ಸ್ಪಷ್ಟನೆ

ಮಲ್ಯರಂತೆ ನನ್ನ ಸಾಲ ಮನ್ನಾ ಮಾಡಿ: ಮಂಡ್ಯ ರೈತನ ಮನವಿ.

ಬಿಬಿಸಿ ಹೊರ ತಂದಿರುವ ವಿಶ್ವದ ಪ್ರಭಾವಿ 100 ಮಹಿಳೆಯರ ಪಟ್ಟಿಯಲ್ಲಿ ಸಾಲುಮರದ ತಿಮ್ಮಕ್ಕ

ಇನ್ಮುಂದೆ ಬಿಗ್ ಬಜಾರ್‍ನಲ್ಲೂ ಮನಿ ವಿತ್‍ಡ್ರಾ ಮಾಡ್ಕೊಳ್ಳಿ..!

ಅವನಿಗೆ ಅವಳು ಇಷ್ಟವಾಗಿದ್ದು ಪ್ರತಿಭಟನೆಯಲ್ಲಿ. ಅವಳು ಇವನ ಮುಖ ನೋಡಿದ್ದು ಸೆರಗು ಸಿಕ್ಕಿಬಿದ್ದಾಗ.!

50 ಲಕ್ಷ ಮಂದಿಗೆ ಸ್ಮಾರ್ಟ್ ಫೋನ್ & 1 ವರ್ಷ ಡೇಟಾ ಉಚಿತ

ರೈಲ್ವೇ ಆಫರ್: ಇನ್ಮುಂದೆ ಆನ್‍ಲೈನ್ ಬುಕಿಂಗ್‍ಗೆ ಹೆಚ್ಚುವರಿ ಶುಲ್ಕ ಇಲ್ಲ..!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article