ಆನ್‍ಲೈನ್ ಶಾಪಿಂಗ್ ಮಾಡೋಕು ಮುನ್ನ ಈ ಸ್ಟೋರಿ ಓದಿ..!

Date:

ಈಗೆಲ್ಲಾ ಫ್ಲಿಪ್ ಕಾರ್ಟ್, ಅಮೇಜಾನ್, ಸ್ನಾಪ್‍ಡೀಲ್, ಕ್ವಿಕ್ಕರ್ನಂತಹ ಆನ್ಲೈನ್ ಶಾಪಿಂಗ್ ಬಂದ ನಂತರ ಜನರು ಕೂತಲ್ಲೆ ತಮ್ಮ ಅಗತ್ಯ ವಸ್ತುಗಳನ್ನ ಕೊಂಡ್ಕೊಳ್ತಾರೆ. ಅದರಿಂದ ಜನರಿಗೆ ಮೋಸ ಹೋಗ್ತಾ ಇದೆ ಅಂದ್ರೂನೂ ಕೂಡ ಆನ್ಲೈನ್ ಬುಕಿಂಗ್ ಮಾಡೋ ಚಟ ಬಿಡೊಲ್ಲ ನೋಡಿ. ಆನ್ಲೈನ್ ಶಾಪಿಂಗ್ ಮಾಡಿ ಮೋಸ ಹೋದ ಅದೆಷ್ಟೋ ಜನ ಸರಿಯಾದ ದಾಖಲೆಗಳನ್ನು ನೀಡದೇ ಅತ್ತ ತಮ್ಮ ಆಸೆಯ ವಸ್ತು ಇಲ್ಲದೇ ಇತ್ತ ತಮ್ಮ ಹಣವನ್ನೂ ಕಳೆದುಕೊಂಡು ನಿರಾಸೆ ಅನುಭವಿಸಿದ ಅದೆಷ್ಟೋ ಜನರು ನಮ್ಮ ಕಣ್ಣ ಮುಂದೆ ಕಾಣ ಸಿಗುತ್ತಾರೆ. ಆದ್ರೆ ಇಲ್ಲೊಬ್ಬ ಯುವಕ ಆನ್‍ಲೈನ್ ಶಾಪಿಂಗ್ ಸಂಸ್ಥೆಯಲ್ಲಿ ಒಂದಾದ ಸ್ನಾಪ್‍ಡೀಲ್‍ನಿಂದ ಹೇಗೆ ಮೋಸ ಹೋಗಿದ್ದೇನೆ ಎಂದು ವಿಡಿಯೋ ಸಮೇತವಾಗಿ ಸೋಷಿಯಲ್ ಮೀಡಿಯಾದಲ್ಲಿ ಹರಿ ಬಿಟ್ಟಿದ್ದಾನೆ ನೋಡಿ…
ಕಾನ್ಪುರದ ವಿಕ್ಕಿ ಮೂರ್ಜಾನಿ ಎಂಬ ವ್ಯಕ್ತಿ ತಾನು ಹೇಗೆ ಸ್ನಾಪ್‍ಡೀಲ್‍ನಿಂದ ಮೋಸ ಹೋದೆ ಎಂಬುದನ್ನು ತಿಳಿಸಿಕೊಟ್ಟಿದ್ದಾನೆ ನೋಡಿ.. ಕಳೆದ ಸೆ.2 ರಂದು ಸ್ನಾಪ್‍ಡೀಲ್‍ನಲ್ಲಿ ರೆಡ್ಮಿ ನೋಟ್3 ಮೊಬೈಲ್ ಫೋನ್ ಆರ್ಡರ್ ಮಾಡಿದ್ದಾನೆ (ಆರ್ಡರ್ ನಂ. 1493764775) ಆತನ ಆರ್ಡರ್ ಅಂಚೆ ಮೂಲಕವಾಗಿ ಸೆ.8ನೇ ತಾರೀಖು ಆತನ ಮನೆಗೆ ತಲುಪಿದೆ. ಆತ ಆ ಬಾಕ್ಸ್ ನ್ನು ಬಹಳ ಖುಷಿ ಖುಷಿಯಿಂದಲೇ ಓಪನ್ ಮಾಡಿ ನೋಡಿದ್ದಾನೆ. ಆದರೆ ಒಳಗಿದ್ದ ವಸ್ತು ನೋಡಿದ್ದ ವಿಕ್ಕಿಗೆ ಫುಲ್ ಶಾಕ್ ಆಗ್ಬಿಟ್ಟಿದೆ ನೋಡಿ.. ಆ ಬಾಕ್ಸ್ ನಲ್ಲಿದದ್ದು ಫೋನ್ ಅಲ್ಲ ಬದಲಾಗಿ ಲಕ್ಷ್ಮೀ ಯಂತ್ರದ ರೀತಿಯಲ್ಲಿರುವ ಬೇರೋದು ವಸ್ತು…!
ಕೂಡಲೇ ಸ್ನಾಪ್‍ಡೀಲ್‍ಗೆ ಕರೆ ಮಾಡಿದ ವಿಕ್ಕಿ ನನಗೆ ಬೇರೆ ಇನ್ಯಾರದ್ದೋ ಪ್ರೋಡಕ್ಟ್ ನ್ನು ನೀಡಿದ್ದೀರ ದಯವಿಟ್ಟು ವಾಪಾಸ್ಸು ತೆಗೆದುಕೊಂಡು ಹೋಗಿ ಎಂದು ಕೇಳಿಕೊಂಡಿದ್ದಾನೆ. ಮಾರನೇ ದಿನ ಸ್ನಾಪ್‍ಡೀಲ್‍ನ ಕೋರಿಯರ್ ಹುಡುಗ ಬಂದು, ಸರ್ ನೀವು ರಾಂಗ್ ಪ್ರೊಡೆಕ್ಟ್ ರಿಸೀವ್ಡ್ ಅಂತ ಹೇಳ್ಬೇಕಿತ್ತು, ಡಿಫರೆಂಟ್ ಪ್ರೊಡೆಕ್ಟ್ ಅಂತ ಹೇಳಿದಿರಿ ಸೋ ನಾನು ತೆಗೆದುಕೊಂಡು ಹೋಗೋಕೆ ಆಗಲ್ಲ ಅಂತಾನೆ… ಈ ವೇಳೆ ಕೊರಿಯರ್ ಬಾಯ್ ಸರ್ ನೀವು ನಮಗೆ ತಪ್ಪಾದ ಮಾಹಿತಿ ನೀಡಿದ್ದೀರ ಈಗ ನಾನು ಈ ವಸ್ತುವನ್ನು ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ ಎಂದೇಳಿ ಅಲ್ಲಿಂದ ಹೊರಟು ಹೋಗಿದ್ದಾನೆ.
ವಿಕ್ಕಿ ತನಗೆ ಬಂದ ಬದಲೀ ವಸ್ತುವನ್ನು ವಾಪಸ್ಸು ತೆಗೆದುಕೊಂಡೋಗಿ ತಾನು ಆರ್ಡರ್ ಮಾಡಿದ್ದ ವಸ್ತು ತಂದುಕೊಡುವಂತೆ ಸೆ.8ರಿಂದ ಇಲ್ಲಿಯವರೆಗೂ ಅಂದರೆ ಸೆ.22ರ ವರೆಗೂ ಸ್ನಾಪ್‍ಡೀಲ್ ಕಡೆಯಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಬದಲೀ ವಸ್ತುವನ್ನು ತೆಗೆದುಕೊಂಡೋಗಿ ಎಂದು ಎಷ್ಟೋ ಬಾರಿ ಮೇಲ್ ಮಾಡಿದ್ದಾನೆ ವಿಕ್ಕಿ, ಅಷ್ಟೇ ಅಲ್ಲ ಸ್ನಾಪ್‍ಡೀಲ್ ಸಿಇಒ ಅವರಿಗೂ ತನಗಾದ ಅನ್ಯಾಯದ ಬಗ್ಗೆ ಮೇಲ್ ಮಾಡಿದ್ದಾನೆ. ಆದರೆ ಅವರಿಂದಕೂ ವಿಕ್ಕಿಗೆ ಯಾವುದೇ ರೆಸ್ಪಾನ್ಸ್ ಸಿಕ್ಕಿಲ್ಲ. ಕೂಡಲೇ ವಿಕ್ಕಿ ಸ್ನಾಪ್‍ಡೀಲ್ ಕಸ್ಟಮರ್ ಕೇರ್ ಎಕ್ಸಿಕ್ಯೂಟಿವ್‍ಗೆ ಕರೆ ಮಾಡಿದಾಗ ನಿಮದೇನು ತಪ್ಪಿಲ್ಲ ಸರ್ ಸ್ವಲ್ಪ ಮಿಸ್ಟೇಕ್ ನಮ್ಮ ಕಡೆಯಿಂದ ಆಗಿದೆ ಕೂಡಲೇ ನಿಮಗೆ ಬಂದ ವಸ್ತುವನ್ನು ವಾಪಾಸು ತರುವಂತೆ ಕೊರಿಯರ್ ಬಾಯ್‍ಗೆ ಹೇಳಿದ್ದೇವೆ ಎಂದು ಸಮಜಾಯಿಷಿ ಕೊಟ್ಟಿದ್ದಾರೆ.
ಅದೇ ದಿನ ಬಂದ ಕೊರಿಯರ್ ಬಾಯ್ ನಿಮಗಾದ ರೀತಿಯಲ್ಲೇ ಇನ್ನು ನಾಲ್ಕೈದು ಗ್ರಾಹಕರಿಗೆ ಬದಲೀ ವಸ್ತುಗಳು ಹೋಗಿವೆ ಎಂದು ಹೇಳಿದಾಗ, ಸರಿ ಇನ್ನುಳಿದ ಗ್ರಾಹಕರ ಡಿಟೇಲ್ಸ್ ಕೊಡಿ ನನಗೆ ಎಂದು ವಿಕ್ಕಿ ಕೇಳಿದ್ದಾನೆ. ಆದರೆ ಕಂಪನಿ ರೂಲ್ಸ್ ಪ್ರಕಾರ ಆ ಮಾಹಿತಿ ಕೊಡಲು ಸಾಧ್ಯವಿಲ್ಲ ಎಂದು ಕೊರಿಯರ್ ಬಾಯ್ ಹೇಳಿದ್ದಾನೆ. ಈ ವೇಳೆ ಬದಲಿನ ವಸ್ತು ಪಡೆದವರ ಲಿಸ್ಟ್ ನಲ್ಲಿ ತನ್ನ ಗೆಳೆಯನ ಹೆಸರಿದ್ದುದನ್ನು ನೋಡಿದ ವಿಕ್ಕಿ ಕೂಡಲೇ ಗೆಳೆಯನಿಗೆ ಕರೆ ಮಾಡಿದ್ದಾನೆ. ಗೆಳೆಯನೂ ಕೂಡ ರೆಡ್ಮಿ ನೋಟ್3 ಬುಕ್ ಮಾಡಿದ್ದು ಆ ದಿನ ನನಗೂ ಬದಲೀ ವಸ್ತು ಬಂದಿದೆ ಎಂದು ಹೇಳಿಕೊಂಡಿದ್ದಾನೆ. ಆದರೆ ಇಂದಿಗೂ ವಿಕ್ಕಿ ತಾನು ಬುಕ್ ಮಾಡಿದ್ದ ವಸ್ತು ಬರಲಿಲ್ಲ ಎಂದು ಪ್ರತಿ ದಿನ ಸ್ನಾಪ್‍ಡೀಲ್ ಬಳಿ ಕೇಳಿಕೊಂಡರೂ ಅದಕ್ಕೆ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಅನ್ನೋದೆ ದುರಾದೃಷ್ಟ ಸಂಗತಿ..
ಇದೀಗ ವಿಕ್ಕಿ ಸ್ನಾಪ್‍ಡೀಲ್‍ನ ಕಾರ್ಯ ವೈಖರಿ ಹೇಗಿದೆ..? ಗ್ರಾಹಕರಿಗೆ ಯಾವೆಲ್ಲಾ ರೀತಿಯಲ್ಲಿ ಮೋಸ ಮಾಡ್ತಾ ಇದಾರೆ ಅನ್ನೋ ಸಂಪೂರ್ಣ ಮಾಹಿತಿಯನ್ನೂ ಅನ್‍ಬಾಕ್ಸಿಂಗ್ ವಿಡಿಯೋ ಫೂಟೇಜ್ ಸಹಿತ ಫೆಸ್‍ಬುಕ್‍ನಲ್ಲಿನ ಹರಿ ಬಿಟ್ಟಿದ್ದಾನೆ.

14333728_1190758970982855_6066588543550934541_n 14344147_1190758397649579_7858627632095442567_n 14352149_1190758107649608_168994517942450188_o 14446159_1190758110982941_8419871308464261742_n

 

Like us on Facebook  The New India Times

POPULAR  STORIES :

ಐಫೋನ್-7 ಮೋಬೈಲ್‍ನ ಕೋಕ ಕೋಲದಲ್ಲಿ ಹಾಕಿ ಫ್ರೀಜರ್‍ನಲ್ಲಿ ಇಟ್ಟ ಮುಂದೇನಾಯ್ತು ಗೊತ್ತಾ.?

ಕಾವೇರಿಗಾಗಿ ಮಣ್ಣು ತಿಂದು ವಿನೂತನ ಪ್ರತಿಭಟನೆ..!

ಬೈಕ್‍ನಲ್ಲಿ ಸ್ಟಂಟ್ ಪ್ರದರ್ಶನ ಮಾಡುವ ಯುವಕರೇ ಎಚ್ಚರಾ… ಎಚ್ಚರ…!

ಚಲಿಸುತ್ತಿರುವ ಕಾರಿನಲ್ಲೇ ಯುವತಿಯರ ‘ಕಿಸ್ಸಿಂಗ್ ಕಿಸ್ಸಿಂಗ್’… ಆರ್.ಟಿ ನಗರದಲ್ಲಿ ಸರಣಿ ಅವಘಡ..!

ಚೀನಾ ತನ್ನ ದೇಶದ 6 ವರ್ಷದ ಮಕ್ಕಳನ್ನು ಭವಿಷ್ಯದ ಒಲಿಂಪಿಕ್ ದಿಗ್ಗಜರನ್ನು ಮಾಡಲು ಕೊಡುವ ಕಠಿಣ ತರಬೇತಿ..!

ತಾಮ್ರದ ಪಾತ್ರೆಯಲ್ಲಿ ಕೂಡಿಟ್ಟ ನೀರನ್ನು ಸೇವಿಸುವುದು ಉತ್ತಮ ಯಾಕೆ..?

ಗ್ರೀನ್ ಟೀ ಹುಚ್ಚು ನಿಮಗೂ ಇದೆಯಾ?

 

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...