ಉಗ್ರರ ವಿರುದ್ದ ನಾವು ಯಾವ ಅಸ್ತ್ರ ಪ್ರಯೋಗಿಸಬೇಕು ಗೊತ್ತಾ: ಸೆಹ್ವಾಗ್

Must read

ಉರಿ ಸೇನಾ ನೆಲೆಯ ಮೇಲೆ ಸೆ. 18 ರಂದು ಉಗ್ರರು ನಡೆಸಿದ ಪೈಶಾಚಿಕ ಕೃತ್ಯಕ್ಕೆ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗ್ತಾ ಇದೆ.. ನಮ್ಮ ರಾಷ್ಟ್ರ 18 ಧೀರ ಯೋಧರು ಈ ಉಗ್ರರ ದಾಳಿಗೆ ಹುತಾತ್ಮರಾಗಿದ್ದು ಟ್ವಿಟರ್, ಫೇಸ್ಬುಕ್‍ಗಳಲ್ಲಿ ಭಾರೀ ಚರ್ಚೆಗಳು ಉಂಟಾಗಿದೆ. ಸಿನಿಮಾ ತಾರೆಯರು, ರಾಜಕೀಯ ಮುಖಂಡರು, ಹಾಗೂ ಕ್ರೀಡಾ ಸ್ಪರ್ಧಿಗಳು ತಮ್ಮ ತಮ್ಮ ಅನಿಸಿಕೆಗಳನ್ನ ಟ್ವಿಟರ್‍ಗಳ ಮೂಲಕ ಹೇಳಿಕೊಂಡಿದ್ದಾರೆ. ಅದೇ ರೀತಿಯಾಗಿ ಭಾರತ ಕ್ರಿಕೇಟ್ ತಂಡದ ಸ್ಪೋಟಕ ಬ್ಯಾಟ್ಸ್ ಮನ್ ಹಾಗೂ ನೇರ ಮಾತುಗಾರ ವಿರೇಂದ್ರ ಸೆಹ್ವಾಗ್ ತಮ್ಮ ಟ್ವಿಟರ್ ಖಾತೆಯಲ್ಲಿ ಉಗ್ರರ ಕುರಿತು ಹೀಗೆ ಹೇಳಿದ್ದಾರೆ. ಅಂತರ್‍ರಾಷ್ಟ್ರಿಯ ಶಾಂತಿಯ ದಿನದಂದು ನಾವೆಲ್ಲಾ ಶಾಂತಿಯನ್ನು ಕಾಪಾಡುವುದು ಬಹಳ ಮುಖ್ಯ. ಆದ್ದರಿಂದ ಇಡೀ ವಿಶ್ವವೇ ಶಾಂತಿಯಿಂದ ಇರಬೇಕಾದರೆ ನಮ್ಮಲ್ಲಿ ಮೊದಲು ಶಾಂತಿ ಕಾಪಾಡಿಕೊಳ್ಳಬೇಕು ಎಂದಿದ್ದಾರೆ.
ಅಷ್ಟೆ ಅಲ್ಲ “ಯಾರು ನಮ್ಮನ್ನು ದ್ವೇಷದಿಂದ ನೋಡುತ್ತಾರೋ ಅವರನ್ನು ನಾವು ಪ್ರೀತಿಯಿಂದ ಕಾಣೋಣ ಅವರನ್ನು ನೋಡಿ ನಾವು ದ್ವೇಷಿಸೋ ಬದಲಿಗೆ ಒಂದು ಪ್ರೀತಿಯ ನಗೆ ಬೀರೋಣ” ಎಂದು ಟ್ವೀಟ್ ಮಾಡಿದ್ದಾರೆ. ಅಲ್ಲದೇ ಅವರು ನಮ್ಮ ಮೇಲೆ ಬಾಂಬ್ ದಾಳಿ ಮಾಡಿರಬಹುದು ಅದಕ್ಕೆ ಪ್ರತೀಕವಾಗಿ ನಾವು ಹೂವಿನ ಬಾಂಬ್ ನೀಡೋಣ. ಆಗಲೇ ನಾವು ಶಾಂತಿ ಕಾಪಾಡಲು ಸಾಧ್ಯ ಎಂದು ಟ್ವೀಟ್ ಮಾಡಿದ್ದಾರೆ. ವಿರೇಂದ್ರ ಸೆಹ್ವಾಗ್ ಅವರ ಟ್ವೀಟ್‍ಗೆ ಭಾರೀ ಪ್ರಮಾಣದ ಮೆಚ್ಚುಗೆ ವ್ಯಕ್ತವಾಗಿದ್ದು, ನೆರೆಯ ರಾಷ್ಟ್ರ ಪಾಕಿಸ್ಥಾನದ ಪ್ರಜೆಯಾದ ಅಬ್ದುಲ್ಲಾ ಎಂಬಾತ ಸೆಹ್ವಾಗ್ ಅವರ ಮಾತಿಗೆ ಹ್ಯಾಟ್ಸಾಫ್ ಎಂದಿದ್ದಾರೆ.

sehwag-nailed-it

Like us on Facebook  The New India Times

POPULAR  STORIES :

ಐಫೋನ್-7 ಮೋಬೈಲ್‍ನ ಕೋಕ ಕೋಲದಲ್ಲಿ ಹಾಕಿ ಫ್ರೀಜರ್‍ನಲ್ಲಿ ಇಟ್ಟ ಮುಂದೇನಾಯ್ತು ಗೊತ್ತಾ.?

ಕಾವೇರಿಗಾಗಿ ಮಣ್ಣು ತಿಂದು ವಿನೂತನ ಪ್ರತಿಭಟನೆ..!

ಬೈಕ್‍ನಲ್ಲಿ ಸ್ಟಂಟ್ ಪ್ರದರ್ಶನ ಮಾಡುವ ಯುವಕರೇ ಎಚ್ಚರಾ… ಎಚ್ಚರ…!

ಚಲಿಸುತ್ತಿರುವ ಕಾರಿನಲ್ಲೇ ಯುವತಿಯರ ‘ಕಿಸ್ಸಿಂಗ್ ಕಿಸ್ಸಿಂಗ್’… ಆರ್.ಟಿ ನಗರದಲ್ಲಿ ಸರಣಿ ಅವಘಡ..!

ಚೀನಾ ತನ್ನ ದೇಶದ 6 ವರ್ಷದ ಮಕ್ಕಳನ್ನು ಭವಿಷ್ಯದ ಒಲಿಂಪಿಕ್ ದಿಗ್ಗಜರನ್ನು ಮಾಡಲು ಕೊಡುವ ಕಠಿಣ ತರಬೇತಿ..!

ತಾಮ್ರದ ಪಾತ್ರೆಯಲ್ಲಿ ಕೂಡಿಟ್ಟ ನೀರನ್ನು ಸೇವಿಸುವುದು ಉತ್ತಮ ಯಾಕೆ..?

ಗ್ರೀನ್ ಟೀ ಹುಚ್ಚು ನಿಮಗೂ ಇದೆಯಾ?

- Advertisement -spot_img

More articles

- Advertisement -spot_img

Latest article