2018ನೇ ಸಾಲಿನ ಆಸ್ಕರ್ ಪ್ರಶಸ್ತಿ ಪ್ರಕಟಗೊಂಡಿದೆ. ದ ಶೇಪ್ ಆಫ್ ವಾಟರ್ ಅತ್ಯುತ್ತಮ ಚಿತ್ರವಾಗಿ ಪ್ರಶ್ತಿಯನ್ನು ತನ್ನದಾಗಿಸಿಕೊಂಡಿದೆ. ಈ ಸಿನಿಮಾದ ನಿರ್ದೇಶಕ ಗಿಲ್ಲೆರ್ಮೋ ಡೆಲ್ ಟೊರೊ ಈ ಸಿನಿಮಾದ ನಿರ್ದೇಶನಕ್ಕಾಗಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದಿದ್ದಾರೆ. ಈ ಚಿತ್ರದ ನಿರ್ಮಾಪಕರು ಜೆ. ಮಿಲ್ಸ್. ದ ಶೇಪ್ ಆಫ್ ವಾಟರ್ ಅತ್ಯುತ್ತಮ ಚಿತ್ರ ಪ್ರಶಸ್ತಿ ಸೇರಿದಂತೆ ನಾಲ್ಕು ವಿಭಾಗಗಳಲ್ಲಿ ಪ್ರಶಸ್ತಿ ಪಡೆದಿದೆ.
ಶೀತಲ ಯುದ್ಧದ ಫ್ಯಾಂಟಸಿ ಚಿತ್ರವಾಗಿರುವ ಈ ಸಿನಿಮಾದಲ್ಲಿ ಸ್ಯಾಲ್ಲಿ ಹಾಕಿನ್ಸ್ ಮೂಕ ದ್ವಾರಪಾಲಕಿಯಾಗಿ ನಟಿಸಿದ್ದಾರೆ.
ಅತ್ಯುತ್ತಮ ಒರಿಜನಲ್ ಸ್ಕೋರ್ ಕೂಡ ಶೇಪ್ ಆಫ್ ವಾಟರ್ ಗೆ ಹೋಗಿದೆ.
ತ್ರಿ ಬಿಲ್ ಬೋರ್ಡ್ಸ್ ಔಟ್ ಸೈಡ್ ಎಬ್ಬಿಂಗ್ , ಮಿಸ್ಸೌರಿ ಸಿನಿಮಾದ ನಾಯಕಿ ಫ್ರಾನ್ಸೆಸ್ ಮೆಕ್ಡೋರ್ಮಂಡ್ ಈ ವರ್ಷದ ಅತ್ಯುತ್ತಮ ನಟಿಯಾಗಿ ಮತ್ತು ಡಾರ್ಕೆಸ್ಟ್ ಅವರ್ ಚಿತ್ರದ ನಟನೆಗೆ ಗ್ಯಾರಿ ಓಲ್ಡ್ಮನ್ ಅತ್ಯುತ್ತಮ ನಟನಾಗಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಬ್ಲೇಡ್ ರನ್ನರ್ 2049 ಸಿನಿಮಾದ ಛಾಯಗ್ರಹಣಕ್ಕೆ ರೋಜರ್ ಡೀಕಿನ್ಸ್ ಅವರಿಗೆ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತ ಸಿಕ್ಕಿದೆ.