ಸಾಮಾನ್ಯ ಬೀಡಾ ವ್ಯಾಪಾರಿಯ ಅಕೌಂಟ್‍ನಲ್ಲಿತ್ತು ಬರೋಬ್ಬರಿ 10 ಕೋಟಿ ಹಣ..!

Date:

ಈತನಿಗೆ ಸಾಮಾನ್ಯ ಬೀಡಾ ವ್ಯಾಪಾರಿ ಅನ್ಬೇಕೋ.. 10 ಕೋಟಿಗೆ ಒಡೆಯ ಅಥವಾ 10 ಕೋಟಿಯ ಶ್ರೀಮಂತ ಪಾನ್ ಬೀಡಾ ವ್ಯಾಪಾರಿ ಅನ್ಬೇಕೋ ಒಂದೂ ಗೊತ್ತಾಗ್ತಾ ಇಲ್ಲ.. ಯಾಕಂದ್ರೆ ಈ ಬೀಡಾ ವ್ಯಾಪಾರಿಯ ಬ್ಯಾಂಕ್ ಖಾತೆಯಲ್ಲಿದ್ದದ್ದು ಒಂದಲ್ಲಾ ಎರಡಲ್ಲಾ ಬರೋಬ್ಬರಿ 10 ಕೋಟಿ..!
ಅರೆ ಒಬ್ಬ ಸಾಮಾನ್ಯ ಬೀಡಾ ವ್ಯಾಪಾರಿ ಬಳಿ ಇಷ್ಟೊಂದು ಹಣ ಹೇಗೆ ಎಂಬ ಪ್ರಶ್ನೆ ನಿಮ್ಮಲಿದ್ರೆ ಈ ಸ್ಟೋರಿ ಓದಿ. ಪಾಟ್ನಾದ ಬೀದಿ ಬದಿ ಬೀಡಾ ವ್ಯಾಪಾರ ಮಾಡುವ ಪಪ್ಪು ಕುಮಾರ್ ತಿವಾರಿ ಎಂಬಾತನ ಎಸ್‍ಬಿಐ ಅಕೌಂಟ್‍ಗೆ ರಾತ್ರೋ ರಾತ್ರಿ 99.99 ಕೋಟಿ ಹಣ ಜಮಾವಾಗಿದೆ. ಪಪ್ಪು ತಿವಾರಿ ಎಟಿಎಂಗೆ 1000 ರೂ ಹಣ ಬಿಡಿಸಲು ಹೋದಾಗ, ಆತನಿಗೆ ಹಣ ಸಿಕ್ಕಿಲ್ಲ. ತನ್ನ ಖಾತೆಯಲ್ಲಿ 4850 ರೂ ಹಣವಿದೆ ಎಂದೇ ಭಾವಿಸಿದ್ದ ಆತ ಸೀದಾ ಹತ್ತಿರದ ಬ್ಯಾಂಕ್‍ಗೆ ಹೋಗಿ ಮಾಹಿತಿ ನೀಡಿದ್ದಾನೆ. ನನ್ನ ಅಕೌಂಟ್‍ನಲ್ಲಿ 4850 ರೂ ಇದ್ದರೂ 1000 ಹಣ ಬರುತ್ತಿಲ್ಲ ಎಂದು ಪ್ರಶ್ನೆ ಮಾಡಿದಾಗ ಬ್ಯಾಂಕ್ ಸಿಬ್ಬಂಧಿ ನೀಡಿದ ಉತ್ತರಕ್ಕೆ ಒಂದು ಕ್ಷಣ ಧಂಗಾಗಿ ಹೋಗಿದ್ದಾನೆ..! ಅಷ್ಟೆ ಅಲ್ಲ ಸ್ವತಃ ಬ್ಯಾಂಕ್ ಸಿಬ್ಬಂದಿಗೇ ಅಚ್ಚರಿಯಾಗಿದೆ..! ನಿಮ್ಮ ಖಾತೆಯಲ್ಲಿ 10 ಕೋಟಿ ಹಣ ಜಮಾವಾಗಿದ್ದು, ನಿಮ್ಮ ಅರಿವಿಗೆ ಬಾರದೆ ಅಷ್ಟೊಂದು ಹಣ ಎಲ್ಲಿಂದ ಬಂತು ಎಂದು ವಿಚಾರಣೆ ನಡೆಸಿದ್ದಾರೆ. ತನ್ನ ಅರಿವಿಲ್ಲದೆ ಖಾತೆಯಲ್ಲಿ ಇಷ್ಟು ದೊಡ್ಡ ಪ್ರಮಾಣದ ಹಣ ಜಮಾವಾದದನ್ನು ಕಂಡು ಕಂಗಾಲಾಗಿ ಹೋಗಿದ್ದಾನೆ.
ನನ್ನ ಖಾತೆಯಲ್ಲಿ 1 ಲಕ್ಷಕ್ಕಿಂತ ಅಧಿಕ ಹಣ ಎಂದೂ ಕೂಡ ನಾನು ಜಮಾ ಮಾಡಿಲ್ಲ. ನಾನು ಒಬ್ಬ ಸಾಮಾನ್ಯ ಬೀಡಾ ಮಾರಾಟಗಾರ ಇಷ್ಟೊಂದು ಪ್ರಮಾಣದ ಹಣ ಎಲ್ಲಿಂದ ಬರಲಿದೆ ಎಂದು ಹೇಳಿಕೊಂಡಿದ್ದಾನೆ. ಇನ್ನು ಪಪ್ಪು ಕುಮಾರ್ ಖಾತೆಯಲ್ಲಿ ಜಮಾವಾಗಿರುವ ಹಣದ ಸುದ್ದಿಯನ್ನು ಕೇಳಿ ಕುಟುಂಬಸ್ಥರೂ ಆತಂಕಗೊಂಡಿದ್ದಾರೆ..! ಹೈದರಾಬಾದ್ ಸೈಬರ್ ಕ್ರೈಂ ಅಧಿಕಾರಿಗಳು ಪಪ್ಪು ಕುಮಾರ್ ಅಕೌಂಟ್ ಬ್ಲಾಕ್ ಮಾಡಿದ್ದು, ಇಷ್ಟೊಂದು ಪ್ರಮಾಣ ಹಣ ಡೆಪಾಸಿಟ್ ಯಾರು ಮಾಡಿದ್ದು ಎಂಬುದರ ಕುರಿತಾಗಿ ತನಿಖೆ ನಡೆಸುತ್ತಿದ್ದಾರೆ.

Like us on Facebook  The New India Times

POPULAR  STORIES :

ವಾಟ್ಸಾಪ್‍ನಿಂದ 10 ವರ್ಷದ ಲವ್ ಬ್ರೇಕಪ್..!

ಬಿಗ್‍ಬಾಸ್ ಸದಸ್ಯರ ಬಗ್ಗೆ ಜನ ಏನ್ ಹೇಳ್ತಾರೆ…?

ಕಿಚ್ಚ ಸುದೀಪ್‍ಗೆ ಕ್ಷಮೆಯಾಚಿಸಿದ ಹುಚ್ಚಾ ವೆಂಕಟ್..!

ಇನ್ಮೇಲೆ ಪೆಟ್ರೋಲ್ ಬಂಕ್‍ನಲ್ಲೂ ಹಣ ವಿತ್ ಡ್ರಾ ಮಾಡ್ಬೋದು.

ಹುಚ್ಚಾ ವೆಂಕಟ್ ಮೇಲೆ ಕಿಚ್ಚ ಸುದೀಪ್ ಗರಂ..!

30ನಿಮಿಷ ಕೋಕಾ ಕೋಲದಲ್ಲಿ ಹೊಸ 2000ರೂ ನೋಟನ್ನು ಮುಳುಗಿಸಿದರೆ ಏನಾಗುತ್ತೆ ಗೊತ್ತಾ.?

Share post:

Subscribe

spot_imgspot_img

Popular

More like this
Related

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ ಇತ್ತೀಚಿನ ದಿನಗಳಲ್ಲಿ ಮೌತ್‌ವಾಶ್...

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...