ಪ್ರೀತಿಗೆ ಬೆಂಕಿಯಿಟ್ಟ ಪಾಗಲ್ ಪ್ರೇಮಿ..! ಪ್ರೀತಿ `ಬೆಂಕಿ' ಹುಷಾರು..!?

Date:

 
ಅವರಿಬ್ಬರು ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಪ್ರೀತಿಸುತ್ತಿದ್ದರು. ಅವಳಿಗೆ ಹೋಲಿಸಿದರೇ ಅವನು ಪಾಗಲ್ ಪ್ರೇಮಿ. ಆದರೆ ಅವರಿಬ್ಬರ ಪ್ರೇಮದ ವಿಚಾರ ಹುಡುಗಿಯ ಹೆತ್ತವರಿಗೆ ತಿಳಿಯಿತು. ಹೆದರಿದ ಅವರಿಬ್ಬರು ಮನೆಬಿಟ್ಟು ಮೈಸೂರಿಗೆ ಓಡಿಹೋಗಿದ್ದರು. ಹೊಡೆದು ಬಡಿದು ಮಾಡಿದರೆ ಸಮಸ್ಯೆ ಹೆಚ್ಚಾಗುತ್ತದೆ ಎಂದು ಭಾವಿಸಿದ ಅವರ ಹೆತ್ತವರು ಕಾಲೇಜು ವಿದ್ಯಾಭ್ಯಾಸ ಮುಗಿಸಿದ ನಂತರ ಮದುವೆಯಾಗಿ ಎಂದು ಅವರಿಬ್ಬರ ಪ್ರೀತಿಗೆ ಸಮ್ಮತಿಯನ್ನು ಕೊಟ್ಟಿದ್ದರು. ನಾಲ್ಕು ವರ್ಷದಿಂದ ಪ್ರೀತಿಸುತ್ತಿದ್ದ ಪ್ರೇಮಿಗಳಿಗೆ ಹಿರಿಯರ ಒಪ್ಪಿಗೆ ಸಿಕ್ಕಿದ್ದು ಅಪಾರ ಸಂತಸವನ್ನು ತಂದಿತ್ತು. ಈ ನಡುವೆ ಪ್ರಿಯತಮೆ ಪ್ರಿಯಕರನಿಗೂ ಪದವಿ ಮುಗಿಸಿ ಕೆಲಸಕ್ಕೆ ಸೇರಿಕೊಳ್ಳುವಂತೆ ಹೇಳುತ್ತಾಳೆ. ಆದರೆ ಇದಾಗಿ ಕೆಲವೇ ದಿನಕ್ಕೆ ಪ್ರೇಮಿಗೆ ಪ್ರಿಯತಮೆಯ ಮೇಲೆ ಸಂಶಯ ಹುಟ್ಟಿಕೊಂಡಿತ್ತು. ಎಲ್ಲಿ ನನ್ನವಳು ಕೈ ತಪ್ಪಿ ಹೋಗುತ್ತಾಳೋ ಎಂದು ಆತಂಕಕ್ಕೀಡಾದ. ಈ ವಿಚಾರವಾಗಿ ಅವಳ ಬಳಿ ಜಗಳ ಕಾಯುತ್ತಿದ್ದ. ಪ್ರಿಯಕರನ ನಡುವಳಿಕೆಯಿಂದ ಅವಳು ಬೇಸತ್ತಳು. ಅವನಿಗೆ ಬುದ್ಧಿ ಬರಲಿ ಎಂದು ದೂರವಿಡತೊಡಗಿದಳು. ಇದರಿಂದ ಮತ್ತಷ್ಟು ಖಿನ್ನನಾದ ಆತ ಅದೊಂದು ರಾತ್ರಿ ಪ್ರಿಯತಮೆಯ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ. ಈ ಅನಾಹುತದಲ್ಲಿ ಪ್ರಿಯತಮೆ, ಅವಳ ತಂಗಿ, ತಂದೆ, ತಾಯಿಗೆ ಘಾಸಿಯಾಗುತ್ತದೆ. ಶೇಕಡಾ ಐವತ್ತರಷ್ಟು ಬೆಂಕಿಯಿಂದ ಸುಟ್ಟಿದ್ದ ಪ್ರಿಯತಮೆಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿತ್ತು. ಪ್ರೀತಿ ಎಂಬ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದ್ದ ಅವಳು ಕಡೆಗೂ ಬದುಕಿ ಬರಲಿಲ್ಲ. ನರಳಿ ನರಳಿ ಸತ್ತಳು. ಈ ಪಾಗಲ್ ಪ್ರೇಮಿ ಜೈಲುಪಾಲಾದ.

ಅಂದಹಾಗೆ ಇದು ವಾರದ ಹಿಂದೆ ಬೆಂಗಳೂರಿನ ಶ್ರೀರಾಂಪುರದಲ್ಲಿ ನಡೆದ ನೈಜ ಘಟನೆ. ಪ್ರೀತಿಯ ಬೆಂಕಿಗೆ ಸಿಲುಕಿ ಸಾವಿಗೀಡಾದ ಆಕೆಯ ಹೆಸರು ಮೇಘನಾ. ಪ್ರೀತಿಯನ್ನು ಬೆಂಕಿಯಿಂದ ಸುಟ್ಟು ಜೈಲುಪಾಲಾದ ಇವನ ಹೆಸ್ರು ದೀಪಕ್. ಪ್ರೀತಿ ಮಾಯೆ ಹುಷಾರು ಎಂಬ ಮಾತಿದೆ. ಇವರ ವಿಚಾರದಲ್ಲಿ ಪ್ರೀತಿ ಬೆಂಕಿ ಹುಷಾರು ಎನ್ನುವಂತಾಗಿದೆ. ಪ್ರೀತಿ, ಪ್ರೇಮದ ಅಮಲಿನಲ್ಲಿ ತೇಲುವ ಪ್ರೇಮಿಗಳಿಗೆ ಇಂತಹ ಘಟನೆಗಳು ಪಾಠವಾಗಬೇಕು.

  •  ರಾ ಚಿಂತನ್

POPULAR  STORIES :

ಪಾಕ್ ನಲ್ಲೂ ಹೋಳಿ, ದೀಪಾವಳಿಗೆ ಸಾರ್ವತ್ರಿಕ ರಜೆ..!

ಸ್ವಲ್ಪ ನಿದ್ರೆಭಾಗ್ಯವನ್ನೂ ಕರುಣಿಸಿ, ಪ್ಲೀಸ್…!

ಥರ್ಡ್ ವರ್ಲ್ಡ್ ವಾರ್ ಗೆ ಕೊರಿಯ ಫೌಂಡೇಶನ್..!?

ಬೆತ್ತಲಾದ ಓವೈಸಿ.. ಬಟ್ಟೆ ಮುಚ್ಚಿಕೊಂಡ ಅಫ್ರಿದಿ..!!

ಪೆಟ್ರೋಲ್ ರೇಟು.. ಮೋದಿ ಏಟು..!? ಒಂದು ಲೀಟರ್ ಪೆಟ್ರೋಲ್ಗೆ ಹನ್ನೆರಡು ರೂಪಾಯಿ..?!!

ಅಬ್ಬಾ ಜಸ್ಟ್ ಮಿಸ್..! ಈ ಮಹಿಳೆಯರ ಅದೃಷ್ಟ ನೆಟ್ಟಗಿತ್ತು..! ಇಲ್ದೇ ಹೋಗಿದ್ರೆ?

ನಾಯಿ, ಬೆಕ್ಕುಗಳು ಮತ್ತು ಇಸ್ಲಾಂ ರಾಷ್ಟ್ರ..!?

ಭಿಕ್ಷೆ ಹಾಕದ ಆ ಹುಡುಗ ಅದೆಂಥಾ ಕಷ್ಟದಲ್ಲಿದ್ದ ಗೊತ್ತಾ..?! ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡ್ಬೇಕು..!

ನಮ್ಮನೆ ಒಂದು ದೇಶ, ಎದುರುಮನೆ ಮತ್ತೊಂದು ದೇಶ..! ಬೆರಗುಗೊಳಿಸುವ ಅಂತರರಾಷ್ಟ್ರೀಯ ಗಡಿಗಳು..

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...