ಇಷ್ಟು ದಿನ ಎಲ್ಲರೂ ಸ್ವಿಸ್ ಬ್ಯಾಂಕ್ ನಲ್ಲಿ ಕೋಟಿಗಟ್ಟಲೇ ಕಪ್ಪು ಹಣ ಇದೇ ಎಂದು ಹೇಳುತ್ತ ಬರುತ್ತಿದ್ದರು. ಆದರೆ ಅದಕ್ಕಿಂತ ಹೆಚ್ಚಿನದಾಗಿ ಕಪ್ಪುಹಣ ಬಚ್ಚಿಟ್ಟಿರೋದು ಈಗ ಬಹಿರಂಗವಾಗಿದೆ. ವಿಶ್ವದ ಶ್ರೀಮಂತರು ಭಾರೀ ಪ್ರಮಾಣದ ಕಪ್ಪು ಹಣವನ್ನು ಪನಾಮಾದಲ್ಲಿ ಇರಿಸಿರುವುದನ್ನು “ಪನಾಮಾ ದಾಖಲೆಪತ್ರಗಳು’ ಬಹಿರಂಗಪಡಿಸಿವೆ. ಅದರಲ್ಲಿ ವಿಶ್ವದ ಅನೇಕ ಗಣ್ಯರ ಹೆಸರುಗಳು ಹೊರ ಬಿದ್ದಿದ್ದು, ಭಾರತದ 500ಕ್ಕೂ ಹೆಚ್ಚು ಶ್ರೀಮಂತರ ಹೆಸರುಗಳು ಹೊರ ಬಂದಿವೆ.
ಅವರಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್, ನಟಿ ಐಶ್ವರ್ಯಾ ರೈ ಬಚ್ಚನ್, ಉದ್ಯಮಿ ಕೆ ಪಿ ಸಿಂಗ್, ಇಂಡಿಯಾ ಬುಲ್ಸ್ ಮಾಲಿಕ ಸಮೀರ್ ಗೆಹಲೋತ್ ಹೆಸರುಗಳು ಸೇರಿದಂತೆ ಮೊದಲಾದವರು ಸೇರಿರುವುದಾಗಿ ವರದಿಯಾಗಿದೆ. ಸುಮಾರು 500ಕ್ಕೂ ಹೆಚ್ಚು ಭಾರತೀಯರ ಹೆಸರುಗಳು ಪನಾಮಾ ಕಪ್ಪು ಹಣ ಸಿರಿವಂತರ ದಾಖಲೆ ಪತ್ರಗಳ ಪಟ್ಟಿಯಲ್ಲಿ ಕಂಡು ಬಂದಿದೆ ಎಂದು ದೈನಂದಿನ ಪತ್ರಿಕೆಯೊಂದು ಬಹಿರಂಗ ಪಡಿಸಿದೆ. ಪನಾಮಾ ಪೇಪರ್ ಎಂದೇ ಖ್ಯಾತವಾಗಿರುವ ವಿಶ್ವದಾದ್ಯಂತ ಸಿರಿವಂತರ ಕಪ್ಪು ಹಣದ ರಹಸ್ಯಗಳನ್ನು ಒಳಗೊಂಡ ದಾಖಲೆಪತ್ರಗಳು ಪನಾಮಾ ಮೂಲದ ಮೊಸಾಕ್ ಫೋನೆಸ್ಕಾ ಸಂಗ್ರಹಿಸಿರುವ 11.5 ಮಿಲಿಯನ್ ದಾಖಲೆ ಪ್ರಕಾರ ಅನೇಕ ಗಣ್ಯಾತಿಗಣ್ಯರ ವಿದೇಶಿ ಗುಪ್ತನಿಧಿ ಖಾತೆಗಳ ವಿವರ ಹೊರಬೀಳುವ ಸಾಧ್ಯತೆಯಿದೆ. ಸುಮಾರು 35 ದೇಶಗಳಲ್ಲಿ ತನ್ನ ಕೇಂದ್ರವನ್ನು ಮೊಸಾಕ್ ಸಂಸ್ಥೆ ಹೊಂದಿದ್ದು ಸಾವಿರಾರು ಕೋಟಿ ಹಣವನ್ನ ಇರಿಸಿದ್ದಾರೆ ಎಂದು ತಿಳಿದುಬಂದಿದೆ.
ಸಧ್ಯ ಈ ದಾಖಲೆಪತ್ರಗಳಿಂದ ಸಿಕ್ಕಿರೋ ಮಾಹಿತಿ ಪ್ರಕಾರ, ಭಾರತದ ಸುಮಾರು 140ಕ್ಕೂ ಹೆಚ್ಚು ರಾಜಕಾರಣಿಗಳು ಪನಾಮಾದಲ್ಲಿ ಕೋಟಿಗಟ್ಟಲೆ ಕಪ್ಪು ಹಣವನ್ನು ಇರಿಸಿದ್ದಾರೆ. ಇವರಲ್ಲಿ ಕನಿಷ್ಠ 12 ಮಂದಿ ಹಾಲಿ ಹಾಗೂ ಮಾಜಿ ಸಚಿವರುಗಳೇ ಎಂಬ ಮಾಹಿತಿ ಸಿಕ್ಕಿದೆ. ತೆರಿಗೆದಾರ ಸ್ವರ್ಗ ಎನಿಸಿಕೊಂಡಿರುವ ದೇಶಗಳಲ್ಲಿ ಸಾಗರೋತ್ತರ ಕಂಪೆನಿಗಳನ್ನು ಹುಟ್ಟು ಹಾಕಿ ಅವುಗಳ ಮೂಲಕ ತಮ್ಮ ದೇಶಗಳಲ್ಲಿ ವ್ಯಾಪಾರ ವಹಿವಾಟು ನಡೆಸಿ ತೆರಿಗೆ ರಿಯಾಯಿತಿ ಇತ್ಯಾದಿ ಲಾಭ ಪಡೆದುಕೊಂಡು, ತಮ್ಮ ಸಂಪತ್ತನ್ನು ಆ ದೇಶಗಳಲ್ಲಿ ಶೇಖರಿಸಿಡುವುದು ಸಾಮಾನ್ಯವಾಗಿ ಅನುಸರಿಸಲಾಗುತ್ತಿರುವ ಉಪಾಯವಾಗಿದೆ.
ಇನ್ನು ಈ ಪಟ್ಟಿಯಲ್ಲಿ ವಿಶ್ವದ ಗಣ್ಯವ್ಯಕ್ತಿಗಳಾದ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಪಾಕಿಸ್ತಾನ ಪ್ರಧಾನಮಂತ್ರಿ ನವಾಜ್ ಶರೀಫ್, ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಹೆಸರುಗಳು ಸೇರಿವೆ. ಹಾಗೇ ಭಾರತದ ಅಮಿತಾಬ್ ಅವರು 1993ರಲ್ಲಿ ಸ್ಥಾಪನೆಯಾದ ನಾಲ್ಕು `ಆಫ್ ಶೋರ್ ಶಿಪ್ಪಿಂಗ್’ ಕಂಪನಿಗಳ ನಿರ್ದೇಶಕರಾಗಿದ್ದಾರೆ. ಐಶ್ವರ್ಯಾ ರೈ ಬಚ್ಚನ್ ಅವರು ತಮ್ಮ ಕುಟುಂಬಸ್ಥರು 2005ರಲ್ಲಿ ಆರಂಭಿಸಿದ ಅಮಿತ್ ಪಾಟ್ರ್ನರ್ಸ್ ಲಿಮಿಟೆಡ್ನ ನಿರ್ದೇಶಕರಾಗಿದ್ದಾರೆ. 2008ರ ನಂತರ ರೈ ಅವರು ಸಂಸ್ಥೆಯ ಶೇರುದಾರರಾದರು. ಡಿಎಲ್ಎಫ್ ಮುಖ್ಯಸ್ಥ ಕೆಪಿ ಸಿಂಗ್ ಮತ್ತು ಅವರ ಕುಟುಂಬದ 9 ಮಂದಿ ಬ್ರಿಟಿಷ್ ವರ್ಜಿನ್ ಐಲ್ಯಾಂಡ್ನಲ್ಲಿ 2010ರಲ್ಲಿ ಒಂದು ಕಂಪನಿಯನ್ನು ಖರೀದಿಸಿದ್ದು, 10 ಮಿಲಿಯನ್ ಡಾಲರ್ಗೂ ಅಧಿಕ ಮೌಲ್ಯದ ವಹಿವಾಟು ಹೊಂದಿದ್ದಾರೆ. ಜೊತೆಗೆ ಇಕ್ಬಾಲ್ ಮಿರ್ಚಿ, ಅದಾನಿ ಸಹೋದರ ವಿನೋದ್ ಅದಾನಿ ಹೆಸರು ಪಟ್ಟಿಯಲ್ಲಿ ಇದೆ ಎಂಬುದಾಗಿ ವರದಿಯಾಗಿದೆ.
ಪನಾಮ ಹಗರಣವನ್ನು ಒಂದೇ ಮಾತಲ್ಲಿ ಹೇಳೋದಾದ್ರೆ ಪಕ್ಕಾ ತೆರಿಗೆ ವಂಚನೆ. ಅಂದ್ರೆ ದೇಶದಲ್ಲಿ ಕಂಪನಿಗಳನ್ನ ತೆರೆದು, ತೆರಿಗೆಯನ್ನ ಸರ್ಕಾರಕ್ಕೆ ಕಟ್ಟಬೇಕಿರುತ್ತೆ. ಆದ್ರೆ ಈ ಕಂಪನಿಗಳು ಹಲವಾರು ಕಾರಣಗಳನ್ನ ಮುಂದಿಕ್ಕಿ ತೆರಿಗೆಯಿಂದ ವಿನಾಯತಿ ಪಡೆದುಕೊಳ್ಳುತ್ತಾರೆ. ಅವರು ಪಡೆದ ವಿನಾಯತಿ ಹಣವನ್ನ ವಿದೇಶಿ ಬ್ಯಾಂಕ್ಗಳಲ್ಲಿ ಜಮೆ ಮಾಡುತ್ತಾರೆ. ಈ ರೀತಿ ಕೋಟಿಗಟ್ಟಲೆ ಹಣವನ್ನ ಇಟ್ಟಿರುವುದನ್ನು ಅಮೆರಿಕಾದ ಪನಾಮಾ ಸಂಸ್ಥೆಯೊಂದು ಬಹಿರಂಗಗೊಳಿಸಿದೆ. ಒಂದುವೇಳೆ ಹಗರಣ ಸಾಬೀತಾದರೇ ಇವ್ರೆಲ್ಲಾ ಜೈಲಿಗೆ ಹೋಗೋದಂತೂ ಗ್ಯಾರಂಟಿ..!
- ರಾ ಚಿಂತನ್.
POPULAR STORIES :
ವಿರಾಟ್ ಕೊಹ್ಲೀನಾ ಮದ್ವೆ ಆಗ್ತಾಳಂತೆ ಖಂಡಿಲ್..!? #Video
ಮೋದಿ ದೇಹದಲ್ಲಿ ಅಹ್ಮದ್ ಖಾನ್ `ಆತ್ಮ..!!’ ಮೋದಿಯಲ್ಲ, ಇಂದಿರಾ ಗಾಂಧಿಯಿದ್ದಿದ್ದರೂ ಆಗುತ್ತಿತ್ತು ಮಾರಣಹೋಮ..!!
ನಾ ಮಾಡಿದ್ದು ಸಣ್ಣಪುಟ್ಟ ತಪ್ಪುಗಳನ್ನಷ್ಟೆ..!? ನನ್ನವಳ ಪತ್ರದಲ್ಲಿ ನಿಮ್ಮೆಲ್ಲರ ಛಾಯೆ..
`ಸೆಕ್ಸ್’ ಸೈಟುಗಳ ಹಾಟ್ ವಿಚಾರ..!? ಅಶ್ಲೀಲ ಎಂಎಂಎಸ್ ಹೇಗೆಲ್ಲಾ ಸೃಷ್ಟಿಯಾಗುತ್ತೆ ಗೊತ್ತಾ..!?
ಅದು ತೇಜೋಮಹಲ್ ಅಲ್ಲ, ಶುದ್ಧ ತಾಜ್ ಮಹಲ್..! ತಾಜ್ ಮಹಲ್ ಬಗ್ಗೆ ಗೊತ್ತಿರದ ರಹಸ್ಯಗಳು..!
ಚಂದದ ನಟಿಯರೇಕೆ ಸೂಸೈಡ್ ಮಾಡ್ಕೋತಾರೆ..!?
`ಸಾಯುವ ಮನಸ್ಸೆ..! ನಿನ್ನ ಕಡೆ ನನಗಿದೆ ತಿರಸ್ಕಾರ..!!’
ಮಿಸ್ಡ್ ಕಾಲ್ ಗೆಳೆಯ..! ಅವನ ಸಾವಿನ ಜೊತೆ ಇವಳು ಒಂದಾದಳು..!?
ಪ್ರಭಾಕರ್ ಸಾವಿಗೆ ಕಾರಣವಾಗಿದ್ದು ಆ ವೈದ್ಯ..!? ಅಮ್ಮನ ಕೈ ತುತ್ತು ತಿನ್ನದೆ ಮಲಗುತ್ತಿರಲಿಲ್ಲ ಈ ಜೀವ..!