ಅಪ್ಪ, ಅಮ್ಮ ಮತ್ತು ನಾನು

Date:

ನೀವ್ ಯಾವ್ದಾರ್ ಹುಡುಗಿಯನ್ನ ಪ್ರೀತ್ಸಿದ್ರೆ ಅದನ್ನ ಅವ್ಳಿಗ್ ತಿಳ್ಸೋಕ್ಕೋಸ್ಕರ ಪ್ರಪೋಸ್ ಮಾಡ್ಬೇಕು.. ಅವ್ಳ್ ಬರ್ತ್ ಡೇಗೆ ಹನ್ನೆರಡ್ ಗಂಟೆಗೆ ಸರಿಯಾಗ್ ವಿಶ್ ಮಾಡಿ ಪ್ರೀತಿಯ ಅಗಾಧತೆಯನ್ನ ತೋರ್ಪಡಿಸಬೇಕು, ವ್ಯಾಲೆಂಟೆನ್ಸ್ ಡೇಗೆ ಲವ್ ಯೂ ಬೇಬಿ.. ನೀನೇ ನನ್ ಸರ್ವಸ್ವ ಅಂತ ಬಾಯ್ಬಿಟ್ಟು ಹೇಳಿ ಅವ್ಳನ್ ಇಂಪ್ರೆಸ್ ಮಾಡ್ಬೇಕು, ಗಿಫ್ಟ್ ಕೊಟ್ಟು ನಂದು ಟ್ರೂ ಲವ್ ಕಣೇ ಅಂತ ತೋರಿಸ್ಕೋಬೇಕು!

ಬಟ್.‌.
ಅಪ್ಪ – ಅಮ್ಮಂದಿರ ವಿಷ್ಯದಲ್ಲಿ?
ನಾನಂತೂ ಇದೂವರೆಗೂ ಅಪ್ಪ – ಅಮ್ಮನಿಗೆ ಬರ್ತ್ ಡೇ ವಿಶ್ ಮಾಡಿಲ್ಲ, ಹ್ಯಾಪಿ ಮದರ್ಸ್ ಡೇ, ಹ್ಯಾಪಿ ಫಾದರ್ಸ್ ಡೇ.. ಲವ್ ಯೂ ಮಾ.. ಲವ್ ಯೂ ಪಾ.. ಅಂತ ಹೋಗಿ ನನ್ನೊಳಗಿರೋ ಪ್ರೀತಿಯನ್ನ ಹೇಳ್ಕೊಂಡಿಲ್ಲ, ಅವ್ರು ಏನಾದ್ರೂ ಸಾಧಿಸಿದಾಗ ಕಂಗ್ರಾಟ್ಸ್ ಅಂತ ಕೈ ಕುಲುಕಿಯೂ ಇಲ್ಲ.. ಆದ್ರೂ ಅವರ್ಯಾವತ್ತೂ ಬೇಜಾರ್ ಮಾಡ್ಕೊಂಡಿಲ್ಲ.. ಬಾಯ್ಬಿಟ್ಟು ಹೇಳದಿದ್ದರೂ ಇರುತ್ತದಲ್ಲ ಆ ಲವ್ವೇ ಟ್ರೂ ಲವ್ವು! ?

ನಾನ್ ಅಪ್ಪ – ಅಮ್ಮನ ಜೊತೆ ನಡೆದುಕೊಳ್ಳೋ ರೀತಿ ತುಂಬಾ ಜನರಿಗೆ ವಿಚಿತ್ರ ಅನ್ನಿಸ್ಬೋದು..
ಊರಿಗ್ ಹೋದಾಗ ನಾನ್ ಫ್ರೆಂಡ್ಸು, ದೋಸ್ತ್ರು ಅಂತ ಗ್ಯಾಂಗ್ ಕಟ್ಕೊಂಡ್ ತಿರ್ಗೋಕ್ಕಿಂತ ಅಪ್ಪನ ಜೊತೆ ಸುತ್ತಾಡೋದೇ ಜಾಸ್ತಿ.. ಏಯ್.. ಹೋಗಾ.. ಬಾರಾ ಅಂತಾನೇ ಅಪ್ಪ – ನಾನು ಮಾತಾಡದು.. ಇವತ್ತಿಗೂ ನನ್ನಪ್ಪ ನಾ ಮಾಡೋ ಖರ್ಚಿನ ಡಿಟೇಲ್ಸ್ ಕೇಳಿಲ್ಲ.. ಹಾಗಂತ ನಮ್ಮನೆಯಲ್ಲಿ ಕೂತು ತಿಂದರೂ ಕರಗದಷ್ಟು ಸಂಪತ್ತೇನು ಇಲ್ಲ.. ಮೊನ್ನೆ ಮೊನ್ನೆಯಷ್ಟೇ ಮಾಲಿನಿ ಅತ್ತೆ ನನ್ ಜೊತೆ ಮಾತಾಡ್ಬೇಕಾದ್ರೆ “ನಿಮ್ಮಪ್ಪ ನಿನ್ನನ್ನ ಸ್ವತಂತ್ರವಾಗಿ ಬೆಳೆಸಿದ ರೀತಿ ತುಂಬಾ ಡಿಫರೆಂಟ್.. ಅದು ಸಾಮಾನ್ಯ ಅಪ್ಪಂದಿರಿಗೆ ಸಾಧ್ಯ ಆಗೋದಿಲ್ಲ” ಅಂದಾಗ ನನ್ನಪ್ಪನ ಬಗ್ಗೆ ಹೆಮ್ಮೆಯಾಗಿದ್ದು ಸುಳ್ಳಲ್ಲ..

ಇನ್ನು ನನ್ನಮ್ಮ.. ಅವಳೊಂದಿಗೆ ನನ್ನ ತಲೆಹರಟೆ, ಮುನಿಸು, ಅನುಮಾನ, ಫಿಲಾಸಫಿ ಎಲ್ಲವನ್ನೂ ಹಂಚಿಕೊಳ್ತೇನೆ.. ನಾ ಜಾಸ್ತಿ ಲವ್ ಲೆಟರ್ಸ್ ಬರೆದಾಗ ಎಲ್ರೂ “ನಿಮ್ಮನೆಯಲ್ಲಿ ಏನೂ ಹೇಳಲ್ವಾ” ಅಂತ ಆಶ್ಚರ್ಯಪಟ್ಟಿದ್ರು.. ಆದ್ರೆ ನಾ ಬರ್ದಿರೋ ಲವ್ ಲೆಟರ್ಸ್ಗಳನ್ನ ಎಲ್ಲರಿಗಿಂತ ಮೊದಲು ತೋರಿಸೋದೇ ಅಮ್ಮನಿಗೆ.. ಫೋನಲ್ಲೇ ಓದಿ ಹೇಳಿ, ಹೇಗಾಗಿದ್ಯೇ ಅಂದಾಗ.. ಅಮ್ಮ ಅವಳಿಗೆ ತೋಚಿದಷ್ಟು ಸಲಹೆಗಳನ್ನ ಕೊಟ್ಟು.. ಕೊನೆಯಲ್ಲಿ ಲವ್ ಲೆಟರ್ಸ್ ಬಿಟ್ಟು ಬೇರೆ ಏನಾರ್ ಬರ್ಯೋ.. ಚೆನ್ನಾಗಿರುತ್ತೆ ಅಂತ ಸಪೋರ್ಟ್ ಮಾಡಿದ್ದಾಳೆ ಹೊರತು.. ಯಾವತ್ತೂ ಕೂಡ “ಹೇಳು, ಯಾಕ್ ಬರ್ದಿದ್ದು? ಯಾರಿಗ್ ಬರ್ದಿದ್ದು?” ಅಂತ ಜಾಸ್ತಿ ಕೆದುಕೋಕೆ ಹೋಗಿಲ್ಲ.. ನನ್ನ ವಯಸ್ಸಿನ ತುಮುಲಗಳನ್ನ ನಾ ನಿರಾತಂಕವಾಗಿ ವ್ಯಕ್ತಪಡಿಸೋಕೆ ಇಂತಹ ವಾತಾವರಣವೇ ಪ್ರಮುಖ ಕಾರಣ..
ಅಪ್ಪ‌ – ಅಮ್ಮನಿಗೆ ನಾ ದಾರಿ ತಪ್ಪೋದಿಲ್ಲ ಅನ್ನೋ ಓವರ್ ಕಾನ್ಫಿಡೆನ್ಸೋ? ಅಥವಾ ದಾರಿ ತಪ್ಪಿದ್ರೆ ವಾಪಾಸ್ ಬರ್ತಾನೆ ಅನ್ನೋ ನಂಬಿಕೆಯೋ? ಗೊತ್ತಿಲ್ಲ.. ಒಟ್ನಲ್ಲಿ ನನ್ನ ಮಾರ್ಕ್ಸ್ ಕಾರ್ಡಿನಿಂದ ಹಿಡಿದು.. ನನ್ನ ತಲೆಹರಟೆ ಕೆಲಸಗಳನ್ನೆಲ್ಲಾ ಸಹಿಸಿಕೊಂಡಿದ್ದಾರೆ.. ಬಹುಶಃ ಅವರ ಇಂತಹ ಸ್ವಭಾವವೇ ನನಗೆ ನನ್ನ ಇತಿಮಿತಿಗಳನ್ನ ಸ್ವತಃ ಅರಿತುಕೊಳ್ಳಲು ಸಹಕರಿಸಿದ್ದು.. ಸಂಪೂರ್ಣ ಸ್ವಾತಂತ್ರ್ಯ ಇದ್ದಾಗ್ಯೂ ಅದನ್ನು ಸ್ವೇಚ್ಛಾಚಾರವನ್ನಾಗಿಸಿಕೊಳ್ಳದಂತೆ ತಡೆದಿರುವುದು..

ಸೋ ನನ್ನ ಅಪ್ಪ – ಅಮ್ಮ ನನ್ನ ಬೆಸ್ಟ್ ಫ್ರೆಂಡ್ಸು.. ಈ ಥರ ಭಾವನೆ ಮೂಡಿಸಿದ್ದಕ್ಕೆ ಥ್ಯಾಂಕ್ಸ್ ಅನ್ಬೇಕಾ? ಅದಕ್ಕೂ ಮಿಗಿಲಾಗಿದ್ ಯಾವ್ದಾರ್ ಇದ್ಯಾ? ಗೊತ್ತಿಲ್ಲ..
ಬಟ್ ಅವರಿಬ್ಬರ ಮೇಲೆ ಸದಾ ಇಷ್ಟೇ ಪ್ರೀತಿ – ಅಭಿಮಾನ ಉಳಿಸಿಕೊಳ್ಳೋ ಶಕ್ತಿ ನನಗೆ ದಕ್ಕಲಿ ❤

ಏನೋ ಬರ್ಯೋಕ್ ಹೊರ್ಟಿದ್ದು, ಏನೋ ಆಯ್ತು.. ಎಡಿಟ್ ಮಾಡೋ ಮನಸಿಲ್ಲ ಸೋ ಸಹಿಸಿಕೊಳ್ಳಿ ?
-ಸ್ಕಂದ

Share post:

Subscribe

spot_imgspot_img

Popular

More like this
Related

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...