ಪ್ಲ್ಯಾಸ್ಟಿಕ್ ಎಂದರೆ ಏನೆಂದುಕೂಂಡಿದ್ದೀರಿ…?

0
329

‌ ಅದು ಮಾನವನಿಗೆ ದೇವರು ಕೂಟ್ಟ ವರ…!

ನಮಗೆ ಪ್ಲ್ಯಾಸ್ಟಿಕ್ ಎಂದಾಗ ಮೊದಲು ಮನಸ್ಸಿಗೆ ಬರುವುದು ಪ್ಲ್ಯಾಸ್ಟಿಕ್ ಕೈಚೀಲಗಳು, ಪ್ಲ್ಯಾಸ್ಟಿಕ್ ಬಕೆಟುಗಳು ಹಾಗು ಪ್ಲ್ಯಾಸ್ಟಿಕ್ ನಿಷೇಧಿಸಲಾಗಿದೆ ಎಂದು ಬರೆದಿರುವ ಫಲಕಗಳು. ಇದೆ ಸಮಯದಲ್ಲಿ ನಮಗೆ ಅಲ್ಲಿ ಇಲ್ಲಿ ಕೇಳುವ ವಿಷಯವೇನೆಂದರೆ ನಮ್ಮ ದೇಶವು ವಸ್ತು ವಿಜ್ಞಾನದಲ್ಲಿ ಹಾಗು ಪಾಲಿಮರ್ ತಂತ್ರಜ್ಞಾನದಲ್ಲಿ ಮುಂದುವರಿಯಬೇಕೆಂಬುದು.

ಈ ವಸ್ತು ವಿಜ್ಞಾನ, ಪಾಲಿಮರ್, ಪ್ಲಾಸ್ಟಿಕ್, ಇವಕ್ಕೆಲ್ಲ ಏನು ಸಂಬಂಧ ಎಂದು ಯೋಚಿಸುತ್ತಿರುವಿರಾ…? ಇದನ್ನು ಈ ರೀತಿಯಾಗಿ ಅರ್ಥೈಸಿಕೊಳ್ಳೋಣ. ಎಲ್ಲದಕ್ಕೂ ಮೊದಲು ಪಾಲಿಮರ್ ಎಂದರೆ “ಅದೊಂದು ಚಿಕ್ಕ ಚಿಕ್ಕ ಮಾನೋಮರ್ಗಳ ಬೆಸುಗೆಯಿಂದಾದ ದೈತ್ಯ ಕಣ.” ಸುಲಭವಾಗಿ ಹೇಳಬೇಕೆಂದರೆ ಪಾಲಿಮರ್ ಎಂಬುದು ಮಣಿಗಳಿಂದ (ಮಾನೋಮರ್) ಕೂಡಿ ಆಗಿರುವ ಮುತ್ತಿನ ಹಾರ. ಆದರೆ ಅದರ ರಾಸಾಯನಿಕ ಕ್ರಿಯೆಯೇ ಬೇರೆ. ಈ ಪಾಲಿಮರ್‌ಗಳ ಉಪಯೋಗಗಳು ಬಹಳಷ್ಟು. ಎಷ್ಟೆಂದರೆ ಇವುಗಳಿಲ್ಲದೇ ಬದುಕಲಾರದಷ್ಟು.

ವಾಹನದ ಬಿಡಿ ಭಾಗಗಳಲ್ಲಿ ಯೊಂತ್ರೋಪಕರಣಗಳಲ್ಲಿ ರಂಗುರಂಗಿನ ಪೈಂಟ್ ಗಳಲ್ಲಿ ಹಾಗು ನಿಮಗೆ ಅಚ್ಚರಿಯಾಗಬಹುದು ಇವನ್ನು ಮಾನವನ ದೇಹದ ನಿಷ್ರ್ಕಿಯಗೊಂಡ ಅಂಗಗಳನ್ನು ಬದಲಾಯಿಸಲು ಕೂಡ ಉಪಯೋಗಿಸುತ್ತಿದ್ದಾರೆ. ಈ ಪಾಲಿಮರ್ ಗಳನ್ನು ಎಷ್ಟೊಂದು ವಿಧಗಳಲ್ಲಿ ವಿಂಗಡಿಸಬಹುದು ಆದರೆ ಮೂಲಭೂತವಾಗಿ ಇದನ್ನು ಎರಡು ವಿಧವಾಗಿ ವರ್ಗಿಸೋಣ. ಒಂದು ಪ್ಲಾಸ್ಟಿಕ್ ಇನ್ನೊಂದು ರಬ್ಬರ್. ಪ್ಲಾಸ್ಟಿಕ್ ನ ವೈಜ್ಞಾನಿಕ ವ್ಯಾಖ್ಯಾನವು ಹೀಗಿದೆ. ” ಇದೊಂದು ವಸ್ತುವಿನ ಗುಣವಾಗಿದ್ದು ಒಮ್ಮೆ ವಿರೂಪಗೊಳ್ಳುವ ಶಕ್ತಿಯನ್ನು ನೀಡಿದರೇ ಶಾಶ್ವತವಾಗಿ ಇದರ ಗಾತ್ರ ಮತ್ತು ಆಕಾರವನ್ನು ಬದಲಿಸಿಕೊಳ್ಳುತ್ತದೆ”

ಹೇಗೆ ವಿಮರ್ಶಿಸುವುದು ಮಾನವನ ಸಹಜ ಗುಣವೋ ಅದೇ ರೀತಿ ಕಲಿಯುವುದು, ಮರೆಯುವುದು ಮತ್ತು ಪುನಃ ಅಭ್ಯಾಸ ಮಾಡುವುದು ಅವನ ಸಹಜ ಗುಣ.

ಪ್ಲಾಸ್ಟಿಕ್ ಅಪಾಯಕಾರಿ, ಅವುಗಳಿಂದ ಯಾವುದೇ ಪ್ರಯೋಜನವಿಲ್ಲ ಮತ್ತು ಅವು ನಮ್ಮ ಸ್ವಸ್ಥ್ಯ ಪರಿಸರವನ್ನು ಹಾಳು ಮಾಡುವ ವಸ್ತುಗಳು ಎಂದು ತಿಳಿದಿರುವವರಿಗೆ ಇದೊಂದು ಜಾಗೃತಿ ಲೇಖನ. ಈ ಪ್ಲಾಸ್ಟಿಕ್ ಗಳಲ್ಲಿ ಎರಡು ವಿಧ, ಒಂದಕ್ಕೆ ಶಾಖವನ್ನು ನೀಡಿದರೆ ಮೃದುವಾಗಿ ನಮಗೆ ಬೇಕಾದ ಆಕಾರಕ್ಕೆ ತಿರುಗುತ್ತದೆ ಹಾಗು ಇದನ್ನು ಮರುಉಪಯೋಗಿಸಬಹುದು. ಇದಕ್ಕೆ ಥರ್ಮೋಪ್ಲಾಸ್ಟಿಕ್ ಅನ್ನುತ್ತಾರೆ. ಮತ್ತೊಂದಕ್ಕೆ ಶಾಖ ನೀಡಿದರೆ ಶಾಶ್ವತವಾಗಿ ಮರುಉಪಯೋಗಿಸಲು ಆಗದಂತಹ ವಸ್ತುಗಳಾಗಿ ಪರಿವರ್ತನೆಯಾಗುತ್ತದೆ. ಪ್ಲಾಸ್ಟಿಕ್ ಗಳ ವಿಶೇಷತೆಯೆಂದರೇ ಅದು ಅಕ್ಕಿಯಿದ್ದಂತೆ. ಹೇಗೆ ನಾವು ಅಕ್ಕಿಯನ್ನು ಬಳಸಿಕೊಂಡು ಪಲಾವ್, ಚಿತ್ರಾನ್ನ, ಪುಳಿಯೋಗರೆ ಮುಂತಾದವುಗಳನ್ನು ತಯಾರಿಸುತ್ತೇವೆಯೋ ಅದೇ ರೀತಿ ಪ್ಲಾಸ್ಟಿಕ್ ನ ರಾಸಾಯನಿಕ ಗುಣಗಳನ್ನು ಬಳಸಿಕೊಂಡು ನಮ್ಮ ಅವಶ್ಯಕತೆಗೆ ಅನುಗುಣವಾಗಿ ಸಹಸ್ರಾರು ವಸ್ತುಗಳನ್ನು ತಯಾರಿಸಬಹುದು. ಉದಾಹರಣೆಗೆ ಪಾಲಿಇಥೈಲಿನ್ ಎಂಬ ಪ್ಲಾಸ್ಟಿಕ್ ನ್ನು ಕೈಚೀಲಗಳಾಗಿ ಬಳಸುತ್ತಿದ್ದೇವೋ ಅದನ್ನು ನಿಷೇಧಿಸಬೇಕೆಂದು ದಿನನಿತ್ಯ ಕೂಗುತ್ತಿದ್ದೆವೋ , ಅದೇ ಪ್ಲಾಸ್ಟಿಕ್ ನ ರಾಸಾಯನಿಕ ಆಕೃತಿಯನ್ನು ಬದಲಾಯಿಸಿದರೆ ನಮ್ಮ ದೇಶದ ಗಡಿಕಾಯುವ ವೀರಯೋಧನ ರಕ್ಷಾಕವಚವಾಗಬಲ್ಲದು. ಇದೆ ಪ್ಲಾಸ್ಟಿಕ್ ನ ಸಾಮರ್ಥ್ಯ.

ನಮ್ಮ ದಿನ ಮೊದಲಾಗುವುದು ಪ್ಲ್ಯಾಸ್ಟಿಕ್ನಿಂದಲಲೇ ಕೂನೆಯಾಗುವುದು ಇದರಿಂದಲೇ. ನಾವು ವಾಹನಗಳ‌ ಬಂಪರ್ಗಳಲ್ಲಿ, ಗೇರ್ಗಳಲ್ಲಿ, ಹೂರಮೈ ಮತ್ತು ಒಳಮೈ ಭಾಗಗಳಲ್ಲಿ ಪ್ಲ್ಯಾಸ್ಟಿಕ್ ನ ಬಳಕೆಯೇ ಹೆಚ್ಚು. ಪ್ಲ್ಯಾಸ್ಟಿಕ್ ಗಳು ಮೂಲತಹಃ ವಿದ್ಯುತ್ತನ್ನು ಪ್ರವಹಿದಂಥ ವಸ್ತುಗಳು ಆದ್ದರಿಂದ ಇವುಗಳನ್ನು ವಿದ್ಯುತ್ ತಂತಿಗಳ ಹೂದಿಕೆ‌ಯಾಗಿ ಬಳಸುತ್ತಾರೆ. ಎಂದಾದರು ಕೂಠಡಿ ಗಾತ್ರದ ಗಣಕಯಂತ್ರವು ನಾವು ಎಲ್ಲೇಂದರಲ್ಲಿ ಒಯುವ ಲ್ಯಾಪ್ಟಾಪ್ ಗಳಾಗಿ ಹೇಗೆ ಪರಿವರ್ತನೆಗೂಂಡಿತೆಂದು ಯೋಚಿಸಿದ್ದೀರಾ? ಇದಕ್ಕೆಲ್ಲಾ ಮೂಲ ಕಾರಣ ಪ್ಲ್ಯಾಸ್ಟಿಕ್ ನ ಬಳಕೆಯೇ.

ಇಡೀ ವಿಶ್ವವೇ ಆಶ್ಚರ್ಯಪಟ್ಟ ಹಾಗು ಭಾರತೀಯರು ಹೆಮ್ಮೆಪಟ್ಟ ದೊಡ್ಡ ಮೈಲುಗಲ್ಲೆಂದರೆ ‘ಮಂಗಳಯಾನ’. ನಿಮಗೆಲ್ಲರಿಗೂ ತಿಳಿದ ಹಾಗೆ ಕೇವಲ ೪೦೦ ಕೋಟಿ ವೆಚ್ಚ ಮಾಡಿ ಮಂಗಳನ ಅಂಗಳಕ್ಕೆ ನಮ್ಮ ಅಂತರಿಕ್ಷ ನೌಕೆಯನ್ನು ಕಳುಹಿಸಲಾಯಿತು, ಇದೆಲ್ಲ ಪ್ಲಾಸ್ಟಿಕ್ ನ ಬಳಕೆಯಿಂದಾದ ಮಹತ್ಕಾರ್ಯ . ನಮ್ಮ ದೇಶ ಇನ್ನು ಅಭಿವೃದ್ಧಿ ಹೊಂದುತ್ತಿರುವ ದೇಶವಾಗಲು ಕಾರಣ ನಾವೇ. ನಮ್ಮ ಅಜ್ಞಾನವೇ. ಏಕೆಂದರೆ ನಮ್ಮ ಜನತೆ ಕಡಿಮೆ ಮೈಕ್ರಾನ್ ನ ಚೀಲವನ್ನು ಬಳಸಬೇಡಿ ಎಂದರೂ ಬಳಸುತ್ತಾರೆ. ಎಲ್ಲೆಂದರಲ್ಲಿ ಬಿಸಾಡುತ್ತಾರೆ, ಮತ್ತೆ ದೂರುತ್ತಾರೆ ; ” ಪ್ಲ್ಯಾಸ್ಟಿಕ್ ನಿಂದಲೇ ಪರಿಸರ ಮಾಲಿನ್ಯವೆಂದು. ಮರುಉಪಯೋಗ ತಂತ್ರಜ್ಞಾನದಿಂದ ಇದರ ಮರುಬಳಕೆ ಕೂಡ ಮಾಡಬಹುದು .ಉದಾಹರಣೆ : ಡಾಂಬರಿನಲ್ಲಿ, ತೈಲವಾಗಿ ,ಅಲಂಕಾರಿಕೆಯಾಗಿ ಮುಂತಾದವುಗಳಾಗಿ ಬಳಸಲಾಗುತ್ತದೆ.

ಈ ಲೇಖನದ ಧ್ಯೇಯವೇನೆಂದರೆ; ” ಪ್ಲ್ಯಾಸ್ಟಿಕ್ ನ ಸರಿಯಾದ ಬಳಕೆ ಹೇಗೆ ನಮ್ಮ ಸೈನಿಕನ ರಕ್ಷಾಕವಚವಾಗಬಲ್ಲದು ಅದೇ ಪ್ಲ್ಯಾಸ್ಟಿಕ್ ನ ದುರ್ಬಳಕೆ ಮಾಲಿನ್ಯವೆಂಬ ಮಾರಿಗೆ ಈಡುಮಾಡಿಕೂಡುತ್ತದೆ”. ಆದ್ದರಿಂದ ನಮಗೆ ಎಲ್ಲೆಂದರಲ್ಲಿ ಕಾಣಬೇಕಾದದ್ದು ಪ್ಲ್ಯಾಸ್ಟಿಕ್ ಬಳಕೆ ನಿಷೇಧಿಸಲಾಗಿದೆ ಎಂದಲ್ಲಾ, ಪ್ಲ್ಯಾಸ್ಟಿಕ್ ನ ದುರ್ಬಳಕೆ ನಿಷೇಧಿಸಲಾಗಿದೆ ಎಂದು.

ಪ್ರಶಾಂತ್ ಕುಮಾರ್.ವಿ.

LEAVE A REPLY

Please enter your comment!
Please enter your name here