ಪಂಜಾಬ್ ನ ಪಠಾಣ್ಕೋಟ್ ವಾಯುನೆಲೆ ಮೇಲೆ ನಡೆದಿದ್ದ ಉಗ್ರ ದಾಳಿಯಲ್ಲಿ ಪಾಕಿಸ್ತಾನದ ಕೈವಾಡವಿಲ್ಲ, ಅದು ಭಾರತವೇ ಆಯೋಜಿಸಿದ್ದು ಎಂದು ಪಾಕ್ ಜಂಟಿ ತನಿಖಾ ಆಯೋಗವು ತನ್ನ ವರದಿಯಲ್ಲಿ ಆರೋಪಿಸಿರುವುದಾಗಿ ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ. ವಾಯುನೆಲೆ ದಾಳಿಗೆ ಸಂಬಂಧಿಸಿದಂತೆ ಮೊದಲಿನಿಂದಲೂ ಪಾಕಿಸ್ತಾನ ಸಾಕ್ಷಾಧಾರಗಳು ಇಲ್ಲ ಎಂದು ಹೇಳುತ್ತ ಬರುತ್ತಿತ್ತು. ಆದ್ರೆ ಅದಕ್ಕೆ ಸಂಬಂಧಿಸಿದಂತೆ ಎಲ್ಲ ದಾಖಲೆಗಳನ್ನು ಭಾರತ ಪಾಕಿಸ್ತಾನಕ್ಕೆ ಒದಗಿಸಿತ್ತು. ಮೊಬೈಲ್ ನೆಟ್ ವರ್ಕ್ ನಿಂದ ಹಿಡಿದು ಅವರು ಮಾತನಾಡಿದ್ದ ಫೋನ್ ನಂಬರ್ ಗಳನ್ನು ಭಾರತ ಪಾಕ್ ಸರ್ಕಾರಕ್ಕೆ ನೀಡಿತ್ತು. ಅದರಲ್ಲೂ ಪ್ರಮುಖವಾಗಿ ಐಎಂ ಉಗ್ರ ಅಜರ್ ಮೊಹಮದ್ ವಾಯುನೆಲೆ ದಾಳಿಯ ಹೊಣೆಯನ್ನು ಹೊತ್ತಿದ್ದ. ಭಾರತ ಆತನ ವಿರುದ್ಧವೂ ಎಫ್ಐಆರ್ ದಾಖಲು ಮಾಡುವಂತೆ ಪಾಕ್ ಸರ್ಕಾರವನ್ನ ಒತ್ತಾಯಿಸಿತ್ತು. ಆಗ ಸಾಕ್ಷಿಗಳು ಸಾಲದು ನಾವೇ ಖುದ್ದು ಭಾರತದಲ್ಲಿ ಪರಿಶೀಲನೆ ಮಾಡಬೇಕು ಎಂದು ಪಾಕ್ ತನಿಖಾ ತಂಡ, ಭಾರತಕ್ಕೆ ಐದು ದಿನಗಳ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಆ ವೇಳೆಯೂ ಭಾರತದ ಎನ್ಐಎ ಅಧಿಕಾರಿಗಳು ಸಾಕಷ್ಟು ಮಾಹಿತಿಯನ್ನು ಪಾಕ್ ಅಧಿಕಾರಿಗಳಿಗೆ ನೀಡಿದ್ದರು. ಆದ್ರೆ ಈಗ ಪಾಕ್ ತನಿಖಾ ತಂಡ ಹೊಸ ರಾಗ ತೆಗೆದಿದೆ. ವಾಯುನೆಲೆ ಮೇಲಿನ ದಾಳಿಯನ್ನು ಭಾರತವೇ ಆಯೋಜಿಸಿದ್ದು ಎಂದು ವರದಿಯನ್ನು ಸಿದ್ಧಪಡಿಸಿದೆಯಂತೆ. ವ್ಯವಸ್ಥಿತವಾಗಿ ಪಾಕಿಸ್ತಾನದ ಮೇಲೆ ಅಪಪ್ರಚಾರಕ್ಕೆ ಭಾರತವು ಇದನ್ನು ಬಳಸಿಕೊಳ್ಳುತ್ತಿದೆ ಎಂಬುದಾಗಿ ಅಧಿಕಾರಿಗಳು ಪಾಕ್ ಪ್ರಧಾನಿ ನವಾಜ್ ಷರೀಫ್ ಅವರಿಗೆ ವರದಿಯನ್ನು ಸಲ್ಲಿಸಲು ಸಜ್ಜಾಗಿದೆ ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ. ಚೆಲ್ಲಿದ ರಕ್ತದ ಮೇಲೆ ನೀಟಾಗಿ ಪಾಕಿಸ್ತಾನದ ಅಚ್ಚಿದ್ದರೂ ತಮ್ಮನ್ನೂ ಸಾಚಾ ಎಂದೇ ನುಣುಚಿಕೊಳ್ಳುವ ಪಾಕಿಸ್ತಾನಿಗಳ, ಈ ತೆರನಾದ ಪಲಾಯನವಾದ ಹೊಸತೇನಲ್ಲ.
- ರಘು, ಇಂಜನಹಳ್ಳಿ
POPULAR STORIES :
ಅಶ್ಲೀಲ ಚಿತ್ರಗಳನ್ನು ನೋಡುವುದು ತಪ್ಪಲ್ಲ..!? ಲವ್ ಗೇಮ್ ಚಿತ್ರದಲ್ಲಿ ಅಂಥದ್ದೇನಿದೆ..?
ಸನ್ನಿಲಿಯೋನ್ ಮೇಲೆ ನೂರು ಕೋಟಿ ಮಾನನಷ್ಟ ಮೊಕದ್ದಮೆ..!? ಹಾಟ್ ಸುಂದರಿ ಮಾಡಿದ ತಪ್ಪೇನು..?
ATM ಎ ಟಿ ಎಂ- ಎನಿಟೈಂ ಮನಿ ಸಿಗಲ್ಲ…!
ಜಮ್ಮು-ಕಾಶ್ಮೀರದಲ್ಲಿ ಇಂದಿನಿಂದ `ಬೆಂಕಿ’ಯ ಆಟ..!
ವಿರಾಟ್ ಕೊಹ್ಲೀನಾ ಮದ್ವೆ ಆಗ್ತಾಳಂತೆ ಖಂಡಿಲ್..!? #Video
ಇವ್ರಿಗೆಲ್ಲಾ ಜೈಲು ಗ್ಯಾರಂಟಿ..!? ಪನಾಮಾ ಹಗರಣ ಎಂದರೇನು..?
ಮೋದಿ ದೇಹದಲ್ಲಿ ಅಹ್ಮದ್ ಖಾನ್ `ಆತ್ಮ..!!’ ಮೋದಿಯಲ್ಲ, ಇಂದಿರಾ ಗಾಂಧಿಯಿದ್ದಿದ್ದರೂ ಆಗುತ್ತಿತ್ತು ಮಾರಣಹೋಮ..!!
ಪ್ರಿಯಾಂಕ ಛೋಪ್ರಾ ಆತ್ಮಹತ್ಯೆಗೆ ಯತ್ನಿಸಿದ್ದು ಯಾಕೆ..?
`ಸೆಕ್ಸ್’ ಸೈಟುಗಳ ಹಾಟ್ ವಿಚಾರ..!? ಅಶ್ಲೀಲ ಎಂಎಂಎಸ್ ಹೇಗೆಲ್ಲಾ ಸೃಷ್ಟಿಯಾಗುತ್ತೆ ಗೊತ್ತಾ..!?
ಅದು ತೇಜೋಮಹಲ್ ಅಲ್ಲ, ಶುದ್ಧ ತಾಜ್ ಮಹಲ್..! ತಾಜ್ ಮಹಲ್ ಬಗ್ಗೆ ಗೊತ್ತಿರದ ರಹಸ್ಯಗಳು..!