ಪೇ ಸಿಎಂ ಬಗ್ಗೆ ಸಿಎಂ ಹೇಳಿದ್ದೇನು ?

Date:

[9/23, 4:47 PM] AkshuMeera: ಬೆಂಗಳೂರಿನಲ್ಲಿ ಪೇ ಸಿಎಂ’ ಪೋಸ್ಟರ್​ ಅಭಿಯಾನ ವಿಚಾರವಾಗಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ವಿಧಾನಸೌಧದಲ್ಲಿ ಮಾತನಾಡಿದ ಅವರು, ಪೇಸಿಎಂ ಅಭಿಯಾನಕ್ಕೆ ಬಿಜೆಪಿ ಕೌಂಟರ್ ಏನು ಎಂಬ ಪ್ರಶ್ನೆಗೆ ಏನೇಲ್ಲ ಮಾಡಬೇಕೊ ಎಲ್ಲವನ್ನೂ ಮಾಡ್ತೀವಿ ಎಂದು ಹೇಳಿದರು. ಎರಡು ವಾರ ಅಧಿವೇಶನ ನಡೆದಿದೆ. ಸದನದಲ್ಲಿ ಅತಿವೃಷ್ಟಿ ಬಗ್ಗೆ ಚರ್ಚೆ ನಡೆಸಲಾಯಿತು. ವಿಪಕ್ಷದವರು ಎತ್ತಿರುವ ವಿಚಾರಗಳು ಅವರಿಗೇ ತಿರುಗೇಟು ನೀಡಲಾಗಿದೆ. ಗುತ್ತಿಗೆದಾರರ ಸಂಘದ ಪತ್ರದ ಬಗ್ಗೆ ಈಗಾಗಲೇ ಉತ್ತರಿಸಿದ್ದೇನೆ. ಇವತ್ತು ನಾನು ಗುತ್ತಿಗೆದಾರರ ಸಂಘಕ್ಕೆ ಕೇಳುತ್ತೇನೆ ದಾಖಲೆ ಕೊಡಿ ಎಂದು. ದಾಖಲೆ ಕೊಟ್ರೆ ನೇರವಾಗಿ ಲೋಕಾಯುಕ್ತ ತನಿಖೆಗೆ ನೀಡ್ತೇನೆ. ಪುರಾವೆ ಇಲ್ಲದೇ ಮಾತಾಡುವ ಪ್ರವೃತ್ತಿ ಬಹಳ ದಿನ ನಡೆಯಲ್ಲ. ಕಾಂಗ್ರೆಸ್​​ನವರೇ ತಮ್ಮ ಪಕ್ಷದ ಭ್ರಷ್ಟಾಚಾರದ ಬಗ್ಗೆ ಹೇಳಿದ್ದಾರೆ. ಕಮಿಷನ್​ ವಿಚಾರ ಸದನದ ಆರಂಭದ ದಿನವೇ ತೆಗೆದುಕೊಳ್ಳಬಹುದಿತ್ತು. 40% ಕಮಿಷನ್​ ವಿಚಾರ ಸದನದ ಕೊನೇ ದಿನ ಏಕೆ ಕೈಗೆತ್ತಿಕೊಂಡ್ರು. 40% ಕಮಿಷನ್​ ಆರೋಪ ವಿಚಾರದಲ್ಲಿ ನಾವು ಮುಕ್ತರಿದ್ದೇವೆ. ಈಗಲೂ ದಾಖಲೆ, ದೂರು ನೀಡಿದ್ರೆ ನಾವು ತನಿಖೆ ಮಾಡಿಸುತ್ತೇವೆ ಎಂದು ಹೇಳಿದರು. ಆಧಾರ ನೀಡದೇ ಒಂದು ವರ್ಷದಿಂದ ಆರೋಪ ಮಾಡುತ್ತಿದ್ದಾರೆ. ಬರೀ ರಾಜಕೀಯ ಪ್ರೇರಿತ ಆರೋಪ ಮಾಡುತ್ತಿದ್ದಾರೆ. 40% ಕಮಿಷನ್​​ ಬಗ್ಗೆ ಚರ್ಚೆಗೆ ನಾವು ಸಿದ್ಧರಿದ್ವಿ, ದಾಖಲೆ ನೀಡಿಲ್ಲ. ಆದರೆ ಯಾರೂ ಕೂಡ ದಾಖಲೆ ನೀಡಿಲ್ಲ ಎಂದು ಬೊಮ್ಮಾಯಿ ಹೇಳಿದರು. ಅವರು ದೂರು ಕೊಟ್ಟರೆ ನಾಳೆಯೇ ತನಿಖೆ ಮಾಡಿಸಲು ಸಿದ್ಧ. ಸುಮ್ಮನೆ ಆರೋಪ ಮಾಡಿ ಹೋಗುವುದು ಬೇಡ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.

Share post:

Subscribe

spot_imgspot_img

Popular

More like this
Related

ರೈಲು ಪ್ರಯಾಣ ದರ ಏರಿಕೆ ಕುರಿತು ಬಿಜೆಪಿ ನಾಯಕರು ಮೌನ ವಹಿಸಿದ್ದಾರೆ: ಸಿಎಂ ಸಿದ್ದರಾಮಯ್ಯ

ರೈಲು ಪ್ರಯಾಣ ದರ ಏರಿಕೆ ಕುರಿತು ಬಿಜೆಪಿ ನಾಯಕರು ಮೌನ ವಹಿಸಿದ್ದಾರೆ:...

ಬೆಂಗಳೂರಿನಲ್ಲಿ ಚಳಿ ಜೊತೆಗೆ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣಹವೆ

ಬೆಂಗಳೂರಿನಲ್ಲಿ ಚಳಿ ಜೊತೆಗೆ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣಹವೆ ಬೆಂಗಳೂರು: ರಾಜ್ಯದ...

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ ಬೆಂಗಳೂರು:...

ಮೈಸೂರು ಅರಮನೆ ಮುಂಭಾಗ ಹೀಲಿಯಂ ಗ್ಯಾಸ್ ಸ್ಫೋಟ: ಓರ್ವ ಸಾವು, ಮೂವರಿಗೆ ಗಂಭೀರ ಗಾಯ

ಮೈಸೂರು ಅರಮನೆ ಮುಂಭಾಗ ಹೀಲಿಯಂ ಗ್ಯಾಸ್ ಸ್ಫೋಟ: ಓರ್ವ ಸಾವು, ಮೂವರಿಗೆ...