ಉರ್ಫಿ ಜಾವೇದ್ ಗೆ ಸಂಕಷ್ಟ: ಆಗಿದ್ದೇನು ಗೊತ್ತಾ ?

Must read

ಉರ್ಫಿ ಜಾವೇದ್ ಸದಾ ವಿಭಿನ್ನ ಡ್ರಸ್ ಗಳಿಂದಲೇ ಗಮನ ಸೆಳೆಯುವ ಈ ಬೆಡಗಿ ಇದೀಗ ಸಂಕಷ್ಟವೊಂದು ಎದುರಾಗಿದೆ. ಉರ್ಫಿ ಧರಿಸಿರುವ ಬಟ್ಟೆಯಿಂದಲೇ ಆಕೆಗೆ ಸಂಕಷ್ಟ ಎದುರಾಗಿದ್ದು ಈ ಕಾರಣಕ್ಕಾಗಿಯೇ ಆಕೆ ವಿಚಾರಣೆಯನ್ನು ಎದುರಿಸಬೇಕಾಗಿದೆ. ಈ ಬಾರಿ ಉರ್ಫಿ ಸಿಮ್ ಕಾರ್ಡಿನಲ್ಲಿ ನೇಯ್ದ ಬಟ್ಟೆಯಿಂದ ತಯಾರಾದ ಕಾಸ್ಟ್ಯೂಮ್ ಧರಿಸಿದ್ದು, ಈ ಕಾಸ್ಟ್ಯೂಮ್ ಗಾಗಿ ನೂರಾರು ಸಿಮ್ ಕಾರ್ಡ್ ಗಳನ್ನು ಬಳಕೆ ಮಾಡಿದ್ದಾರೆ. ಈ ಪ್ರಮಾಣದ ಸಿಮ್ ಕಾರ್ಡ್ ಈಕೆಯ ಬಳಿ ಎಲ್ಲಿಂದ ಬಂದವು ಎನ್ನುವ ಮೂಲವನ್ನು ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ. ಈ ಸಿಮ್ ಕಾರ್ಡ್ ಗಾಗಿ ಆಕೆ ಲಕ್ಷಾಂತರ ರೂಪಾಯಿಯನ್ನು ಖರ್ಚು ಮಾಡಿದ್ದು, ಇಷ್ಟೊಂದು ಸಿಮ್ ಕಾರ್ಡ್ ಕೊಟ್ಟವರನ್ನು ಯಾರು ಎಂಬ ಶೋಧ ಶುರುವಾಗಿದೆ.

ಈ ಹಿಂದೆ ಗೋಣಿ ಚೀಲ, ಪ್ಲ್ಯಾಸ್ಟಿಕ್, ಹೂವುಗಳು, ಚಿಟ್ಟೆ ಹೀಗೆ ನಾನಾ ಅವತಾರಗಳಲ್ಲಿ ಕಾಣಿಸಿಕೊಂಡಿರುವ ಉರ್ಫಿಗೆ ಲಕ್ಷಾಂತರ ಅಭಿಮಾನಿಗಳು ಇದ್ದಾರೆ. ಅಲ್ಲದೇ, ಈಗೆ ಧರಿಸುವ ಬಟ್ಟೆಗಳು ಕೂಡ ಒಂದೊಂದು ಬಾರಿ ಟ್ರೆಂಡ್ ಆಗುತ್ತವೆ. ಅಲ್ಲದೇ, ಯಾವಾಗಲೂ ಕ್ಯಾಮೆರಾಗಳು ಈಕೆಯನ್ನೇ ಕಾಯುತ್ತಿರುತ್ತವೆ. ಹಾಗಾಗಿಯೇ ಹೊಸ ಹೊಸ ವಿನ್ಯಾಸದ ಬಟ್ಟೆಗಳನ್ನು ಉರ್ಫಿ ಧರಿಸುತ್ತಾರೆ. ಅದನ್ನು ಡಿಸೈನ್ ಮಾಡಿಸಲು ತಲೆ ಕೆಡಿಸಿಕೊಳ್ಳುತ್ತಾರೆ.

- Advertisement -spot_img

More articles

- Advertisement -spot_img

Latest article