500 ಮತ್ತು 1000 ಮುಖಬೆಲೆಯ ನೋಟುಗಳನ್ನು ಬ್ಯಾನ್ ಮಾಡಿದ ನಂತರ ಜನರಿಗೆ ಅನುಕೂಲವಾಗಲಿ ಎಂದು ಹಳೆಯ 500 ನೋಟುಗಳನ್ನು ಪೆಟ್ರೋಲ್ ಬಂಕ್ ಹಾಗೂ ವಿಮಾನ ನಿಲ್ದಾಣಗಳಲ್ಲಿ ಡಿ.15ರ ವರೆಗೂ ಚಲಾವಣೆಯಲ್ಲಿರುತ್ತೆ ಎಂದು ಹೇಳಿದ್ದ ಕೇಂದ್ರವೇ ಈಗ ಯೂ ಟರ್ನ್ ಹೊಡೆದಿದೆ. ಹಳೆಯ 500 ನೋಟುಗಳು ಬಂಕ್ ಹಾಗೂ ಏರ್‍ಲೈನ್ಸ್ ಗಳಲ್ಲಿ ಚಲಾವಣೆ ಮಿತಿ ಡಿ.2ಕ್ಕೆ ಕಡಿತಗೊಳಿಸಿದ್ದಾರೆ..! ಹೀಗಾಗಿ ನಾಳೆ ಹೊರತು ಪಡಿಸಿದರೆ ಬಂಕ್‍ಗಳಲ್ಲಿ ಪೆಟ್ರೋಲ್ ಅಥವಾ ಡೀಸೆಲ್ ಹಾಕಿಸಿಕೊಂಡರೆ ಅಥವಾ ವಿಮಾನ ಟಿಕೆಟ್ ಖರೀದಿ ಮಾಡಲು ಹೋದಲ್ಲಿ ಹೊಸ ನೋಟುಗಳಿಗೆ ಮಾತ್ರ ಆದ್ಯತೆ ಇರುತ್ತದೆ..!
ಇದೇ ಶುಕ್ರವಾರದ ನಂತರ ನೀವು ಬಂಕ್ ಅಥವಾ ಇತರೆ ತೈಲ ಕಂಪನಿಗಳಲ್ಲಿ 500ರ ಹಳೆಯ ನೋಟು ಬಳಸುವಂತಿಲ್ಲ. ಅಲ್ಲದೇ ವಿಮಾನ ಟಿಕೆಟ್ ಕೊಂಡರೂ ಕೂಡ ಹಳೆಯ 500 ರೂ. ನೋಟಿಗೆ ಮಾನ್ಯತೆ ಇರೋದಿಲ್ಲ ಎಂದು ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಈ ಎರಡು ವಲಯಗಳಲ್ಲಿ ಬಿಟ್ಟರೆ ಇನ್ನುಳಿದ ಸರ್ಕಾರಿ ಅಥವಾ ಸಾರ್ವಜನಿಕ ವಲಯಗಳಾದ ಬಸ್ ನಿಲ್ದಾಣ, ರೈಲ್ವೇ ನಿಲ್ದಾಣಗಳಲ್ಲಿ ಡಿಸೆಂಬರ್ 15ರವರೆಗೂ ಹಳೆಯ 500 ಮುಖಬೆಲೆಯ ನೋಟು ಚಲಾವಣೆಯಲ್ಲಿರುತ್ತದೆ..!
Like us on Facebook The New India Times
POPULAR STORIES :
ಬಾಂಗ್ಲಾ ಕ್ರಿಕೆಟಿಗರು ಮಾಡಿದ ತಪ್ಪಿಗೆ ಸಿಕ್ತು ದೊಡ್ಡ ಶಿಕ್ಷೆ..!
ಒಬಿಸಿ ಪಟ್ಟಿಗೆ 15 ಹೊಸ ಜಾತಿ ಸೇರ್ಪಡೆ..!
ಇನ್ಮುಂದೆ ಚಿತ್ರ ಮಂದಿರಗಳಲ್ಲಿ ರಾಷ್ಟ್ರಗೀತೆ, ರಾಷ್ಟ್ರಧ್ವಜ ಪ್ರದರ್ಶನ ಕಡ್ಡಾಯ : ಸುಪ್ರೀಕೋರ್ಟ್‍ನ ಮಹತ್ವದ ಆದೇಶ..!