PFI ಸಂಘಟನೆ ನಿಷೇಧದ ಬೆನ್ನಲ್ಲೇ ಸಭೆ

Date:

ದೇಶದಲ್ಲಿ PFI ಸಂಘಟನೆ ಕೇಂದ್ರ ಸರಕಾರ ನಿಷೇಧಿಸಿರುವ ಹಿನ್ನೆಲೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಇಂದು ಇಲಾಖೆಯ ಹಿರಿಯ ಅಧಿಕಾರಗಳೊಂದಿಗೆ ಸಭೆ ನಡೆಸಿದರು. ವಿಧಾನಸೌಧದ ಕಚೇರಿಯಲ್ಲಿ ಜರುಗಿದ ಸಭೆಯಲ್ಲಿ ನಿಷೇಧ ನಂತರದ ಪ್ರಕ್ರಿಯೆಗಳ ಅನುಷ್ಠಾನದ ಕುರಿತು ಚರ್ಚೆ ನಡೆಸಿದರು. ರಾಜ್ಯದ ಪೆÇಲೀಸ್ ಮುಖ್ಯಸ್ಥ ಪ್ರವೀಣ್ ಸೂದ್ ಹಾಗೂ ರಾಜ್ಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಅವರು ಸಭೆಯಲ್ಲಿ ಭಾಗವಹಿಸಿ ಸಚಿವರಿಗೆ ಮಾಹಿತಿ ನೀಡಿದರು. ನಿನ್ನೆಯಷ್ಟೇ ಕೇಂದ್ರ ಸರಕಾರ ಪಿಎಫ್‍ಐ ಹಾಗೂ ಅದರ ಇತರ ಸಹವರ್ತಿ ಸಂಘಟನೆಗಳನ್ನು ನಿಷೇಸಿ ಆದೇಶ ಹೊರಡಿಸಿತ್ತು ಹಾಗೂ ಅನುಷ್ಠಾನದ ಸಂಪೂರ್ಣ ಅಕಾರವನ್ನು ರಾಜ್ಯ ಸರಕಾರಗಳಿಗೆ ನೀಡಿದೆ. ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದು, ಕಚೇರಿಗಳನ್ನು ಸೀಜ್ ಮಾಡುವುದು ಮತ್ತು ಕಾನೂನು ಕ್ರಮ ಕೈಗೊಂಡಿರುವ ಕುರಿತು ಮಾಹಿತಿಯನ್ನು ಗೃಹ ಸಚಿವರು ಪಡೆದುಕೊಂಡರು. ಕೇಂದ್ರದ ನಿರ್ದೇಶನದಂತೆ ರಾಜ್ಯ ಸರಕಾರ ಪಿಎಫ್‍ಐ ನಿಷೇಧ ನಂತರದ ಪ್ರಕ್ರಿಯೆಗಳ ಸಮರ್ಪಕ ಅನುಷ್ಟಾನಕ್ಕೆ ಸಂಬಂದಿಸಿದಂತೆ ರಾಜ್ಯದ ಎಲ್ಲಾ ಜಿಲ್ಲಾಕಾರಿಗಳಿಗೆ ಅಧಿಕಾರ ನೀಡಿ ಸುತ್ತೋಲೆ ಹೊರಡಿಸಿದೆ.

Share post:

Subscribe

spot_imgspot_img

Popular

More like this
Related

ಮುಟ್ಟಿನ ಮೊದಲ ದಿನವೇ ಹೆಚ್ಚು ನೋವು ಯಾಕೆ? ಇದಕ್ಕೆ ಕಾರಣ ಹೀಗಿದೆ ನೋಡಿ

ಮುಟ್ಟಿನ ಮೊದಲ ದಿನವೇ ಹೆಚ್ಚು ನೋವು ಯಾಕೆ? ಇದಕ್ಕೆ ಕಾರಣ ಹೀಗಿದೆ...

ಲವ್ ಮಾಕ್ಟೇಲ್ 3 ಟ್ರೈಲರ್ ಬಿಡುಗಡೆ: ಮಾರ್ಚ್ 19ಕ್ಕೆ ಸಿನಿಮಾ ತೆರೆಗೆ

ಲವ್ ಮಾಕ್ಟೇಲ್ 3 ಟ್ರೈಲರ್ ಬಿಡುಗಡೆ: ಮಾರ್ಚ್ 19ಕ್ಕೆ ಸಿನಿಮಾ ತೆರೆಗೆ ಬೆಂಗಳೂರು:...

ಇಂದು ಮೊದಲ ಬಾರಿಗೆ ಫೈನಲ್ʼನಲ್ಲಿ ಭಾರತ–ನ್ಯೂಜಿಲೆಂಡ್ ಮುಖಾಮುಖಿ!

ಇಂದು ಮೊದಲ ಬಾರಿಗೆ ಫೈನಲ್ʼನಲ್ಲಿ ಭಾರತ–ನ್ಯೂಜಿಲೆಂಡ್ ಮುಖಾಮುಖಿ! ಅಹಮದಾಬಾದ್: 2026ರ ಟಿ20 ವಿಶ್ವಕಪ್...

ಸಮಾಜದ ಬಡವರು, ಅಶಕ್ತರಿಗೆ ಶಕ್ತಿ ತುಂಬುವುದೇ ನನ್ನ ಕಾಯಕ: ಮುಖ್ಯಮಂತ್ರಿ ಸಿದ್ದರಾಮಯ್ಯ

ಸಮಾಜದ ಬಡವರು, ಅಶಕ್ತರಿಗೆ ಶಕ್ತಿ ತುಂಬುವುದೇ ನನ್ನ ಕಾಯಕ: ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು:...