ಪಾಕಿಸ್ತಾನದ ಗಡಿಯಲ್ಲಿ ಕನ್ನಡದ ಪಿರಂಗಿಪುರ ನಿರ್ಮಾಣವಾಗ್ತಿದೆ…! ಇದೇನಪ್ಪ…?! ಅಂತ ಆಶ್ಚರ್ಯದ ಜೊತೆಗೆ ಪ್ರಶ್ನೆಯೊಂದು ನಿಮ್ಮಲ್ಲಿ ಮೂಡಿರುವುದು ಸಹಜ.
ಪಿರಂಗಿಪುರ ಎನ್ನೋದು ಜನಾರ್ಧನ್ ಪಿ ಜಾನಿ ನಿರ್ದೇಶನದ ಹೊಸ ಸಿನಿಮಾ.
ಪಿರಂಗಿಪುರ ಅನ್ನೋದು ಒಂದು ಕಾಲ್ಪನಿಕ ಕಥೆಯಾಗಿದ್ದು ತಾಂತ್ರಿಕ ಶ್ರೀಮಂತಿಕೆಯೇ ಚಿತ್ರದ ಜೀವಾಳ. ಇದು ಕನ್ನಡದ ಬಾಹುಬಲಿ ಆಗಲಿದೆ ಎಂಬ ನಿರೀಕ್ಷೆ ಹುಟ್ಟಿದೆ.
ಮೇಕಿಂಗ್ ವಿಷಯದಲ್ಲಿ ಗೆಲ್ಲಲೇ ಬೇಕು. ಮೇಕಿಂಗ್ ನಲ್ಲಿ ಕಾಂಪ್ರುಮೈಸ್ ಆಗುವಂತೆಯೇ ಇಲ್ಲ. ಕಥೆಗೆ ತಕ್ಕಂತೆ ಮರಳುಗಾಡಿನಲ್ಲಿ ದೊಡ್ಡದಾದ ಊರೊಂದನ್ನು ನಿರ್ಮಿಸಲು ಚಿತ್ರತಂಡ ಮುಂದಾಗಿದೆ. ಪಾಕಿಸ್ತಾನ್ ಗಡಿಯಲ್ಲಿ ಸೆಟ್ ಹಾಕಲಾಗುತ್ತಿದೆ.
12 ತಂತ್ರಜ್ಞರ ತಂಡ 9 ತಿಂಗಳಿಂದ ವಿಎಫ್ ಎಕ್ಸ್ ಕೆಲಸದಲ್ಲಿ ಬ್ಯುಸಿಯಾಗಿದೆ.
ರಾಷ್ಟ್ರಪ್ರಶಸ್ತಿ ವಿಜೇತ,ಪ್ರಯೋಗಾತ್ಮಕ ಸಿನಿಮಾಗಳಿಂದ ಗುರುತಿಸಿಕೊಂಡಿರುವ ನಟ ಸಂಚಾರಿ ವಿಜಯ್ ಈ ಐತಿಹಾಸಿಕ ಸಿನಿಮಾದಲ್ಲಿ ಹೊಸ ಅವತಾರವನ್ನೆತ್ತಿದ್ದಾರೆ. ರಾಜಾರಾಮ ಎಂಬ ಪಾತ್ರದಲ್ಲಿ ವಿಜಯ್ ಕಾಣಿಸಿಕೊಳ್ಳಲಿದ್ದಾರೆ