ಪ್ಲಾಸ್ಟಿಕ್ ಬಳಕೆ ವೇಳೆ ಸಿಕ್ಕಿ ಬಿದ್ದರೆ ದಂಡ

0
35

ಬೆಂಗಳೂರಿನಲ್ಲಿ ಇನ್ಮುಂದೆ ನಿಷೇಧಿತ ಪ್ಲಾಸ್ಟಿಕ್ ಬಳಕೆ ವೇಳೆ ಸಿಕ್ಕಿ ಬಿದ್ದರೆ ದಂಡ ಪ್ರಯೋಗಿಸಲು ಬಿಬಿಎಂಪಿ ಮಾರ್ಷಲ್ಸ್‌ ಅಖಾಡಕ್ಕಿಳಿದಿದ್ದಾರೆ. ಪ್ಲಾಸ್ಟಿಕ್ ಉತ್ಪಾದನೆ, ಸಂಗ್ರಹಣೆ, ವಿತರಣೆ, ಮಾರಾಟ ಹಾಗೂ ಬಳಕೆ ನಿಷೇಧಿಸಲಾಗಿದೆ. ಬೆಂಗಳೂರಿನಲ್ಲಿ ವ್ಯಾಪಾರಿಗಳು, ಗ್ರಾಹಕರು ಪ್ಲಾಸ್ಟಿಕ್ ಮೇಲೆ ಅವಲಂಬಿತರಾಗಿದ್ದಾರೆ. ತರಕಾರಿ, ಹಣ್ಣು ಖರೀದಿ ವೇಳೆ 20 ರೂ.ಗೆ ಬೇಕಾದ ಸಾಮಾಗ್ರಿ ಸಿಕ್ಕರೆ 5 ರೂ. ಕೈ ಚೀಲಕ್ಕೆ ಖರ್ಚು ಮಾಡಬೇಕಾಗಿದೆ. ಇದನ್ನು ತಪ್ಪಿಸಲು ವ್ಯಾಪಾರಿಗಳು, ಗ್ರಾಹಕರು ನಿಷೇಧಿತ ಪ್ಲಾಸ್ಟಿಕ್ ಬಳಸುತ್ತಿದ್ದಾರೆ. ಇನ್ಮುಂದೆ ಪ್ಲಾಸ್ಟಿಕ್ ಕೈ ಚೀಲ ಬಳಸಿದ್ದು ಕಂಡು ಬಂದರೆ ಗ್ರಾಹಕರಿಗೂ 200 ರೂ. ದಂಡ ಫಿಕ್ಸ್. ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ನಿಯಮದಡಿ ಮಾಲಿನ್ಯ ನಿಯಂತ್ರಣ ಮಂಡಳಿ ದಂಡದ ಪ್ರಮಾಣ ಕುರಿತು ಆದೇಶ ಹೊರಡಿಸಿದೆ. ಈ ದಂಡವನ್ನು ಬಿಬಿಎಂಪಿ ಯಥಾವತ್ತಾಗಿ ಜಾರಿಗೆ ತರಲು ಸಜ್ಜಾಗಿದೆ. ಮಾರ್ಷಲ್ಸ್ ಫೀಲ್ಡ್‌ನಲ್ಲಿ ಹಲವೆಡೆ ಪ್ಲಾಸ್ಟಿಕ್ ಬಲ್ಕ್ ಜನರೇಟರ್ ವಿರುದ್ಧ ದಂಡ ಪ್ರಯೋಗಕ್ಕೆ ಮುಂದಾಗಿದ್ದಾರೆ.

LEAVE A REPLY

Please enter your comment!
Please enter your name here