ಚಿತ್ರಮಂದಿರಗಳಲ್ಲಿ ನಾಡಗೀತೆ ಕಡ್ಡಾಯ ?

0
65

ರಾಜ್ಯದ ಎಲ್ಲ ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಬಳಿಕ ನಾಡಗೀತೆ ಕಡ್ಡಾಯಗೊಳಿಸಲು ಕನ್ನಡಪರ ಸಂಘಟನೆಗಳು ಮನವಿ ಮಾಡಿವೆ. ಆರ್ ಟಿ ನಗರದ ಸಿಎಂ ಖಾಸಗಿ ನಿವಾಸದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರಿಗೆ ‘ಬನಾರಸ್’ ಬಹುಭಾಷಾ ಸಿನಿಮಾದ ನವ ನಾಯಕ ನಟ ಹಾಗೂ ಶಾಸಕ ಜಮೀರ್ ಅಹ್ಮದ್ ಅವರ ಪುತ್ರ ಜೈದ್ ಖಾನ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳ ನಿಯೋಗ ಭೇಟಿ ಮಾಡಿ ಮನವಿ ಸಲ್ಲಿಸಿದೆ. ಇದೇ ಸಂದರ್ಭದಲ್ಲಿ ತಾವು ನಟಿಸಿದ ಮೊದಲ ಚಲನಚಿತ್ರ ‘ಬನಾರಸ್’ ಕನ್ನಡ ಸೇರಿ ಬಹುಭಾಷೆಯಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಆಗಿ ನ.4ರಂದು ಬಿಡುಗಡೆಯಾಗಲಿದ್ದು, ವೀಕ್ಷಿಸಲು ಆಗಮಿಸಬೇಕು ಎಂದು ಬೊಮ್ಮಾಯಿ‌ಗೆ ವಿನಂತಿಸಿದ್ದಾರೆ. ಸಿಎಂ ಬೊಮ್ಮಾಯಿ‌ ಭೇಟಿ ನಂತರ ಜೈದ್ ಖಾನ್ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ರಾಷ್ಟ್ರಕವಿ ಕುವೆಂಪು ರಚಿಸಿದ ಗೀತೆಯನ್ನು ರಾಜ್ಯ ಸರ್ಕಾರ ಅಧಿಕೃತವಾಗಿ‌ ನಾಡಗೀತೆ ಎಂದು ಆದೇಶಿಸಿದ್ದು, ದೇಶಪ್ರೇಮದ ಜತೆಗೆ ನಾಡಿನ ಅಭಿಮಾನ ಹೆಚ್ಚಿಸಲು ಮಲ್ಟಿಪ್ಲೆಕ್ಸ್ ಸೇರಿ ಎಲ್ಲ ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಬಳಿಕ ‌ನಾಡಗೀತೆ ಹಾಡು ಕಡ್ಡಾಯಗೊಳಿಸಲು ಮುಖ್ಯಮಂತ್ರಿಗೆ ಮನವಿ ಮಾಡಲಾಗಿದೆ ಎಂದರು. ಬನಾರಸ್ ಸಿನಿಮಾವನ್ನು ಹಿಂದೂಪರ ಸಂಘಟನೆಗಳ ವಿರೋಧವೇಕೆ ಎನ್ನುವುದು ಗೊತ್ತಿಲ್ಲ. ನನ್ನ ತಂದೆಯವರ ಕಾರಣಕ್ಕೆ ವಿರೋಧಿಸುತ್ತಿದ್ದರೆ ನನಗೂ, ಅದಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.

LEAVE A REPLY

Please enter your comment!
Please enter your name here