ಮಗುವಿಗೆ ಅಂಗವೈಕಲ್ಯತೆ ಉಂಟಾಗದಿರಲಿ ಅಂತ ಐದು ವರ್ಷದ ಒಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೊ ಹಾಕ್ಸೋದು ವಾಡಿಕೆ. ಆದ್ರೆ ಪೋಲಿಯೊ ಲಸಿಕೆ ಹಾಕಿಸಿ ಒಂದು ಘಂಟೆಯೊಳಗೆ ಮಗುವೊಂದು ಸಾವನ್ನಪ್ಪಿರುವ ಧಾರುಣ ಘಟನೆಯೊಂದು ನಡೆದುಹೋಗಿದೆ. ಆಂಧ್ರ ಪ್ರದೇಶದ ಪುಷ್ಪಾಪತಿ ಪಲೇಮ್‍ನ ಕೂಲಿ ಕಾರ್ಮಿಕರಾದ ಗೆಟ್ಟಯ್ಯ ಮತ್ತು ಸ್ವಾತಿ ದಂಪತಿಗಳ ಮಗು ಧರಣಿ ಎಂಬ ಐದು ತಿಂಗಳ ಮಗುವಿಗೆ ಬೆಳಿಗ್ಗೆ 10ರ ಸುಮಾರಿಗೆ ರೆಲ್ಲಿವಾಸ್ಲಾ ಬೂತ್‍ನಲ್ಲಿ ಪೋಲಿಯೊ ಲಸಿಕೆ ಹಾಕಿಸಲಾಗಿದೆ. ಅದಾದ ನಂತರ ಮಗುವಿನ ತಾಯಿ ಹಾಲುಣಿಸಿದ್ದಾರೆ. ಹಾಲು ಕುಡಿದ ಮಗು ಒಂದೆರಡು ನಿಮಿಷಗಳ ನಂತರ ವಾಂತಿ ಮಾಡಲು ಆರಂಭಿಸಿದೆ. ಈ ವೇಳೆ ಆತಂಕಗೊಂಡ ದಂಪತಿಗಳು ಲಸಿಕೆ ಹಾಕಿಸಿದ್ದ ಬೂತ್‍ಗೆ ತೆರಳಿದ್ದಾರೆ. ಕೂಡಲೇ ಪ್ರಾಥಮಿಕ ಆಸ್ಪತ್ರೆಗೆ ಮಗುವನ್ನು ಕರೆದೊಯ್ದು ತುರ್ತು ಚಿಕಿತ್ಸೆ ನೀಡಿ ಆನಂತರ ಜಿಲ್ಲಾ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲು ತಿಳಿಸಿದ್ದಾರೆ. ಕೂಡಲೆ ಮಗುವನ್ನು ಬೋಗಪುರಂನಲ್ಲಿರುವ ಸಮುದಾಯ ಆಸ್ಪತ್ರೆಗೆ ಕರೆ ತಂದಿದ್ದಾರೆ. ವೈದ್ಯರು ಮಗುವನ್ನು ಪರೀಕ್ಷೆ ನಡೆಸಿದಾಗ ಮಗು ಸಾವನ್ನಪ್ಪಿರುವ ವಿಷಯ ತಿಳಿದು ಬಂದಿದೆ. ಉಸಿರಾಟ ತೊಂದರೆಯಿಂದ ಮಗು ಸಾವನ್ನಪ್ಪಿರಬಹುದು ಎಂದು ವೈದ್ಯೆ ಪದ್ಮಜಾ ತಿಳಿಸಿದ್ದಾರೆ. ಇನ್ನು ಪೋಲಿಯೋ ಲಸಿಕೆ ಹಾಕಿಸುವ ಸಮಯದಲ್ಲಿ ಮಗುವಿಗೆ ಸ್ವಲ್ಪ ಜ್ವರ ಇತ್ತು ಎಂಬುದು ತಿಳಿದು ಬಂದಿದೆ. ಲಸಿಕೆ ಹಾಕಿಸಿದ ನಂತರ ಅರ್ಧ ಗಂಟೆಗಳ ಕಾಲ ಮಗುವಿನ ಮನಸ್ಥಿತಿಯ ಬಗ್ಗೆ ಅವಲೋಕನ ಮಾಡಲಾಗಿತ್ತು ಆನಂತರ ಪೋಷಕರಿಗೆ ಮನೆಗೆ ಕರೆದುಕೊಂಡು ಹೋಗಲು ತಿಳಿಸಿದ್ದೆವು ಎಂದು ವೈದ್ಯರು ತಿಳಿಸಿದ್ದಾರೆ. ಆದ್ರೆ ನರ್ಸ್ ಹೇಳುವ ಪ್ರಕಾರ ಪೋಷಕರು ಶನಿವಾರ ರೇಶನ್ ತರಲು ಹೋದಾಗ ಜೊತೆಯಲ್ಲಿ ಮಗುವನ್ನೂ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಸುಮಾರು ಕಾಲ ಮಗುವನ್ನು ಬಿಸಿಲಿನಲ್ಲಿ ಕಾಯಿಸಿದ್ದಾರೆ. ಇದರಿಂದ ಮಗುವಿಗೆ ತುಂಬಾ ಜ್ವರ ಬಂದಿತ್ತು ಎಂದು ಹೇಳಿದ್ದಾರೆ. ಲಸಿಕೆ ಹಾಕುವ ಸಂದರ್ಭದಲ್ಲಿ ಮಗುವಿಗೆ ಸ್ವಲ್ಪ ಪ್ರಮಾಣದಲ್ಲಿ ಜ್ವರವಿತ್ತು ಅದಾದ ನಂತರ ಮಗುವಿಗೆ ತಾಯಿ ಹಾಲುಣಿಸಿದ್ದಾರೆ. ಸ್ವಲ್ಪ ಸಮಯದಲ್ಲೆ ಮಗು ವಾಂತಿ ಮಾಡಿಕೊಳ್ಳಲು ಆರಂಭಿಸಿದೆ. ಈ ವೇಳೆ ಜ್ವರ ಹೆಚ್ಚಾಗಿ ಮಗು ಸಾವನ್ನಪ್ಪಿದೆ ಎಂದು ಜಿಲ್ಲಾ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಇದೇ ಬೂತ್‍ನಲ್ಲಿ ಸುಮಾರು 88 ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕಿದ್ದು, ಮಗುವಿಗೆ ಹಾಕಿದ್ದ ಪೋಲಿಯೊ ಲಸಿಕೆಯಿದ್ದ ಬಾಟಲ್‍ನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂಬುದು ತಿಳಿದು ಬಂದಿದೆ.
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಬಿಗ್‍ಬಾಸ್‍ನಲ್ಲಿ ಗೆದ್ದ ಹಣವನ್ನ ಏನ್ಮಾಡ್ತಾರಂತೆ ಗೊತ್ತಾ ಪ್ರಥಮ್..?
ಬಾಗಲಕೋಟೆ ಹುಡುಗರ ಮಾಸ್ತಿಗುಡಿ ಕ್ಲೈಮ್ಯಾಕ್ಸ್ ಗೆ ಸಿಕ್ತು ಸಖತ್ ರೆಸ್ಪಾನ್ಸ್..!
2019ರ ವರ್ಲ್ಡ್ ಕಪ್‍ನಲ್ಲಿ ಪಾಕ್ ಆಡೋದು ಬಹುತೇಕ ಡೌಟ್..! ಯಾಕೆ ಗೊತ್ತಾ..?
ಕಂಬಳ ಆಡುವವರಿಗೆ ಮಾನ ಮರ್ಯಾದೆ ಇಲ್ಲ ಎಂದ ಸ್ವಾತಂತ್ರ್ಯ ಹೋರಾಟಗಾರ
ಈ ದೇಶದಲ್ಲಿ 70 ಲೀಟರ್ ಪೆಟ್ರೋಲ್ ಬೆಲೆ ಕೇವಲ 95 ರೂಪಾಯಿ ಮಾತ್ರ..!