ನಿಮ್ಮ ಪ್ರಕಾರ ಹೆಚ್ಚು ಸಾವು ಯಾವುದರಿಂದ ಸಂಭವಿಸ್ತಿದೆ..? ಏಡ್ಸ್, ಪ್ರಕೃತಿ ವಿಕೋಪ, ಹೊಟ್ಟೆ ಹಸಿವು..? ನೀವು ನಂಬ್ತಿರೋ ಬಿಡ್ತೀರೋ ಹೆಚ್ಚು ಮಂದಿ ಸಾಯ್ತಾ ಇರೋದು ಮಾಲಿನ್ಯ ದಿಂದ..! ಅಷ್ಟೇ ಅಲ್ಲ ಇದಕ್ಕಿಂತಲೂ ಆಘಾತಕಾರಿ ವಿಷ್ಯಾ ಅಂದ್ರೆ ಈ ಮಾಲನ್ಯದಿಂದ ಸಾಯ್ತಾ ಇರೋದ್ರಲ್ಲಿ ಭಾರತಕ್ಕೆ ನಂಬರ್ 1 ಪಟ್ಟ..!
ಹೌದು, ಪ್ರತಿಷ್ಠಿತ ಲ್ಯಾನ್ಸೆಟ್ ಮೆಡಿಕಲ್ ಜರ್ನಲ್ ವರದಿಯಿಂದ ಈ ಸತ್ಯ ಬಯಲಾಗಿದೆ. ಮಾಲಿನ್ಯದಿಂದ ಉಂಟಾಗ್ತಾ ಇರೋ ಸಾವಿನ ಸಂಖ್ಯೆಯಲ್ಲಿ ಭಾರತ ನಂಬರ್ 1 ಪಟ್ಟದಲ್ಲಿದ್ದರೆ, ಚೀನಾ ಎರಡನೇ ಸ್ಥಾನದಲ್ಲಿದೆ..!
ವರದಿ ಪ್ರಕಾರ 2015ರಲ್ಲಿ ವಿಶ್ವದಲ್ಲಿ ಶೇ 16ರಷ್ಟು ಸಾವು ಮಾಲಿನ್ಯದಿಂದ ಸಂಭವಿಸಿದೆ. ಇದರಲ್ಲಿ ಭಾರತದಲ್ಲಿಯೇ ಸುಮಾರು 25 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ. ಇನ್ನೊಂದು ಅಂಶವೆಂದರೆ ಈ 25 ಲಕ್ಷ ಸಾವಿನಲ್ಲಿ 18 ಲಕ್ಷ ಮಂದಿ ವಾಯು ಮಾಲಿನ್ಯದಿಂದಾಗಿ ಸಾವನ್ನಪ್ಪಿದ್ದಾರೆ..!
ದೇಶದ 75 ಸ್ಥಳಗಳಲ್ಲಿ ಫೀಲ್ಡ್ ರಿಸರ್ಚ್ ಮಾಡಿ ಮಾಹಿತಿ ಕಲೆಹಾಕಲಾಗಿದೆ. ಅಧ್ಯಯಮ ನಡೆಸಿದ 75 ಸ್ಥಳಗಳಲ್ಲಿ ಕರ್ನಾಟಕದ 17 ಸ್ಥಳಗಳು ಸೇರಿವೆ.