ಸಿನಿಮಾ ಕ್ಷೇತ್ರದಲ್ಲಿ ಗಟ್ಟಿಯಾಗಿ ನೆಲೆ ನಿಲ್ಲೋದು ಅಷ್ಟು ಸುಲಭವಲ್ಲ. ಕಲೆಯ ಜೊತೆಗೆ ಅದೃಷ್ಟವೂ ಒಲಿದಿರಬೇಕು. ಭಾರತೀಯ ಹುಡುಗನೊಬ್ಬ ಈಗ ಲ್ಯಾಟಿನ್ ಅಮೆರಿಕಾದಲ್ಲಿ ಸೂಪರ್ ಸ್ಟಾರ್ ಆಗಿದ್ದಾನೆ..!
ಬಾಲಿವುಡ್ ನಲ್ಲಿ ವಿಲನ್ ಪಾತ್ರಗಳ ಮೂಲಕ ಮಿಂಚಬೇಕೆಂದು ಕನಸುಕಂಡಿದ್ದ ಬಿಹಾರ ಮೂಲದ ಪ್ರಭಾಕರ್ ಶರಣ್ ಗೆ ಅವಕಾಶ ಸಿಗಲಿಲ್ಲ.
ನಂತರ 2000 ನೇ ಇಸವಿಯಲ್ಲಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಕೋಸ್ಟರಿಕಾಗೆ ಹೋದ್ರು. 2010ರಲ್ಲಿ ರೆಸ್ಟೋರೆಂಟ್ ಅಂಡ್ ಕ್ಲೋತ್ ಬ್ಯುಸ್ ನೆಸ್ ಆರಂಭಿಸಿದ್ರು. ಇದರಲ್ಲಿ ತೃಪ್ತಿ ಕಾಣದೆ ಸಿನಿಮಾ ಮೇಲಿನ ಆಸಕ್ತಿಯಿಂದ Enredados: La Confusion ಎಂಬ ಸಿನಿಮಾವನ್ನು ಬಾಲಿವುಡ್ ಶೈಲಿಯಲ್ಲಿ ನಿರ್ಮಿಸಿ ಕೋಸ್ಟಾರಿಕಾದಲ್ಲಿ ಸೂಪರ್ ಸ್ಟಾರ್ ಆಗಿ ಬೆಳೆದಿದ್ದಾರೆ. 2017ರಲ್ಲಿ ಲ್ಯಾಟಿನ್ ಅಮೆರಿಕಾದ ಜನಪ್ರಿಯ ಸಿನಿಮಾಗಳಲ್ಲಿ ಈ ಸಿನಿಮಾ ಸಹ ಒಂದಾಗಿತ್ತು.