ಹೌದು ಸ್ವಾಮಿ.. ಪ್ರಥಮ್‍ಗೆ ಬಿಗ್‍ಬಾಸ್ ಕರ್ದೇ ಇರ್ಲಿಲ್ವಂತೆ..!

Date:

ಬಿಗ್‍ಬಾಸ್ ಅಂದಕೂಡ್ಲೇ ಅದ್ರಲ್ಲಿ ಮೊದಲು ನೆನ್ಪಾಗೋದೇ ಕಿರಿಕ್ ಪಾರ್ಟಿಗಳು, ಜಗಳ ಕಾಯೋರು.. ಅದೇ ರೀತಿಯಾಗಿ ಈ ಬಾರಿಯ ಅಂತಹ ಕಿರಿಕ್ ಯಾರು ಅನ್ನೋ ಕುತೂಹಲ ಎಲ್ಲರಿಗೂ ಇತ್ತು ಬಿಡಿ.. ಅದರ ಸ್ಥಾನ ತುಂಬ್ದೋರು ಮಾತ್ರ ಪ್ರಥಮ್.. ಅಲ್ಲ ಅಲ್ಲ ಒಳ್ಳೆ ಹುಡ್ಗ ಪ್ರಥಮ್ ಕಂಡ್ರೀ..! ಆದ್ರೆ ನಿಮ್ಗೆಲ್ಲಾ ಒಂದ್ ಸತ್ಯ ಗೊತ್ತಾ.. ಈ ಒಳ್ಳೆ ಹುಡ್ಗಾ ಪ್ರಥಮ್ ಯಾರೂ ಅಂತಾನೆ ಬಿಗ್‍ಬಾಸ್‍ಗೆ ಗೊತ್ತೇ ಇರ್ಲಿಲ್ವಂತೆ ನೋಡಿ.. ಮತ್ತೆ ಹೇಗೆ ಬಿಗ್‍ಬಾಸ್ ಮನೆಗೆ ಎಂಟ್ರಿ ಕೊಟ್ಟಾ ಈ ಪ್ರಥಮ್ ಅಂತ ಕೇಳ್ತೀರಾ..? ಇಲ್ಲಿದೆ ನೋಡಿ ಸಖತ್ ಇಂಟ್ರೆಸ್ಟಿಂಗ್ ಸ್ಟೋರಿ..

pratham17

pratham1
ಪ್ರಥಮ್ ಮೂಲತಃ ಮೈಸೂರಿನ ಹುಡ್ಗ. ವಿದ್ಯಾಭ್ಯಾಸವನ್ನೆಲ್ಲಾ ಮೈಸೂರ್‍ನಲ್ಲೇ ಮುಗಿಸಿದ ಈ ಒಳ್ಳೆ ಹುಡ್ಗ.. ಸ್ಯಾಂಡಲ್‍ವುಡ್‍ಗೆ ಪರಿಚಯವಾದದ್ದು ‘ದೇವ್ರಿದಾನೆ ಬಿಡು ಗುರು’ ಎಂಬ ಸಿನಿಮಾ ನಿರ್ದೇಶನದ ಮೂಲಕ. ಈ ಚಿತ್ರದ ಹೀರೋ ಕಳೆದ ಬಾರಿಯ ಬಿಗ್‍ಬಾಸ್ ವಿಜೇತ ಅಖುಲ್ ಬಾಲಾಜಿ. ಇನ್ನು ಈ ಚಿತ್ರ ಪೂರ್ಣಗೊಳ್ಳೋಕು ಮೊದ್ಲು ಪ್ರಥಮ್ ಮತ್ತೊಂದು ಪ್ರಾಜೆಕ್ಟ್‍ಗೆ ಕೈ ಹಾಕಿದ್ರಂತೆ ಅದೇ ‘ಯಾರ್ರಿ ಒಳ್ಳೆ ಹುಡುಗ’. ಇದು ಪ್ರಥಮ್‍ನ ಈ ಹಿಂದಿನ ಚರಿತ್ರೆ.. ಆದ್ರೆ ಬಿಗ್‍ಬಾಸ್‍ಗೂ ಇವರಿಗೂ ಏನ್ ಸಂಬಂಧ ಅಂತ ನೀವ್ ಕೇಳಿದ್ರೆ.. ಮೊದ್ಲಿಗೆ ಬಿಗ್‍ಬಾಸ್ ಪ್ರಥಮ್‍ಗೆ ಕರೆಯೋದೋಗ್ಲಿ ಅವನ್ಯಾರು ಅಂತಾನೆ ಗೊತ್ತಿರ್ಲಿಲ್ವಂತೆ.. ತಾನಾಗಿಯೇ ಈ ಬಾರಿಯ ಬಿಗ್‍ಬಾಸ್ ಸ್ಪರ್ಧಾಳುಗಳಲ್ಲಿ ಒಬ್ಬನಾಗಲೇ ಬೇಕು ಎಂದು ನಿರ್ಧರಿಸಿದ ಪ್ರಥಮ್ ಸೀದಾ ಅವನು ಮೊದಲು ಭೇಟಿಯಾದದ್ದು ಕಲರ್ಸ್ ವಾಹಿನಿಯ ಬ್ಯುಸಿನೆಸ್ ಹೆಡ್ ಪರಮೇಶ್ ಗುಂಡ್ಕಲ್ ಅವರನ್ನ.. ಸೀದಾ ಅವರ ಚೇಂಬರ್‍ಗೆ ಹೋದ ಪ್ರಥಮ್.. ನೀವೇನ್ ಮಾಡ್ತೀರೋ ಗೊತ್ತಿಲ್ಲ ನಂಗೂ ಬಿಗ್‍ಬಾಸ್‍ಗೆ ಎಂಟ್ರಿ ಕೊಡಿ ಎಂದು ಕೇಳೇ ಬಿಟ್ರಂತೆ ನೋಡಿ.. ಹಿಂದೂ ಮುಂದು ಗೊತ್ತಿಲ್ಲದ ವ್ಯಕ್ತಿಯನ್ನು ಬಿಗ್‍ಬಾಸ್‍ಗೆ ಕಳ್ಸೋದು ಅಂದ್ರೆ ತಮಾಷೆಯ ಮಾತೇನೂ ಅಲ್ಲ.. ಯಾರಪ್ಪಾ ನೀನು..? ಎಲ್ಲಿಂದ ಬಂದಿದೀಯ..? ಬಿಗ್‍ಬಾಸ್‍ಗೆ ಕಳ್ಸೋಕೆ ನೀನ್ ಅದೇನ್ ದೊಡ್ ಸಾಧನೆ ಮಾಡಿದೀಯಾ..? ಹೇಳು ಎಂದು ಗುಂಡ್ಕಲ್ ಕೇಳಿದ್ರಂತೆ.. ಅದಕ್ಕೆ ಪ್ರಥಮ್ ನಾನು ಈ ಬಾರಿಯ ಬಿಗ್‍ಬಾಸ್‍ಗೆ ಹೋಗ್ಲೇ ಬೇಕು ಅದಕ್ಕಾಗಿ ನೀವೇನೇ ಹೇಳುದ್ರೂ ಮಾಡ್ತೇನೆ ಎಂದಿದ್ದಾನೆ.

pratham2

 

pratham4

pratham11

pratham12

pratham13

pratham14

pratham15

pratham16

pratham5

ಅದಕ್ಕೆ ಗುಂಡ್ಕಲ್ ಒಂದಿಷ್ಟು ರಾಜಕಾರಣಿಗಳ ಬಳಿ ಬಿಗ್‍ಬಾಸ್ ಕಾರ್ಯಕ್ರಮದ ಬಗ್ಗೆ ಮಾತನಾಡಿಸಿಕೊಂಡು ಬರಲು ಹೇಳಿದ್ದರಂತೆ.. ನೀವು ನಂಬ್ತೀರೋ ಬಿಡ್ತೀರೋ ಪ್ರಥಮ್ ಗುಂಡ್ಕಲ್ ಹೇಳಿದ್ದಕ್ಕಿಂತ ಹೆಚ್ಚಿನ ರಾಜಕಾರಣಿಯ ಜೊತೆ ಮಾತನಾಡಿಸಿದ್ದನಂತೆ.. ಅಷ್ಟೇ ಅಲ್ಲಾ ಸ್ವಾಮಿ ಗುಂಡ್ಕಲ್ ಹೇಳದೇ ಇದ್ರೂ ಸಿಎಂ ಸಿದ್ದರಾಮಯ್ಯ ಅವರನ್ನೂ ಕ್ಯಾಮರಾ ಮುಂದೆ ಕೂರಿಸಿ ಬಿಗ್‍ಬಾಸ್ ಬಗ್ಗೆ ಮಾತನಾಡಿಸಿದ್ದನಂತೆ.. ಇದನ್ನೆಲ್ಲಾ ಕಂಡ ಗುಂಡ್ಕಲ್ ಅವರಿಗೆ ಈ ಬಾರಿಯ ಬಿಗ್‍ಬಾಸ್‍ಗೆ ಇವನೇ ಸರಿಯಾದ ವ್ಯಕ್ತಿ ಎಂದು ಆಯ್ಕೆ ಮಾಡಿದ್ದಾರೆ. ಇನ್ನು ಪ್ರಥಮ್ ಬಿಗ್‍ಬಾಸ್‍ಗೆ ಎಂಟ್ರಿ ಕೊಟ್ಟ ಮೊದಲ ದಿನದಿಂದಲೇ ತನ್ನ ವರಸೆ ತೋರ್ಸಿದ್ದು ಇಡೀ ಕರ್ನಾಟಕವೇ ಅಚ್ಚರಿಗೊಳ್ಳುವಂತೆ ಬಿಗ್‍ಬಾಸ್ ಮನೆಯಲ್ಲಿ ನಡೆದುಕೊಳ್ಳೋದು ನೀವು ನೋಡ್ತಾ ಇದೀರಲ್ವ..!

pratham6

pratham7

pratham8

pratham9

pratham10

Like us on Facebook  The New India Times

POPULAR  STORIES :

ಹತ್ತು ರೂ ಜಗಳಕ್ಕೆ ಏಳು ವರ್ಷ ಸಜೆ..!

ಪ್ರಧಾನಿ ಅಂಗಳಕ್ಕೆ ತಲುಪಿದ ಜಗನ್-ಚಂದ್ರಬಾಬು ಬ್ಲಾಕ್‍ಮನಿ ಫೈಟ್..!

ಇನ್ನು ಕ್ರಿಕೆಟ್ ಮೈದಾನದಲ್ಲಿ 14 ಜನ ಫೀಲ್ಡರ್..!

ಪುಣೆಯಲ್ಲಿ ಭುಗಿಲೆದ್ದ ದಲಿತರು-ಮರಾಠರ ಸಂಘರ್ಷ..!

ವಿಷ ಕುಡಿದು ಆತ್ಮಹತ್ಯೆ ಯತ್ನಿಸುವ ನಾಟಕವಾಡಿದ ರೈತನ ವಿಡಿಯೋ ವೈರಲ್..!

ಜಿಯೋ ಗ್ರಾಹಕರಿಗೆ ಶಾಕಿಂಗ್ ನ್ಯೂಸ್.. ಸ್ಪೀಡ್ ಕಳೆದುಕೊಳ್ಳುತ್ತಿದೆ ಜಿಯೋ ಸಿಮ್..!

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...