ಅಸಲಿಗೆ 'ಒಳ್ಳೆಯ ಹುಡುಗ'ನ ಹೆಸರು ಪ್ರಥಮ್ ಅಲ್ಲ..! ಮತ್ತೇನು?

Date:

ಒಳ್ಳೆಯ ಹುಡುಗ ಪ್ರಥಮ್…ಹೆಚ್ಚು ಕಡಿಮೆ ಅರ್ಧ ಕರ್ನಾಟಕ್ಕೆ ಪರಿಚಯ ಆಗಿಬಿಟ್ಟಿದ್ದಾರೆ..! ಮಾಜಿ ಪ್ರಧಾನಿ ದೇವೇಗೌಡರ , ಮಾಜಿ ಉಪಮುಖ್ಯಮಂತ್ರಿ ಈಶ್ವರಪ್ಪರ ಮೊಮ್ಮಗ ಅಂತ ಹೇಳಿಕೊಂಡು ಅಲ್ಲ ಅಲ್ಲ ಅವರ ಬಾಯಲ್ಲೇ ಹೇಳಿಸಿಕೊಂಡು ಬಂದ ಪ್ರಥಮ್ ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಡೋ ಮೊದಲು ಕಿಚ್ಚ ಸುದೀಪರನ್ನ ಮಾವ ಅಂತ ಕರೆದು ಎಲ್ಲರನ್ನೂ ಕಕ್ಕಾಬಿಕ್ಕಿ ಮಾಡಿದ್ದ ಪ್ರಥಮ್..!
ಬಿಗ್ ಬಾಸ್ ಮನೆಗೆ ಬಲಗಾಲಿಟ್ಟು ಹೋದ ಮೇಲೆ ಉಳಿದ 14 ಸ್ಪರ್ಧಿಗಳಿಗೂ ದೊಡ್ಡ ತಲೆಬೇನೆ ಆಗಿದ್ದು, ಕೀರ್ತಿಕುಮಾರ್ (ಕಿರಿಕ್ ಕೀರ್ತಿ) ಜೊತೆ ಸುಖಾ ಸುಮ್ಮನೆ ಗಲಾಟೆ ಮಾಡಿದ್ದು ಎಲ್ಲವೂ ಈಗ ಸಧ್ಯಕ್ಕೆ ಮುಗಿದ ಅಧ್ಯಾಯ(ಇರೋ ಅಷ್ಟು ದಿನ ಪ್ರಥಮ್ ತರ್ಲೆ ತಪ್ಪಲ್ಲ ಅಲ್ವಾ?)
ಈಗ ಹೊಸ ವಿಷಯ ಅಂದ್ರೆ ಪ್ರಥಮ್, ಅಲ್ಲ ಅಲ್ಲ ಒಳ್ಳೆಯ ಹುಡುಗ ಪ್ರಥಮ್ ಹೆಸರೇ ಪ್ರಥಮ್ಮೇ ಅಲ್ಲ..!
ಅಸಲಿಗೆ ದೇವೇಗೌಡರ, ಈಶ್ವರಪ್ಪರ ಮೊಮ್ಮಗನೂ, ಕಿಚ್ಚ ಸುದೀಪರ ಅಳಿಯನೂ ಅಲ್ಲದ ಒಳ್ಳೆಯ ಹುಡುಗನ ಅಸಲಿ ಹೆಸರು ಕೂಡ ಪ್ರಥಮ್ ಎಂದಲ್ಲ..!
ಇಂಜಿನಿಯರಿಂಗ್ ಮಾಡೋಕೆ ಹೋಗಿ ಅರ್ಧಕ್ಕೆ ಬಿಟ್ಟು ಬಂದ ಒಳ್ಳೇ ಹುಡಗ , ಸಿನಿಮಾ ಇಂಡಸ್ಟ್ರಿ ಯತ್ತ ಮುಖ ಮಾಡಿದ್ರು..! ಆಗ ಅವರ ಅಪ್ಪ ಅದನ್ನು ವಿರೋಧಿಸಿದ್ರು ..ಅದಕ್ಕೆ ಕೋಪಿಸಿಕೊಂಡು ಮನೆ ಬಿಟ್ರು..! ಮನೆ ಬಿಡುವಾಗ ಅವರ ಹೆಸರು ಸಿದ್ಧಾಂತ್ ಅಂತೆ..! ಆಮೇಲೆ, ಪ್ಯೂರ್ವೆಜ್ ಪ್ರಥಮ್ ಅಂತ ಹೆಸರು ಇಟ್ಕೊಂಡ್ರು..! ಬಳಿಕ ಬಡವರ ಬಂದು ಪ್ರಥಮ್ ಆದ್ರು..! ಈಗ ನಿಮಗೆಲ್ಲಾ ಗೊತ್ತಿರುವಂತೆ ಒಳ್ಳೆಯ ಹುಡುಗ ಪ್ರಥಮ್ ಅಂತ ನಾಮಕರಣ ಮಾಡಿಕೊಂಡಿದ್ದಾರೆ..!

b7ksflxciaearl9

ಮೊದಲಿನಿಂದಲೂ ಒಳ್ಳೇ ರೀತೀಲೋ ಕೆಟ್ ರೀತೀಲಿ ಒಟ್ನಲ್ಲಿ ಫೇಮಸ್ ಆಗೋ ಹುಚ್ಚು..! ಫೇಮಸ್ ಆಗೋಕೆ ಏನ್ ಬೇಕಾದ್ರು ಮಾಡೋಕೆ ರೆಡಿ ಅಂತ ಹೊರಟು ಬಂದ ಸಿದ್ಧಾಂತ್ ಅಲಿಯಾಸ್ ಪ್ರಥಮ, ಅಕುಲ್ ಬಾಲಜಿನ ಹಾಕ್ಕೊಂಡು ದೇವ್ರವ್ನೆ ಬುಡು ಗುರು ಸಿನಿಮಾ ಮಾಡಿದ್ದಾರೆ..! ಬಿಗ್ ಬಾಸ್ ಮನೆಯಿಂದ ಆಚೆ ಬಂದ್ಮೇಲೆ ರಿಲೀಸ್ ಮಾಡ್ತಾರಂತೆ..!

Like us on Facebook  The New India Times

POPULAR  STORIES :

ಮೊಬೈಲ್ ಚಾರ್ಜರನ್ನು ವೈರ್‍ಲೆಸ್ ಚಾರ್ಜರ್ ಆಗಿ ಮಾಡೋ ಸಿಂಪಲ್ ವಿಧಾನ..!

ಇಲಿಗಳ ದಾಳಿಗೆ ನವಜಾತ ಶಿಶು ಬಲಿ..!

ವಿಶ್ವದಲ್ಲೇ ಅತೀ ಹೆಚ್ಚು ಸಂಬಳ ಪಡೆಯುವ ಪ್ರಧಾನಿ ಯಾರು ಗೊತ್ತಾ..?

ಹೌದು ಸ್ವಾಮಿ.. ಪ್ರಥಮ್‍ಗೆ ಬಿಗ್‍ಬಾಸ್ ಕರ್ದೇ ಇರ್ಲಿಲ್ವಂತೆ..!

ಹತ್ತು ರೂ ಜಗಳಕ್ಕೆ ಏಳು ವರ್ಷ ಸಜೆ..!

ಪ್ರಧಾನಿ ಅಂಗಳಕ್ಕೆ ತಲುಪಿದ ಜಗನ್-ಚಂದ್ರಬಾಬು ಬ್ಲಾಕ್‍ಮನಿ ಫೈಟ್..!

ಇನ್ನು ಕ್ರಿಕೆಟ್ ಮೈದಾನದಲ್ಲಿ 14 ಜನ ಫೀಲ್ಡರ್..!

Share post:

Subscribe

spot_imgspot_img

Popular

More like this
Related

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ ಇತ್ತೀಚಿನ ದಿನಗಳಲ್ಲಿ ಮೌತ್‌ವಾಶ್...

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...