ಬಿಗ್‍ಬಾಸ್‍ನಲ್ಲಿ ಗೆದ್ದ ಹಣವನ್ನ ಏನ್ಮಾಡ್ತಾರಂತೆ ಗೊತ್ತಾ ಪ್ರಥಮ್..?

Date:

ಕನ್ನಡದ ಪ್ರಖ್ಯಾತ ರಿಯಾಲಿಟಿ ಶೋ ಬಿಗ್‍ಬಾಸ್ ಸೀಸನ್-4 ಭಾನುವಾರ ವಿಜೃಂಬಣೆಯಿಂದ ತೆರೆ ಕಂಡಿದ್ದು, ಈ ಗ್ರಾಂಡ್ ಫಿನಾಲೆ ಹಲವು ಅಚ್ಚರಿಗಳಿಗೆ ಕಾರಣವಾಯ್ತು. ಭಾನುವಾರ ಎಲ್ಲರಿಗೂ ಕುತೂಹಲ ಕೆರಳಿಸಿದ್ದ ಈ ಸೀಸನ್‍ನ ವಿನ್ನರ್ ಯಾರು..? ಎಂಬ ಪ್ರಶ್ನೆಗೆ ರಿಯಾಲಿಟಿ ಶೋ ವೀಕ್ಷಿಸುವ ಕೋಟ್ಯಾಂತರ ಪ್ರೇಕ್ಷಕರಿಗೆ ಉತ್ತರ ಸಿಕ್ಕಿದೆ. ಫೈನಲ್‍ನಲ್ಲಿ ಕೇವಲ ಮೂರು ಜನರು ಬಿಗ್‍ಬಾಸ್ ಟ್ರೋಫಿಗೆ ಕಾದಾಟ ನಡೆಸಿದ್ದಾದರೂ ಮನೆಯಿಂದ ರೇಖಾ ಹೊರಗೋಗುವ ಮೂಲಕ ಫೈನಲ್ ಇನ್ನಷ್ಟು ಕುತೂಹಲ ಕೆರಳಿಸಿತ್ತು. ಕೊನೆಗೆ ಮನೆಯಲ್ಲಿದ್ದ ಕೀರ್ತಿ ಹಾಗೂ ಪ್ರಥಮ್ ಅವರನ್ನು ವೇದಿಕೆಗೆ ಕರೆತಂದ ಕಿಚ್ಚ ಸುದೀಪ್ ಈ ಸೀಸನ್ ವಿನ್ನರ್ ಪ್ರಥಮ್ ಎಂದು ಘೋಷಿಸಿದ್ರು. ಸಂತೋಷದ ಭರದಲ್ಲಿ ಪ್ರಥಮ್ ತಾನು ಹಾಕಿದ್ದ ಬಟ್ಟೆಯನ್ನೆ ಬಿಚ್ಚಿ ವೇದಿಕೆಯಲ್ಲಿ ಕುಣಿಯ ಕುಪ್ಪಳಿಸಿದ್ರು. ನಂತರ ಸುದೀಪ್ ವಿತರಿಸಿದ ಈ ಸೀಸನ್‍ನ ಟ್ರೋಫಿ ಹಾಗೂ 50 ಲಕ್ಷ ಹಣವನ್ನು ಸಂತೋಷದಿಂದ ಸ್ವೀಕರಿಸಿದ್ರು. ವಿಶೇಷ ಏನಂದ್ರೆ ಬಿಗ್‍ಬಾಸ್ ಮನೆಯಲ್ಲಿದ್ದಾಗ ನಾನು ಬಿಗ್‍ಬಾಸ್ ಫೈನಲ್‍ನಲ್ಲಿ ಗೆದ್ರೆ ಮೈಸೂರ್‍ನಲ್ಲಿ ನನ್ನ ತಂದೆ ಮಲ್ಲಣ್ಣನ ಮನೆಯ ಪಕ್ಕದಲ್ಲೆ ಒಂದು ಇಂಚು ಎತ್ತರದ ಮನೆಯನ್ನ ಕಟ್ಟಿ ತೋರುಸ್ತೀನಿ ಎಂದೇಳಿದ್ದ ಪ್ರಥಮ್ ವೇದಿಕೆ ಮೇಲೆ ನಾನು ಗೆದ್ದ ಈ ಹಣದಲ್ಲಿ ಒಂದು ಪೈಸೆಯೂ ನನಗೆ ಬೇಡ ಎಂದೇಳುವ ಮೂಲಕ ಜನ ಮೆಚ್ಚುಗೆಗೆ ಪಾತ್ರರಾದ್ರು. ನನಗೆ ಬಂದ ಈ ಹಣದಲ್ಲಿ ಒಂದು ಪೈಸೆಯೂ ನನಗೆ ಬೇಡ ನನ್ನ ಅಪ್ಪನ ಹಳ್ಳಿಗೆ ಈ ಹಣದಿಂದ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡುತ್ತೀನಿ, ದೇಶಕ್ಕಾಗಿ ತನ್ನ ಪ್ರಾಣವನ್ನೆ ತ್ಯಾಗ ಮಾಡಿದ ವೀರ ಯೋಧರ ಕುಟುಂಬಗಳಿಗೆ ಈ ಹಣದಿಂದ ಸಹಾಯ ಮಾಡ್ತೇನೆ. ನಮಗೆ ಅನ್ನ ನೀಡುತ್ತಿರುವ ಬಡ ರೈತ ಕುಟುಂಬಗಳಿಗೆ ಈ ಹಣ ಮೀಸಲಿಟ್ಟಿರುತ್ತೇನೆ ಎಂದು ವೇದಿಕೆಯ ಮೇಲೆ ಪ್ರತಿಜ್ಞೆ ಮಾಡಿದ್ರು ಪ್ರಥಮ್. ಮಗನ ಈ ನಿರ್ಧಾರಕ್ಕೆ ಸಂತೋಷದಿಂದ ಒಪ್ಪಿಕೊಂಡ ತಂದೆ ಮಲ್ಲಣ್ಣನವರು ನಿನ್ನ ಮುಂದಿನ ಜೀವನಕ್ಕೆ ಏನು ಬೇಕೋ..? ಅದನ್ನೆಲ್ಲಾ ನಾನು ಮಾಡ್ತೆನೆ ಈ ಹಣವನ್ನು ನೀನು ಸಮಾಜ ಸೇವೆಗೆ ಮುಡಿಪಾಗಿಡು ಎಂದು ಹೇಳಿದ್ದಾರೆ. ಇದೇ ವೇಳೆ ರನ್ನರ್ ಅಪ್ ಆದ ಕೀರ್ತಿ ಅವರಿಗೆ ಸುದೀಪ್ ವೈಯಕ್ತಿಕವಾಗಿ 10 ಲಕ್ಷ ನೀಡುವುದಾಗಿ ಹೇಳಿಕೊಂಡಾಗ ಕೀರ್ತಿ ನನಗೆ ಟ್ರೋಫಿ ಗೆದ್ದಿದ್ರೂ ಇದ್ರಷ್ಟು ಖುಷಿ ಆಗ್ತಾ ಇರ್ಲಿಲ್ಲ ಬಿಗ್‍ಬಾಸ್ ಇಲ್ಲಿಯವರೆಗೂ ನೀಡುತ್ತಾ ಬಂದಿರುವ ಹಣದಲ್ಲಿ ಸ್ವಲ್ಪ ಭಾಗವನ್ನು ಅಳಿದು ಹೋಗುತ್ತಿರುವ ಕನ್ನಡ ಶಾಲೆಗಳ ಅಭಿವೃದ್ದಿಗೆ ಮುಡಿಪಾಗಿಟ್ಟಿರುತ್ತೇನೆ ಎಂದು ಹೇಳಿಕೊಂಡಿದ್ದಾರೆ.

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಬಾಗಲಕೋಟೆ ಹುಡುಗರ ಮಾಸ್ತಿಗುಡಿ ಕ್ಲೈಮ್ಯಾಕ್ಸ್ ಗೆ ಸಿಕ್ತು ಸಖತ್ ರೆಸ್ಪಾನ್ಸ್..!

2019ರ ವರ್ಲ್ಡ್ ಕಪ್‍ನಲ್ಲಿ ಪಾಕ್ ಆಡೋದು ಬಹುತೇಕ ಡೌಟ್..! ಯಾಕೆ ಗೊತ್ತಾ..?

ಕಂಬಳ ಆಡುವವರಿಗೆ ಮಾನ ಮರ್ಯಾದೆ ಇಲ್ಲ ಎಂದ ಸ್ವಾತಂತ್ರ್ಯ ಹೋರಾಟಗಾರ

ಈ ದೇಶದಲ್ಲಿ 70 ಲೀಟರ್ ಪೆಟ್ರೋಲ್ ಬೆಲೆ ಕೇವಲ 95 ರೂಪಾಯಿ ಮಾತ್ರ..!

ಅಧ್ಯಕ್ಷ ಸ್ಥಾನ ಏರಿದ ನಂತರ ಮೋದಿಗೆ ಆಹ್ವಾನ ನೀಡಿದ ಟ್ರಂಪ್

ಕಂಬಳದ ಪರವಾಗಿ ಬೆಂಬಲಿಸ್ತೀರಾ..? ನಿಮ್ಮ ಅಭಿಪ್ರಾಯ ತಿಳಿಸಿ

ನವಜಾತ ಶಿಶುವಿಗಿದೆ ನಾಲ್ಕು ಕಾಲು, ಎರಡು ಜನನನಾಂಗ..!

Share post:

Subscribe

spot_imgspot_img

Popular

More like this
Related

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ ಇತ್ತೀಚಿನ ದಿನಗಳಲ್ಲಿ ಮೌತ್‌ವಾಶ್...

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...