ಅವಳು ಪ್ರತ್ಯೂಷ ಬ್ಯಾನರ್ಜಿ ಅರ್ಥಾತ್ ಬಾಲಿಕಾ ವಧು. ಚಂದದ ನಟಿ, ವಯಸ್ಸಿನ್ನೂ ಇಪ್ಪತ್ನಾಲ್ಕು. ಮೂಲತಃ ಬಿಹಾರದವಳು. ಬದುಕಿ ಕಟ್ಟಿಕೊಂಡಿದ್ದು ಮುಂಬೈನಲ್ಲಿ. ಬದುಕನ್ನು ಅಂತ್ಯ ಮಾಡಿಕೊಂಡಿದ್ದು ಇದೇ ಮುಂಬೈನಲ್ಲಿ. ಅವಳಿಗೆ ಎಲ್ಲವೂ ಇತ್ತು, ಅಂದ ಚಂದದ ಜೊತೆ ಅಗಾಧ ಪ್ರತಿಭೆ, ಹೇರಳ ಅವಕಾಶ, ಜನಪ್ರಿಯತೆ ಎಲ್ಲವೆಂದರೇ ಎಲ್ಲವೂ ಸಿಕ್ಕಿತ್ತು. ಆದರೆ ಪರಿಪೂರ್ಣ ಪ್ರೇಮ ಸಿಗದೇ ಪೇಚಾಡತೊಡಗಿದಳು. ಅದೇ ಪ್ರೇಮಕ್ಕಾಗಿ ತನ್ನ ಬದುಕನ್ನು ಮುಗಿಸಿಕೊಂಡಳಾ..? ಸಧ್ಯಕ್ಕೆ ಅದು ಯಕ್ಷಪ್ರಶ್ನೆ.
ಪ್ರತ್ಯೂಷ ಬ್ಯಾನರ್ಜಿ ತೀರಾ ಕಾಡೋದು ಬಾಲಿಕಾ ವಧು ಧಾರಾವಾಹಿಯ ಮೂಲಕ. ಆ ಜನಪ್ರಿಯ ಸೀರಿಯಲ್ನಲ್ಲಿ ಮನೆಮಾತಾಗಿದ್ದ ಈ ನಟಿಯ ಸುಲಲಿತ ನಟನೆಗೆ ಮನಸೋಲದವರೇ ಇರಲಿಲ್ಲ. ಕಲರ್ಸ್ ಹಿಂದಿ ವಾಹಿನಿಯಲ್ಲಿ ಬಾಲಿಕಾ ವಧು ಸೀರಿಯಲ್ ನಲ್ಲಿ ನಟಿಸುತ್ತಿದ್ದಳು. ಇದಕ್ಕೂ ಮುನ್ನ ಅದೇ ವಾಹಿನಿಯಲ್ಲಿ ಕಿಚನ್ ಚಾಂಪಿಯನ್ 4, ಜಲಕ್ ದಿಖ್ಲಾಜಾ ಸೀಸನ್ 5, 2013ರ ಬಿಗ್ ಬಾಸ್ ಸೀಸನ್ ಸವೆನ್ನಲ್ಲಿ ಭಾಗವಹಿಸಿದ್ದಳು. 2015ರ ನಂತರ ಪ್ರತ್ಯೂಷಳನ್ನು ಹಿಡಿದಿಡುವವರೇ ಇರಲಿಲ್ಲ. ಕಿರುತೆರೆ ಜಗತ್ತನ್ನು ಕಿರುಬೆರಳಿನಲ್ಲಿ ಆಡಿಸತೊಡಗಿದಳು. ಸೋನಿ ಎಂಟರ್ ಟೈನ್ ಮೆಂಟ್ ನಲ್ಲಿ ಹಮ್ ಹೈ ನಾ, ಇತ್ನಾ ಕರೋ ನಾ ಮುಝೆ ಪ್ಯಾರ್, ಆಹಟ್, ಪವರ್ಕಟ್, ಸ್ಟಾರ್ ಪ್ಲಸ್ನಲ್ಲಿ ಗುಲ್ ಮೊಹರ್ ಗ್ರಾಂಡ್, ಲೈಫ್ ಓಕೆಯಲ್ಲಿ ಕಾಮಿಡಿ ಕ್ಲಾಸೆಸ್, ಜೀಟಿವಿಯಲ್ಲಿ ಕುಂಕುಮ ಭಾಗ್ಯ- ಹೀಗೆ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಳು.
ಹೀಗಿರುವಾಗ ಜನಪ್ರಿಯತೆಯ ಉತ್ತುಂಗದಲ್ಲಿದ್ದ ಪ್ರತ್ಯೂಷಳ ಬದುಕಿನಲ್ಲಿ ಅವನೊಬ್ಬನ ಪ್ರವೇಶವಾಗಿತ್ತು. ಅವನ ಹೆಸರು ರಾಹುಲ್ ರಾಜ್ ಸಿಂಗ್. ರಾಹುಲ್ ಆಕ್ಟರ್ ಕಂ ನಟನಾಗಿದ್ದ. ಸೋನಿ ಎಂಟರ್ ಟೈನ್ ಮೆಂಟ್ ನಲ್ಲಿ ಪ್ರಸಾರವಾಗಿದ್ದ ಪವರ್ ಕಪಲ್ ಕಾರ್ಯಕ್ರಮದಲ್ಲಿ ಇಬ್ಬರಿಗೂ ಪರಿಚಯವಾಗಿತ್ತು. ಪರಿಚಯ ಪ್ರೇಮಕ್ಕೆ ತಿರುಗಿತ್ತು. ಒಂದು ಹಂತದಲ್ಲಿ ಇವರಿಬ್ಬರಿಗೆ ಮದ್ವೆಯಾಗಿದೆ ಅಂತಾನೂ ಸುದ್ದಿ ಹರಡಿತ್ತು. ಆದರೆ ಅದೆಲ್ಲಾ ಕಥೆ ಎಂದು ಇಬ್ಬರೂ ಸುಮ್ಮನಾದರು. ಆದರೆ ಇಬ್ಬರೂ ಮದ್ವೆಯಾಗಲು ನಿರ್ಧರಿದ್ದಂತೂ ಖರೆ. ಎಲ್ಲಾ ಸರಿಹೋಗಿದ್ದರೇ ಕೆಲವೇ ತಿಂಗಳಲ್ಲಿ ಇಬ್ಬರ ಮದ್ವೆಯಾಗಬೇಕಿತ್ತು. ಈ ಹಂತದಲ್ಲೇ ಪ್ರತ್ಯೂಷ ಬ್ಯಾನರ್ಜಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮುಂಬೈನ ಕಂಡಿವಿಲಿಯ ಬಂಗೂರ್ ನಗರ್ ಫ್ಲಾಟ್ನಲ್ಲಿ ನೇಣುಬಿಗಿದುಕೊಂಡು ಸಾವನ್ನಪ್ಪಿದ್ದಾಳೆ. ಅದಕ್ಕೆ ಕಾರಣ ಪ್ರೇಮವೈಫಲ್ಯ ಇರಬಹುದಾ..? ನಿಖರವಾಗಿ ಹೇಳೋದು ಕಷ್ಟ. ಇದರ ಜೊತೆಗೆ ಮಾನಸಿಕ ಖಿನ್ನತೆಯಿಂದ ನರಳುತ್ತಿದ್ದ ಪ್ರತ್ಯೂಷ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗುತ್ತಿದೆ. ಪೊಲೀಸರು ರಾಹುಲ್ ರಾಜ್ ಸಿಂಗ್ ನನ್ನು ಕರೆಸಿ ವಿಚಾರಿಸುತ್ತಿದ್ದಾರೆ. ಅಸಲಿ ಸತ್ಯಗಳು ಮುಂದಿನ ದಿನಗಳಲ್ಲಿ ಬಹಿರಂಗವಾಗಬೇಕಿದೆ.
POPULAR STORIES :
`ಸೆಕ್ಸ್’ ಸೈಟುಗಳ ಹಾಟ್ ವಿಚಾರ..!? ಅಶ್ಲೀಲ ಎಂಎಂಎಸ್ ಹೇಗೆಲ್ಲಾ ಸೃಷ್ಟಿಯಾಗುತ್ತೆ ಗೊತ್ತಾ..!?
ಚಂದದ ನಟಿಯರೇಕೆ ಸೂಸೈಡ್ ಮಾಡ್ಕೋತಾರೆ..!?
`ಸಾಯುವ ಮನಸ್ಸೆ..! ನಿನ್ನ ಕಡೆ ನನಗಿದೆ ತಿರಸ್ಕಾರ..!!’
ಮಿಸ್ಡ್ ಕಾಲ್ ಗೆಳೆಯ..! ಅವನ ಸಾವಿನ ಜೊತೆ ಇವಳು ಒಂದಾದಳು..!?
ಪ್ರಭಾಕರ್ ಸಾವಿಗೆ ಕಾರಣವಾಗಿದ್ದು ಆ ವೈದ್ಯ..!? ಅಮ್ಮನ ಕೈ ತುತ್ತು ತಿನ್ನದೆ ಮಲಗುತ್ತಿರಲಿಲ್ಲ ಈ ಜೀವ..!
ಅಂಗವೈಕಲ್ಯ ಗೆದ್ದ ಮಹಾನ್ ಸಾಧಕ..! ಅವ್ನು ಆತ್ಮಹತ್ಯೆಗೂ ಯತ್ನಿಸಿದ್ದ..!!
ಗಂಡನನ್ನು ಕೊಂದು, ಅವನ ತಲೆಯನ್ನು ಸೂಪ್ ಮಾಡಿ ಕುಡಿದಳು, `ಹೆಣ್ಣು ಒಲಿದರೇ ನಾರಿ, ಮುನಿದರೇ ಮಾರಿ..!’