ಇತ್ತೀಚೆಗಷ್ಟೆ ನೇಣು ಬಿಗಿದುಕೊಂಡು ಸಾವಿಗೀಡಾಗಿದ್ದ ಹಿಂದಿ ಸೀರಿಯಲ್ ನಟಿ ಪ್ರತ್ಯೂಷ ಬ್ಯಾನರ್ಜಿ ಗರ್ಭಿಣಿಯಾಗಿದ್ದಳು ಎಂದು ವೈದ್ಯರು ಹೇಳಿದ್ದಾರೆ. ಅಲ್ಲಿಗೆ ಪ್ರತ್ಯೂಷ ಸಾವು ಬೇರೆ ರೀತಿಯ ತಿರುವು ಪಡೆದುಕೊಳ್ಳುತ್ತಿರುವುದು ಬಹುತೇಕ ಸ್ಪಷ್ಟವಾಗಿದೆ.
ಅವಳು ಪ್ರತ್ಯೂಷ ಬ್ಯಾನರ್ಜಿ ಅರ್ಥಾತ್ ಬಾಲಿಕಾ ವಧು. ಚಂದದ ನಟಿ, ವಯಸ್ಸಿನ್ನೂ ಇಪ್ಪತ್ನಾಲ್ಕು. ಮೂಲತಃ ಬಿಹಾರದವಳು. ಬದುಕಿ ಕಟ್ಟಿಕೊಂಡಿದ್ದು ಮುಂಬೈನಲ್ಲಿ. ಬದುಕನ್ನು ಅಂತ್ಯ ಮಾಡಿಕೊಂಡಿದ್ದು ಇದೇ ಮುಂಬೈನಲ್ಲಿ. ಅವಳಿಗೆ ಎಲ್ಲವೂ ಇತ್ತು, ಅಂದ ಚಂದದ ಜೊತೆ ಅಗಾಧ ಪ್ರತಿಭೆ, ಹೇರಳ ಅವಕಾಶ, ಜನಪ್ರಿಯತೆ ಎಲ್ಲವೆಂದರೇ ಎಲ್ಲವೂ ಸಿಕ್ಕಿತ್ತು. ಆದರೆ ಪರಿಪೂರ್ಣ ಪ್ರೇಮ ಸಿಗದೇ ಪೇಚಾಡತೊಡಗಿದಳು. ಪ್ರತ್ಯೂಷ ಬ್ಯಾನರ್ಜಿ ತೀರಾ ಕಾಡೋದು ಬಾಲಿಕಾ ವಧು ಧಾರಾವಾಹಿಯ ಮೂಲಕ. ಆ ಜನಪ್ರಿಯ ಸೀರಿಯಲ್ ನಲ್ಲಿ ಮನೆಮಾತಾಗಿದ್ದ ಈ ನಟಿಯ ಸುಲಲಿತ ನಟನೆಗೆ ಮನಸೋಲದವರೇ ಇರಲಿಲ್ಲ. ಕಲರ್ಸ್ ಹಿಂದಿ ವಾಹಿನಿಯಲ್ಲಿ ಬಾಲಿಕಾ ವಧು ಸೀರಿಯಲ್ ನಲ್ಲಿ ನಟಿಸುತ್ತಿದ್ದಳು. ಇದಕ್ಕೂ ಮುನ್ನ ಅದೇ ವಾಹಿನಿಯಲ್ಲಿ ಕಿಚನ್ ಚಾಂಪಿಯನ್ 4, ಜಲಕ್ ದಿಖ್ಲಾಜಾ ಸೀಸನ್ 5, 2013ರ ಬಿಗ್ ಬಾಸ್ ಸೀಸನ್ ಸವೆನ್ ನಲ್ಲಿ ಭಾಗವಹಿಸಿದ್ದಳು. 2015ರ ನಂತರ ಪ್ರತ್ಯೂಷಳನ್ನು ಹಿಡಿದಿಡುವವರೇ ಇರಲಿಲ್ಲ. ಕಿರುತೆರೆ ಜಗತ್ತನ್ನು ಕಿರುಬೆರಳಿನಲ್ಲಿ ಆಡಿಸತೊಡಗಿದಳು. ಸೋನಿ ಎಂಟರ್ ಟೈನ್ ಮೆಂಟ್ ನಲ್ಲಿ ಹಮ್ ಹೈ ನಾ, ಇತ್ನಾ ಕರೋ ನಾ ಮುಝೆ ಪ್ಯಾರ್, ಆಹಟ್, ಪವರ್ ಕಟ್, ಸ್ಟಾರ್ ಪ್ಲಸ್ ನಲ್ಲಿ ಗುಲ್ ಮೊಹರ್ ಗ್ರಾಂಡ್, ಲೈಫ್ ಓಕೆಯಲ್ಲಿ ಕಾಮಿಡಿ ಕ್ಲಾಸೆಸ್, ಜೀಟಿವಿಯಲ್ಲಿ ಕುಂಕುಮ ಭಾಗ್ಯ- ಹೀಗೆ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಳು.
ಹೀಗಿರುವಾಗ ಜನಪ್ರಿಯತೆಯ ಉತ್ತುಂಗದಲ್ಲಿದ್ದ ಪ್ರತ್ಯೂಷಳ ಬದುಕಿನಲ್ಲಿ ಅವನೊಬ್ಬನ ಪ್ರವೇಶವಾಗಿತ್ತು. ಅವನ ಹೆಸರು ರಾಹುಲ್ ರಾಜ್ ಸಿಂಗ್. ರಾಹುಲ್ ಆಕ್ಟರ್ ಕಂ ನಟನಾಗಿದ್ದ. ಸೋನಿ ಎಂಟರ್ ಟೈನ್ ಮೆಂಟ್ ನಲ್ಲಿ ಪ್ರಸಾರವಾಗಿದ್ದ ಪವರ್ ಕಪಲ್ ಕಾರ್ಯಕ್ರಮದಲ್ಲಿ ಇಬ್ಬರಿಗೂ ಪರಿಚಯವಾಗಿತ್ತು. ಪರಿಚಯ ಪ್ರೇಮಕ್ಕೆ ತಿರುಗಿತ್ತು. ಒಂದು ಹಂತದಲ್ಲಿ ಇವರಿಬ್ಬರಿಗೆ ಮದ್ವೆಯಾಗಿದೆ ಅಂತಾನೂ ಸುದ್ದಿ ಹರಡಿತ್ತು. ಆದರೆ ಅದೆಲ್ಲಾ ಕಥೆ ಎಂದು ಇಬ್ಬರೂ ಸುಮ್ಮನಾದರು. ಆದರೆ ಇಬ್ಬರೂ ಮದ್ವೆಯಾಗಲು ನಿರ್ಧರಿಸಿದ್ದಂತೂ ಖರೆ. ಎಲ್ಲಾ ಸರಿಹೋಗಿದ್ದರೇ ಕೆಲವೇ ತಿಂಗಳಲ್ಲಿ ಇಬ್ಬರ ಮದ್ವೆಯಾಗಬೇಕಿತ್ತು. ಈ ಹಂತದಲ್ಲೇ ಪ್ರತ್ಯೂಷ ಬ್ಯಾನರ್ಜಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮುಂಬೈನ ಕಂಡಿವಿಲಿಯ ಬಂಗೂರ್ ನಗರ್ ಫ್ಲಾಟ್ ನಲ್ಲಿ ನೇಣುಬಿಗಿದುಕೊಂಡು ಸಾವನ್ನಪ್ಪಿದ್ದಾಳೆ. ಅದಕ್ಕೆ ಕಾರಣ ಪ್ರೇಮವೈಫಲ್ಯ ಎಂಬುದು ಖಚಿತವಾಗಿತ್ತು. ರಾಹುಲ್ ನ ಮತ್ತೊಬ್ಬ ಗರ್ಲ್ ಫ್ರೆಂಡ್ ಸೋನು ಎಂಬಾಕೆ ಪ್ರತ್ಯೂಷಳನ್ನು ಥಳಿಸಿದ್ದಳು ಎಂದು ಖುದ್ದು ಅವಳೇ ಹೇಳಿದ್ದಳು. ಹೀಗಾಗಿ ಮಾನಸಿಕ ಖಿನ್ನತೆಯಿಂದ ನರಳುತ್ತಿದ್ದ ಪ್ರತ್ಯೂಷ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗುತ್ತಿದೆ. ಪೊಲೀಸರು ರಾಹುಲ್ ರಾಜ್ ಸಿಂಗ್ ಮೇಲೆ ಕೇಸ್ ಹಾಕಿದ್ದಾರೆ.
POPULAR STORIES :
ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ಹಿಂಸಾಚಾರಕ್ಕೆ ತಿರುಗಿದ ಗಾರ್ಮೆಂಟ್ಸ್ ಕಾರ್ಮಿಕರ ಪ್ರತಿಭಟನೆ,
ಕೈ ತಪ್ಪಿದ ಕೊಹಿನೂರ್ ವಜ್ರ… ಕದ್ದದ್ದಲ್ಲ ಉಡುಗೊರೆಯಾಗಿ ನೀಡಿದ್ದು..!
ಸ್ನಾನ ಮಾಡುತ್ತಿದ್ದವಳ ವಿಡಿಯೋ ಚಿತ್ರೀಕರಣ ಮಾಡಿದ..! ಕತ್ರೀನಾ ಕೈಫ್ ಸಿಟ್ಟಾಗಿದ್ದೇ ಒದ್ದುಬಿಟ್ಟಳು..!?
ನಿದ್ದೆಗೆಟ್ಟರೇ ಸಾಯೋದು ಗ್ಯಾರಂಟಿ..!! ನಿದ್ದೆ ಬರ್ತಿಲ್ಲಾ.. ಯಾಕೋ ನಿದ್ದೆ ಬರ್ತಿಲ್ಲಾ..!!
ಐಪಿಎಲ್ ನಲ್ಲಿ ತುಂಡುಡುಗೆ ತೊಟ್ಟು ಕುಣಿಯೋ ಚಿಯರ್ ಗರ್ಲ್ಸ್ ಸ್ಯಾಲರಿ ಎಷ್ಟು ಗೊತ್ತಾ..?
ಅವಳ `ಆತ್ಮ’ ಅತೃಪ್ತಿಯಿಂದ ನರಳುತ್ತಿದೆ..! ಭಾರತ ಚಿತ್ರರಂಗ ಕಂಡ ಅಪ್ಪಟ `ಸೌಂದರ್ಯ’
ಮೂರರ ಪೋರನ ಸಿಟ್ಟಿಗೆ ಪೊಲೀಸರೇ ಕಂಗಾಲು..! ಅಬ್ಬಾ..!! ಮಕ್ಕಳು ಹೀಗೂ ಇರ್ತಾರಾ..!?
ಬ್ಲೂಫಿಲಂ ವೀಕ್ಷಿಸುವಾಗ ಅವಳ ವಯಸ್ಸು ಕೇವಲ ಒಂಬತ್ತು..! ಇದು ಹದಿನಾರರಲ್ಲಿ ಕನ್ಯತ್ವ ಕಳೆದುಕೊಂಡ ಸನ್ನಿಯ ಜೀವನಗಾಥೆ