ಜ್ಯೋತಿಷಿಗಳು ಚುನಾವಣೆಯ ಬಗ್ಗೆ ಭವಿಷ್ಯ ಹೇಳಿದ್ರೆ ಅಪರಾಧ ಎಸಗಿದಂತೆ…! ಚುನಾವಣೆಯಲ್ಲಿ ಇದೇ ಪಕ್ಷ ಆಡಳಿತಕ್ಕೆ ಬರುತ್ತೆ, ಈ ಅಭ್ಯರ್ಥಿ ಗೆಲ್ತಾರೆ, ಅವರು ಸೋಲ್ತಾರೆ ಅಂತೆಲ್ಲಾ ಜ್ಯೋತಿಗಳು ಭವಿಷ್ಯ ನುಡಿಯುವಂತಿಲ್ಲ..!
ಹೌದು, ಹಿಮಾಚಲಪ್ರದೇಶ, ಗುಜರಾತ್ ಚುನಾವಣೆ ಮುಗಿಯುವ ತನಕ ಚುನಾವಣೆಯ ಸೋಲು-ಗೆಲುವಿನ ಬಗ್ಗೆ ಜ್ಯೋತಿಷಿಗಳು ಭವಿಷ್ಯ ನುಡಿಯುವಂತಿಲ್ಲ ಎಂದು ಕೇಂದ್ರ ಚುನಾವಣ ಆಯೋಗ ಆದೇಶಿಸಿದೆ. ಇದು ಮುಂದಿನ ದಿನಗಳಲ್ಲಿ ಎಲ್ಲಾ ಚುನಾವಣೆಗಳಿಗೂ ಅನ್ವಯವಾಗಬಹುದು.
ಜ್ಯೋತಿಷಿಗಳು ಭವಿಷ್ಯ ನುಡಿಯುವುದು ಮತದಾರರ ಮೇಲೆ ಪರಿಣಾಮ ಬೀರುತ್ತೆ ಎಂಬ ಉದ್ದೇಶದಿಂದ ಚುನಾವಣ ಆಯೋಗ ಈ ಸೂಚನೆ ನೀಡಿದೆ.
ಇದು ಒಳ್ಳೆಯ ನಿರ್ಧಾರ. ಭವಿಷ್ಯದ ಹೆಸರಲ್ಲಿ ಜ್ಯೋತಿಷಿಗಳು ಒಂದು ಪಕ್ಷ ಅಥವಾ ಅಭ್ಯರ್ಥಿಯ ಪರ ಪರೋಕ್ಷ ಪ್ರಚಾರ ಮಾಡೋದಕ್ಕೆ ಬ್ರೇಕ್ ಹಾಕಿದಂತಾಗುತ್ತೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.