ಬಿಟ್ಟು ಹೋದ ಹುಡುಗಿಯನ್ನು ನೆನೆಸ್ಕೊಂಡು ಒದ್ದಾಡೋ ಹುಡುಗರಿಗೇನು ಬರವಿಲ್ಲ.. ಆದ್ರೆ ಆ ಒದ್ದಾಟದ ತೀವ್ರತೆ ಅವರಿಗೆ ಮಾತ್ರ ಗೊತ್ತಿರುತ್ತೆ..! ಇಲ್ಲೊಬ್ಬ ಪ್ರೇಮಿ ಇದ್ದಾನೆ ನೋಡಿ…ಕಾರಣ ಹೇಳದೇ ಹೊರಟುಹೋದ ತನ್ನ ಹುಡುಗಿಯನ್ನು ನೆನೆದು ಪರಿತಪಿಸುತ್ತಿದ್ದಾನೆ..! ಅವಳನ್ನು ಅವಳ ಕಾಲೇಜಿನ ಬಳಿ ನೋಡಲು ಯತ್ನಿಸುತ್ತಿದ್ದಾನೆ..! ಅದನ್ನು ಅವಳಿಗೆ ಅವನದೇ ಪದಗಳನ್ನೇ ಹೇಳ್ತಾನೆ..!
ನೀನು ನನ್ನ ಬಿಟ್ಟು ಹೋದ ಇಷ್ಟು ದಿನದಲ್ಲಿ ಇವತ್ತು ನಾನು ತುಂಬಾ ಖುಷಿಯಾಗಿದ್ದ ದಿನ… ಯಾಕ್ ಗೊತ್ತಾ? ನಿನ್ನ ನಾನಿವತ್ತು ನೋಡ್ದೆ… ಎಷ್ಟ್ ಖುಷಿಯಾಗಿ ನಗ್ತಾ ನಿಂತಿದ್ಯಲ್ಲಾ ಬಂಗಾರ… ನನ್ನ ಕಣ್ಣು ತುಂಬಿ ಬಂತು.. ನೀನು ಯಾವತ್ತಿಗೂ ಹಾಗೇ ನಗ್ತಾ ಇರ್ಬೇಕು… ಇವತ್ತು ನಾನು ಆಫೀಸ್ ನಿಂದ ಹೊರಟಾಗಲೇ 3.45 ಆಗಿತ್ತು… ಆಗಿದ್ದಾಗಲಿ ಅಂತ ನಿನ್ನ ನೋಡೋಕೆ ಹೊರಟೆ ಬಿಟ್ಟೆ… 20 ನಿಮಿಷದಲ್ಲಿ ನಿನ್ನ ಕಾಲೇಜ್ ಹತ್ರ ಬಂದಿದೀನಿ… ನನಗ್ಯಾಕೋ ಅನ್ನಿಸ್ತಿತ್ತು, ಇವತ್ತು ನಾನ್ ನಿನ್ನ ನೋಡಿಯೇ ನೋಡ್ತೀನಿ ಅಂತ… ನನ್ನ ನಿರೀಕ್ಷೆ ಸುಳ್ಳಾಗಲಿಲ್ಲ, ಆ ಕಾಫಿ ಕಲರ್ ಚೂಡಿ ಹಾಕ್ಕೊಂಡು ನೀನು ಬರ್ತಾ ಇದ್ರೆ ನನ್ನ ಕಣ್ಣುಗಳಲ್ಲಿ ನೀರು ಹಂಗೆ ತುಂಬಿಕೊಳ್ತಿತ್ತು… ಹತ್ತಿರ ಬಂದು ಮಾತಾಡಿಸಿಬಿಡಬೇಕು ಅನ್ನಿಸ್ತು… ಆದ್ರೆ, ನಾನು ಮಾತಾಡ್ಸಿದ್ದೆ ಹೌದಾದ್ರೆ ನಿನ್ನ ಆ ನಗು ಅಲ್ಲಿಗೇ ನಿಂತು ಹೋಗುತ್ತೆ… ಆ ಕಾರಣಕ್ಕೆ ನಿನ್ನ ಹತ್ರ ಬರಲಿಲ್ಲ… ದೂರದಿಂದಾನೆ ನಿನ್ನ ನೋಡಿ ಸಂತೋಷ ಪಟ್ಟೆ… ಯಾವತ್ತಿಗೂ ನೀನು ಹಂಗೆ ನಗ್ತಾ, ನಗ್ತಾ ಇರ್ಬೇಕು… ನನ್ನ ನೋವು ನನಗಿರಲಿ, ನೆಮ್ಮದಿ ಸದಾ ನಿನಗಿರಲಿ…
ನಿಂಗೊತ್ತಾ ನಿನ್ನ ನೋಡೋ ಸಲುವಾಗಿ ನಾನೆಷ್ಟು ಪಾಡು ಪಟ್ಟಿದೀನಿ ಅಂತ? ಅದೆಷ್ಟು ಸಲ ನಿನ್ನ ಕಾಲೇಜಿನ ಆ ಗೇಟು ನನ್ನ ಅಣಕಿಸಿಲ್ಲ ಹೇಳು..? `ಅಯ್ಯೋ ಪಾಪಿ, ಹೋಗೋ ಹೋಗು, ನಿಂಗೆ ಅವಳನ್ನ ನೋಡೋ ಅದೃಷ್ಟ ಇಲ್ಲ ‘ ಅಂತ… ಅವೆಲ್ಲಾ ಅವಮಾನಾನ ನಾನು ಸಹಿಸ್ಕೊಂಡಿರ್ತಿದ್ದಿದ್ದು ಯಾಕ್ ಗೊತ್ತ? ಇವತ್ತು ನಾನ್ ಪಡ್ತಿದೀನಲ್ಲ ಈ ಖುಷಿ, ಇದಕ್ಕೋಸ್ಕರ… ಇವತ್ತು ನಾನು ಆ ಗೇಟಿಗೆ ನನ್ನ ಕಣ್ಣೀರಿನ ಜೊತೆಗೆ, ನಾನು ಗೆದ್ದಿದೀನಿ ಅಂತ ಹೇಳಿ ಬಂದಿದೀನಿ.. ನಾಳೆ ಆ ಗೇಟ್ ದಾಟುವಾಗ ಅದರ ತಲೆ ಮೇಲೆ ಒಂದು ಕುಕ್ಕಿ ಹೋಗು ಪುಟ್ಟ… ನಿನ್ನ ಸ್ಟುಪಿಡ್ ಗೆ ರೇಗಿಸೋಷ್ಟು ಕೊಬ್ಬು ಅದಕ್ಕೆ…ಹಹ್ಹಹ್ಹ …ಪುಟ್ಟ , ನೀನು ನಂಗೆ ನೋಡೋಕೆ ಸಿಕ್ಕಿದ್ದು ಬರಿ 30 ಸೆಕೆಂಡ್ ಮಾತ್ರ.. ಆದ್ರೆ ಅಷ್ಟರೊಳಗೆ ನನ್ನ ಕಣ್ಣಲ್ಲಿ ಇರೋ ಅಷ್ಟೂ ಜಾಗದಲ್ಲಿ ನಿನ್ನ ತುಂಬಿಕೊಂಡು ಬಿಟ್ಟಿದೀನಿ… ನಂಗೊತ್ತು, ನೀನು ನಂಗೆ ಸದ್ಯಕ್ಕೆ ಸಿಗೋಲ್ಲ ಅಂತ… ಆದರೂ ನನ್ನ ಪ್ರಯತ್ನ ನಾನು ಮಾಡ್ತಾ ಇರ್ತೀನಿ… ನೋಡಿ ಹಂಗೆ ಹೋಗೋಣ ಅನಿಸ್ತಿತ್ತು, ಆದ್ರೂ ಮನಸ್ಸು ತಡೀಲಿಲ್ಲ… ಅದಕ್ಕೆ ನಿಂಗೆ ಮೆಸೇಜ್ ಕಳಿಸ್ಬಿಟ್ಟೆ … sorry, ಬೇಜಾರ್ ಮಾಡ್ಕೋಬೇಡ.. ಎಷ್ಟೇ ಆಗ್ಲಿ ಒಂದು ಕಾಲದಲ್ಲಿ ದಿನಕ್ಕೆ ನೂರಾರು ಮೆಸೇಜ್ ಕಳಿಸ್ತಿದ್ದಿದ್ದು ನಾನೇ ಅಲ್ವಾ? ಹಾ ಮತ್ತೊಂದು ವಿಷ್ಯ… i love you ಕಣೆ ಪುಟ್ಟಾ… ಯಾವತ್ತಿಗೂ… ನಿನ್ನ ಸ್ಟುಪಿಡ್
Download Android App Now Click Here
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
ಉದ್ಯಮಿಗಳಿಗೆ ಲಕ್ಷಗಟ್ಟಲೆ ಸಾಲ ಕೊಡೋ ಕೋಟ್ಯಾಧಿಪತಿ ಭಿಕ್ಷುಕ..!
ಬೆಂಗಳೂರಿನಲ್ಲಿ ಇನ್ಮುಂದೆ ಓಲಾ ಬೈಕ್ ಟ್ಯಾಕ್ಸಿ..! ಪ್ರತಿ ಕಿ.ಮೀ.ಗೆ 2ರೂ ಮಾತ್ರ.. !
ವಾಟ್ಸ್ ಆಪ್ ನಲ್ಲಿ ನಗ್ನ ಫೋಟೋ ಶೇರ್ ಮಾಡಿದ ಅಧಿಕಾರಿ ಬಂಧನ.!
Job ಆಫರ್! 70 ದಿನ ಮಲಗಿದ್ದರೆ 12.17ಲಕ್ಷ!
ಕುಡುಕರು ಹಾಡಿದ ಪರಮಾತ್ಮನ ಮಹಿಮೆ..! ಈ ವೀಡಿಯೋ ನೋಡಿದ್ರೆ ನಗದೇ ಇರೋಕೆ ಸಾಧ್ಯನೇ ಇಲ್ಲ.!