No menu items!
12.4 C
Munich
Wednesday, April 29, 2026

ಅಮೇರಿಕಾ ನೆಲೆಗಳನ್ನು ಸುಟ್ಟು ಬೂದಿ ಮಾಡುತ್ತಂತೆ ಉತ್ತರಕೋರಿಯಾ..!

Must read

ವಿಶ್ವದ ಹಿರಿಯಣ್ಣ ಅಮೇರಿಕಾಗೆ ಉತ್ತರ ಕೋರಿಯಾ ಸುಟ್ಟು ಪುಡಿಗಟ್ಟುವುದಾಗಿ ಬೆದರಿಯೊಡ್ಡಿದೆ..! ಅಮೇರಿಕಾ ಹಾಗೂ ದಕ್ಷಿಣ ಕೋರಿಯಾಗಳು ತಮ್ಮ ಜಂಟಿ ಸೇನಾ ಕವಾಯತು ಆರಂಭಿಸಿರುವಂತೆಯೇ ಅಮೇರಿಕಾ ಹಾಗೂ ಈಶಾನ್ಯ ಏಷ್ಯಾದಲ್ಲಿನ ನೆಲೆಗಳ ಮೇಲೆ ಅಣ್ವಸ್ತ್ರ ದಾಳಿ ನಡೆಸುವುದಾಗಿ ಹೇಳುವ ಮೂಲಕ ಉತ್ತರ ಕೋರಿಯಾ ಅಮೇರಿಕಾಕ್ಕೆ ಬಿಸಿ ಮುಟ್ಟಿಸಿರುವುದು ವರದಿಯಾಗಿದೆ..!
ಉ.ಕೋರಿಯಾ ಮತ್ತು ದ.ಕೋರಿಯಾಗಳ ನಡುವಿನ ಜಿದ್ದಾಜಿದ್ದಿ ಇಂದು-ನಿನ್ನೆಯ ಕತೆಯಲ್ಲ..! ದಶಕಗಳಿಗೂ ಹೆಚ್ಚಿನ ಕಾಲದ ವೈಮನಸ್ಸು ಈ ಎರಡು ರಾಷ್ಟ್ರಗಳ ನಡುವೆ ಇದೆ..! ಅಮೇರಿಕಾ ದಕ್ಷಿಣಾಕೋರಿಯಾಕ್ಕೆ ತನ್ನ ಬೆಂಬಲವನ್ನು ನೀಡ್ತಾ ಇರೋದು ಉತ್ತರಕೋರಿಯಾದ ಪಿತ್ತ ನೆತ್ತಿಗೇರುವಂತೆ ಮಾಡಿದೆ..! ಇತ್ತೀಚೆಗಷ್ಟೇ ಉತ್ತರ ಕೋರಿಯಾ ಉಪಗ್ರಹವನ್ನು ಕಕ್ಷೆಯಲ್ಲಿರಿಸುವ ಸಾಮಥ್ರ್ಯದ ರಾಕೆಟೊಂದನ್ನು ಪರೀಕ್ಷಿಸಿದ್ದು ಎಲ್ಲರಿಗೂ ಗೊತ್ತೇ ಇದೆ..! ಆ ಸುದ್ದಿ ಇನ್ನೂ ಹಸಿಯಾಗಿಯೇ ಇದೆ..! ಇದಾದ ನಂತರ ದ. ಕೊರಿಯಾ ಈ ವರ್ಷದಸೇಬಾ ಕವಾಯತು ಇತಿಹಾಸದಲ್ಲಿಯೇ ಅತ್ಯಂತ ದೊಡ್ಡ ಕವಾಯತು ಆಗಲಿದೆ ಎಂದು ಉ.ಕೋರಿಯಾಕ್ಕೆ ಎಚ್ಚರಿಕೆಗೆ ಕರೆಗಂಟೆ ಭಾರಿಸಿತ್ತು..!
ಇದಕ್ಕೆ ಉತ್ತರವೆಂಬಂತೆ ಈಗಷ್ಟೇ ಹೇಳಿಕೆ ನೀಡಿರೋ ಉತ್ತರ ಕೊರಿಯಾ ಅಮೆರಿಕಾ ಹಾಗೂ ಏಷ್ಯಾ-ಫೆಸಿಪಿಕ್ ಪ್ರದೇಶದಲ್ಲಿರುವ ಅಮೇರಿಕಾದ ನೆಲೆಗಳನ್ನು ಸುಟ್ಟು ಪುಡಿ ಪುಡಿ ಮಾಡುವುದಾಗಿ ಹೇಳುವ ಮೂಲಕ ಇಡೀ ವಿಶ್ವದ ಎದುರೇ ಅಮೇರಿಕಾಕ್ಕೆ ನೇರವಾಗಿ ಬೆದರಿಕೆಯೊಡ್ಡಿದೆ..! ನಾವು ಬಟನ್ ಒತ್ತಿದರೆ ಸಾಕು ನಮ್ಮ ತಂಟೆಗೆ ಬರುವ ಎಲ್ಲಾ ನೆಲೆಗಳನ್ನು ಪುಡಿ ಪುಡಿ ಮಾಡುವುದಾಗಿ ಎಚ್ಚರಿಸಿದೆ..!
ಉ.ಕೋರಿಯಾದ ಹೇಳಿಕೆಗೆ ದ.ಕೋರಿಯಾ ತಿರುಗೇಟು ನೀಡಿದ್ದು ಉತ್ತರ ಕೋರಿಯಾ ಹೊಣೆಗೇಡಿ ವರ್ತನೆಯನ್ನು ಬಿಟ್ಟು, ನೆಟ್ಟಗಿರಲಿ, ನಮ್ಮನ್ನು ಪ್ರಚೋಧಿಸಿದರೆ ನಾವು ಇದಕ್ಕೆ ಬಲವಾಗಿ ಉತ್ತರಿಸ್ತೀವಿ ಎಂದು ಹೇಳಿದೆ…!
ವಿಷ್ಯಾ ಏನೇ ಇರಲಿ, ಅಮೇರಿಕಾಕ್ಕೆ ನೇರವಾಗಿಯೇ ಬೆದರಿಕೆಯೊಡ್ಡಿರುವ ಉ.ಕೊರಿಯಾದ ಎದೆಗಾರಿಕೆ ಎಂಥಹದ್ದಿರಬೇಡ..!

 

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

ಬಿಟ್ಟು ಹೋದ ಹುಡುಗಿಗೆ…!

ಮಗನ ಹೆಣ ಮನೆಯಲ್ಲಿಟ್ಟು ಮತ್ತೊಬ್ಬರ ಮಗನ ಪ್ರಾಣ ಉಳಿಸಿದ್ರು..!

ವಾಟ್ಸ್ ಆಪ್ ನಲ್ಲಿ ನಗ್ನ ಫೋಟೋ ಶೇರ್ ಮಾಡಿದ ಅಧಿಕಾರಿ ಬಂಧನ.!

Job ಆಫರ್! 70 ದಿನ ಮಲಗಿದ್ದರೆ 12.17ಲಕ್ಷ!

ಕುಡುಕರು ಹಾಡಿದ ಪರಮಾತ್ಮನ ಮಹಿಮೆ..! ಈ ವೀಡಿಯೋ ನೋಡಿದ್ರೆ ನಗದೇ ಇರೋಕೆ ಸಾಧ್ಯನೇ ಇಲ್ಲ.!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article