ಚಾರ್ಟೆಡ್ ಅಕೌಟೆಂಟ್ ಆಗಬೇಕೆಂದಿದ್ದ `ಪ್ರಿನ್ಸ್' ಬಡ ಮಕ್ಕಳಿಗೆ ಗುರುವಾದ..!

Date:

ಮುಂಬೈ ಹತ್ತಿರದ ಪೂರ್ವ ಕಾಂಡಿವಲಿಯ ವೆಸ್ಟ್ರನ್ ಎಕ್ಸ್ ಪ್ರೆಸ್ ಹೈವೇಯ ಕೆಳಗೆ ಅವರ ವಾಸ..! ವಾಹನಗಳ ಗದ್ದಲ ದಿನದ 24 ಗಂಟೆಯೂ ತಪ್ಪಿದ್ದಲ್ಲ…! ಉಸಿರಾಟಕ್ಕೆ ದೂಳಿನ ಗಾಳಿ..! ಉಬ್ಬು ತಗ್ಗಿನ ನೆಲದಲ್ಲಿ ಹಾಸಲೂ ಹೊದೆಯಲೂ ಏನೂ ಇಲ್ಲ..! ಬರಿ ನೆಲದಲ್ಲೇ ಮಲಗುತ್ತಾರೆ..! ನೀವು-ನಾವು ಖಂಡಿತಾ ಅಲ್ಲಿ ಬದುಕಲಾರೆವು..! ಆದರೆ ಅಲ್ಲಿ ಹತ್ತು ಹಲವು ಕುಟುಂಬಗಳು ಕಳೆದ ಏಳು ವರ್ಷದಿಂದ ಜೀವನ ಸಾಗಿಸ್ತಾ ಇದ್ದಾರೆ..!
ಅವರ ಬದುಕಿಗೆ ಕೂಲಿ, ಭಿಕ್ಷಾಟನೆಯೇ ಆಸರೆ. ಶಿಕ್ಷಣ ಇಲ್ಲ. ತಂದೆ-ತಾಯಿಗಳು ಕೆಲಸಕ್ಕೆ ಹೋದರೆ ಮಕ್ಕಳು ಭಿಕ್ಷೆ ಬೇಡಲಿಕ್ಕೆ ಹೋಗ್ತಾರೆ..! ಮುನ್ಸಿಪಲ್ ಶಾಲೆಗೆ ಹೋಗೋ ಮಕ್ಕಳು ಕಲಿಕೆಗೆ ಅಂತ ಶಾಲೆಗೆ ಹೋಗಲ್ಲ..! ಮಧ್ಯಾಹ್ನದ ಬಿಸಿ ಊಟ ಸಿಗುತ್ತೆ ಅಂತ ಹೊಟ್ಟೆಗಾಗಿ ಹೋಗ್ತಾರೆ..! ಈ ಪರಿಸ್ಥಿತಿಯನ್ನು ಕಂಡ ಯಾರೂ ಯಾರೆಂದರೆ ಯಾರೂ ಅವರಿಗೆ ಹೊಸ ಬದುಕನ್ನು ಕರುಣಿಸಲು ಮನಸ್ಸು ಮಾಡಿರ್ಲಿಲ್ಲ..! ಆದರೆ ಇವತ್ತು ಅದೇ ಫ್ಲೈ ಓವರ್ ಕೆಳಗೆ ವಾಸ ಮಾಡ್ತಾ ಇದ್ದ ಬಡ ಮಕ್ಕಳ ಜೀವನ ಸುಧಾರಿಸ್ತಾ ಬಂದಿದೆ..! ಅದಕ್ಕೆ ಕಾರಣ `ಪ್ರಿನ್ಸ್ ತಿವಾರಿ’ ಎಂಬ ಯುವಕ..!
ಚಾರ್ಟೆಡ್ ಅಕೌಟೆಂಟ್ (ಸಿಎ) ಆಗ್ಬೇಕೆಂದು ಕನಸು ಕಂಡಿದ್ದ `ಪ್ರಿನ್ಸ್ ತಿವಾರಿ’ ಹೀಗೆ ಫ್ಲೈ ಓವರ್ ಕೆಳಗೆ ಕಾಲ ಕಳೆಯುವ ಜನರ, ಮಕ್ಕಳ ಸ್ಥಿತಿಯನ್ನು ಕಣ್ಣಾರೆ ಕಂಡರು..! ಭಿಕ್ಷೆ ಬೇಡ್ತಾ ಇದ್ದ ಮಕ್ಕಳನ್ನು ಕಂಡು ಛೇ.. ಎಷ್ಟೊಂದು ಕಷ್ಟದ ಜೀವನ ನಡೆಸ್ತಾ ಇದ್ದಾರೆಂದು ತುಂಬಾನೇ ಬೇಜಾರು ಮಾಡಿಕೊಂಡ್ರು..! ನಾನು ಈ ಮಕ್ಕಳಿಗೆ ಏನಾದರೂ ಒಳ್ಳೇದನ್ನು ಮಾಡಿಯೇ ಸಿದ್ಧ ಅಂತ ತೀರ್ಮಾನ ತಗೊಂಡೇ ಬಿಟ್ಟರು..! ಇವರ ಬದುಕು ಬದಲಾಗ್ಬೇಕಂದ್ರೆ ಅದು ಶಿಕ್ಷಣದಿಂದ ಮಾತ್ರವೇ ಸಾಧ್ಯ ಅನ್ನೋದನ್ನು ಮನಗಂಡ ಪ್ರಿನ್ಸ್ ಹೇಗಾದ್ರೂ ಮಾಡಿ ಈ ಮಕ್ಕಳಿಗೆ ಶಿಕ್ಷಣ ನೀಡ್ಬೇಕೆಂದು ಯೋಚನೆ ಮಾಡಿದ್ರು..!
ಸಿಎ ಮಾಡ್ತಾ ಮಾಡ್ತಾನೇ ಮಕ್ಕಳಿಗೆ ಸಹಾತ ಮಾಡೋಣ ಅಂದ್ರೆ ಕಾಲೇಜಲ್ಲಿ ಅಟೆಂಡೆಂಟ್ಸ್ ಕಡಿಮೆ ಆಗುತ್ತೆ..! ಪರೀಕ್ಷೆಗೆ ಕೂರಿಸಲ್ಲ…! ಆದರೆ ನಾನು ನನ್ನ ಪಾಡಿಗೆ ಸಿಎ ಮಾಡ್ಕೊಂಡು ಹೋದ್ರೆ ಯಾವತ್ತೂ ಈ ಮಕ್ಕಳ ಜೀವನ ಬದಲಾಗಲ್ಲ..! ನಾನು ಸಿಎ ಮಾಡೋಕ್ಕಿಂತ ಇವರ ಭವಿಷ್ಯವೇ ಮುಖ್ಯವೆಂದು ನಿರ್ಧರಿಸಿದರು..! ಸಿಎ ಮಾಡೋದನ್ನು ಬಿಟ್ಟು ಸಹಾಯಕ ಅಕೌಂಟೆಂಟ್ ಆಗಿ ಒಂದೆಡೆ ಕೆಲಸಕ್ಕೆ ಸೇರಿದ್ರು..!
ಸ್ವತಃ ಆ ಫ್ಲೈ ಓವರ್ ಕೆಳಗೆ ಹೋಗಿ ಅಲ್ಲಿ ಕಾಲ ಕಳೀತಾ ಇದ್ದವರ ಕಷ್ಟದ ಬದುಕನ್ನು ಕಂಡರು..! ಬಿಸಿ ಊಟಕ್ಕಾಗಿಯೇ ಶಾಲೆಗೆ ಹೋಗೋ ಮಕ್ಕಳ ಪುಸ್ತಕಗಳನ್ನು ನೋಡಿದ್ರೆ ಅದು ಚೆಲ್ಲಾಪಿಲ್ಲಿ ಆಗಿತ್ತು..! ಕಸದ ರೀತಿಯಲ್ಲಿ ಪುಸ್ತಕ ಬಿದ್ದಿತ್ತು..! ಆ ಮಕ್ಕಳ ಅಪ್ಪ-ಅಮ್ಮನನ್ನು ಭೇಟಿಯಾಗಿ ನಿಮ್ಮ ಮಕ್ಕಳಿಗೆ ಉಚಿತವಾಗಿ ಪಾಠ ಹೇಳಿಕೊಡ್ತೀನಿ ಅಂದ್ರು. ಅದಕ್ಕೆ ಅವರ ಉತ್ತರ ” ನೀವು ಏನ್ ಹೇಳಿಕೊಟ್ಟರೂ ಏನ್ ಪ್ರಯೋಜನ..? ಅವರು ನಮ್ಮ ರೀತಿಯೇ ಮುಂದೆನೂ ಕೆಲಸ ಮಾಡ್ಬೇಕು” ಅನ್ನೋದಾಗಿತ್ತು..! ನಮ್ಮ ಮಕ್ಕಳೂ ನಮ್ಮಂತೇ ಬದುಕುತ್ತಾರೆ ಎಂದು ಅವರನ್ನು ಪ್ರಿನ್ಸ್ ಬಳಿ ಪಾಠ ಕಲಿಯೋಕೆ ಅವರ ಅಪ್ಪ ಅಮ್ಮ ಕಳಿಸಲು ಒಪ್ಪಲ್ಲ..! ಆದ್ರೂ ಪ್ರಿನ್ಸ್ ಹಿಡಿದ ಹಠ ಬಿಡುವುದಿಲ್ಲ..! ಆ ಮಕ್ಕಳಿಗೆ ಪಾಠ ಹೇಳಿ ಕೊಡೋಕೆ ಮುಂದಾಗ್ತಾರೆ..! ದಿನಾ ಆ ಮಕ್ಕಳಿರುವ ಆ ಫ್ಲೈ ಓವರ್ ಕೆಳಗೇ ಹೋಗಿ ಪಾಠ ಮಾಡೋಕೆ ಶುರು ಮಾಡಿದ್ರು..! ಪ್ರತಿ ದಿನ ಬೆಳಿಗ್ಗೆ 7 ಗಂಟೆಯಿಂದ 11 ಗಂಟೆಯವರಗೆ ಆ ಬಡ ಮಕ್ಕಳಿಗೆ ಪಾಠ, ನಂತರ ಕೆಲಸಕ್ಕೆ ಹೋಗ್ತಾ ಇದ್ದರು..! ವಾರದ ರಜಾದಿನ ಹಾಗೂ ಎಲ್ಲಾ ರಜಾದಿನಗಳಲ್ಲಿ ಇಡೀ ದಿನ ಮಕ್ಕಳೊಂದಿಗೆ ಫ್ಲೈ ಓವರ್ ಕೆಳಗೇ ಕಾಲ ಕಳೀತಾ ಇದ್ರು..! 2011ರಿಂದ ಪ್ರಿನ್ಸ್ ದಿನಚರಿ ಹೀಗೇ ಇತ್ತು..!
ಮೂರು ವರ್ಷದ ನಂತರ ಪ್ರಿನ್ಸ್ರ ಸಂಬಳ 17,700 ರಿಂದ 51, 000ಕ್ಕೆ ಏರಿತು ಆ ದುಡ್ಡಲ್ಲಿ ಮಕ್ಕಳಿಗಾಗಿ ಅಡುಗೆ ಸಾಮಾನುಗಳನ್ನು ತಗೊಂಡ್ರು…! ಮಕ್ಕಳಿಗೆ ತಿಂಡಿಯನ್ನೂ ಕೊಡೋಕೆ ಶುರು ಮಾಡಿದ್ರು. ತನ್ನ ಸಂಬಳದ ಹೆಚ್ಚು ಭಾಗವನ್ನು ಮಕ್ಕಳಿಗೆ ಮೀಸಲಿಟ್ಟರು..! ಆ ಮಕ್ಕಳಿಗೆ ಇಂಗ್ಲೀಷ್, ಗಣಿತ, ವಿಜ್ಞಾನ, ಮತ್ತು ಹಿಂದಿಯನ್ನು ಒಬ್ಬರೇ ಹೇಳಿ ಕೊಡ್ತಾ ಬಂದರು..! ಈಗ ತೆರೇಸಾ ಎಂಬ ಸಕರ್ಾರೇತರ ಸಂಸ್ಥೆಯನ್ನು ಹುಟ್ಟು ಹಾಕಿದ್ದಾರೆ..! ದಾನಿಗಳ ಸಹಾಯದಿಂದ ಬಡ ಮಕ್ಕಳ ಶಿಕ್ಷಣಕ್ಕೆ ನೆರವಾಗ್ತಾ ಇದ್ದಾರೆ..! ಠಾಕೂರ್ ಶಾಮ್ ನಾರಯಣನ್ ಎಂಬ ಖಾಸಗಿ ಹೈಸ್ಕೂಲ್ನಲ್ಲಿ ಈ ಬಡ ಮಕ್ಕಳಿಗೂ ಶಿಕ್ಷಣವನ್ನು ಕೊಡಿಸುತ್ತಿದ್ದಾರೆ..! ಶ್ರೀಮಂತರ ಮಕ್ಕಳಂತೆಯೇ ಬಡ ಮಕ್ಕಳೂ ಶಿಕ್ಷಣದ ಹಕ್ಕನ್ನು ಹೊಂದಿರುತ್ತಾರೆ ಅನ್ನೋ ಪ್ರಿನ್ಸ್ ಬಡ ಮಕ್ಕಳ ಕಲಿಕೆಗೋಸ್ಕರ ಚಾಟರ್ೆಡ್ ಅಕೌಂಟೆಂಟ್ ಆಗ್ಬೇಕೆಂಬ ಕನಸನ್ನೇ ಬದಿಗೊತ್ತಿರೋದು ನಿಜಕ್ಕೂ ಶ್ಲಾಘನೀಯ. ಇವರು ಫ್ಲೈ ಓವರ್ ಕೆಳಗೆ ಕುಳಿತು ಪಾಠ ಮಾಡೋದನ್ನು ನೋಡೋಕೆಂದು ಮೊದಲ ಸಲ ಬಂದ ಸ್ನೇಹಿತರು ಸಂಬಂಧಿಕರು ಆಶ್ಚರ್ಯದಿಂದ ” ನೀನು ಇಲ್ಲಿ ಕೂರುತ್ತೀಯಾ..?ಕೊಳಕು ಎಂದು ಕೇಳಿದ್ದರಂತೆ..! ಅದಕ್ಕೆ ಪ್ರಿನ್ಸ್ “ನಾನು ಐಷಾರಾಮಿ ಜೀವನ ಕಂಡಿದ್ದೇನೆ ಉದ್ಯಮಿಯ ಮಗನಾಗಿ ಕಾರಿನಲ್ಲಿ ಸುತ್ತಿದ್ದೇನೆ..! ಆದರೆ ಈ ಮಕ್ಕಳ ಸಹಾಯಕ್ಕಾಗಿ ನಾನು ಅವೆಲ್ಲವನ್ನೂ ತ್ಯಾಗ ಮಾಡಿ ಇದರಲ್ಲಿ ಖುಷಿ ಕಾಣುತ್ತಿದ್ದೇನೆಂದು ಹೇಳಿದ್ದರಂತೆ…!
ಪ್ರಿನ್ಸ್ ತಿವಾರಿಯ ಸಾರ್ಥಕ ಬದುಕು, ತ್ಯಾಗಕ್ಕೆ ನಮ್ಮದೊಂದು ಸಲಾಂ. ಬಡಮಕ್ಕಳಿಗೆ ಜೀವನ ಕೊಟ್ಟ ಈ `ಪ್ರಿನ್ಸ್’ (ರಾಜಕುಮಾರ)ಗೆ ಒಳ್ಳೆಯದಾಗಲಿ. ಇವರಿಂದ ಇನ್ನೂ ಹೆಚ್ಚು ಹೆಚ್ಚು ಜನರಿಗೆ ಅನುಕೂಲವಾಗಲಿ.

  • ಶಶಿಧರ ಡಿ ಎಸ್ ದೋಣಿಹಕ್ಲು

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

ಗನ್ ಕಲ್ಚರ್ ಎಫೆಕ್ಟ್, ದೊಡ್ಡಣ್ಣನ್ ಕಣ್ಣಲ್ಲಿ ಕಣ್ಣೀರು..!

ಪ್ರೀತಿ ಎಂಥವರನ್ನೂ ಬದಲಾಯಿಸುತ್ತೆ..! ಯಾರಿಂದಲೂ ಬದಲಾಗದ ಹುಡುಗರು ಹುಡುಗಿಯಿಂದ ಬದಲಾಗ್ತಾರೆ..!

ಒಂಟಿಕಾಲಲ್ಲೇ `ಮೌಂಟ್ ಎವರೆಸ್ಟ್’ ಏರಿದ ಸಾಹಸಿ..!

ಒಂದೇ ಇನ್ನಿಂಗ್ಸ್ ನಲ್ಲಿ 1009 ರನ್ ಬಾರಿಸದ ಪೋರ..! ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಆಟೋ ಚಾಲಕನ ಮಗ..!

ಕನ್ನಡದವರು ಅಂದ್ರೆ ಏನಂದುಕೊಂಡಿದ್ದಾರೆ..? ಅಷ್ಟಕ್ಕೂ ಪರಿಸ್ಥಿತಿ ಯಾಕೆ ಹೀಗಾಗಿದೆ ಗೊತ್ತಾ..? ಈ ವೀಡಿಯೋ ನೋಡಿ..!

6ನೇ ಕ್ಲಾಸ್ ಫೇಲ್ ಆದವಳು ಐಎಎಸ್ ಪರೀಕ್ಷೆಯಲ್ಲಿ ದೇಶಕ್ಕೆ ಟಾಪ್ 2 ರ್ಯಾಂಕ್ ಪಡೆದಳು..!

Share post:

Subscribe

spot_imgspot_img

Popular

More like this
Related

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ ಶಿರಾ ಶಾಸಕರಾದ ಹಾಗೂ ದೆಹಲಿಯ...

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ!

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ! ಬೆಂಗಳೂರು:...