ಪೊಲೀಸ್ ಕೆಲಸ ಎಂದರೆ ಕಷ್ಟಕರವಾದುದು ಎಂದು ಹೇಳುವವರೇ ಹೆಚ್ಚು. ಅಲ್ಲಿ ಕ್ಷಣ ಕ್ಷಣಕ್ಕೂ ಹತ್ತಾರು ಸವಾಲುಗಳು ಎದುರಾಗುತ್ತವೆ. ನಿದ್ದೆ ಇಲ್ಲದ ದಿನಗಳನ್ನು ಕಾಣಬೇಕಾಗುತ್ತದೆ. ಸಂಸಾರದಿಂದ ದೂರ ಉಳಿದಿರಬೇಕಾಗುತ್ತದೆ. ಯಾವುದೇ ಸಮಯದಲ್ಲಿ ಕರೆ ಬಂದರೂ ಕೂಡಾ ಹೋಗಬೇಕಾಗುತ್ತದೆ. ಕಡಿಮೆ ಸಂಬಳವಿದ್ದರೂ ಕೂಡಾ ಅದಕ್ಕೆ ಹೊಂದಿಕೊಂಡು ಹೋಗಬೇಕಾಗುತ್ತದೆ. ಈ ಎಲ್ಲಾ ಕಾರಣಗಳಿಂದಾಗಿ ಪೊಲೀಸ್ ಕೆಲಸ ಕಷ್ಟ ಎನ್ನುವವರೇ ಹೆಚ್ಚು. ಆದರೆ ಇಲ್ಲೊಬ್ಬರು ಮಾತ್ರ ತಂದೆಯ ಆಸೆ ಈಡೇರಿಸಲು ಪೊಲೀಸ್ ಇಲಾಖೆ ಸೇರಿ ಆ ಎಲ್ಲಾ ಮಾತುಗಳು ಸುಳ್ಳು ಎನ್ನುತ್ತಿದ್ದಾರೆ.
ರೂಪೇಶ್ ಕೃಷ್ಣ ರಾವ್ ಪವಾರ್ ಎಂಬುವವರು ಇಂದು ಪೊಲೀಸ್ ಕಾನ್ಸ್ ಟೇಬಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಅದಕ್ಕೂ ಮೊದಲು ಹೆಚ್ಚು ಸಂಬಳ ದೊರೆಯುತ್ತಿದ್ದ ಎಂಎನ್ ಸಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಅವರ ತಂದೆಯವರು ರೂಪೇಶ್ ಪೊಲೀಸ್ ಆಗಬೇಕು ಎಂದು ಬಯಸಿದ್ದರು. ಏಕೆಂದರೆ ಅವರ ಕುಟುಂಬದಲ್ಲಿನ ಎಲ್ಲರೂ ಕೂಡಾ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ರೂಪೇಶ್ ರ ತಂದೆ ಒಂದು ಕಾಲದಲ್ಲಿ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಿದ್ದರು. ಇಂದು ಅವರ ಸಹೋದರ, ಸಹೋದರಿ ಕೂಡಾ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ.
ತಂದೆಯ ಆಸೆಯನ್ನು ಈಡೇರಿಸುವ ಉದ್ದೇಶದಿಂದ ರೂಪೇಶ್ ರವರು ಇಂದು ಪೊಲೀಸ್ ಇಲಾಖೆ ಸೇರಿದ್ದಾರೆ. ಯಾವುದೇ ರೀತಿಯ ಸಮಸ್ಯೆ ಎದುರಾದರೂ ಕೂಡಾ ಅದನ್ನು ಎದುರಿಸಿ, ಸಂಸಾರವನ್ನು ಸುಗಮವಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. ಆ ಮೂಲಕ ಪೊಲೀಸ್ ಇಲಾಖೆಯ ಬಗ್ಗೆ ಜನರಿಗಿರುವ ಭಾವನೆಯನ್ನು ಅಲ್ಲಗೆಳೆಯುತ್ತಿದ್ದಾರೆ
- ರಾಜಶೇಖರ ಜೆ.
Download Android App Now Click Here
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : [email protected]
ಗನ್ ಕಲ್ಚರ್ ಎಫೆಕ್ಟ್, ದೊಡ್ಡಣ್ಣನ್ ಕಣ್ಣಲ್ಲಿ ಕಣ್ಣೀರು..!
ಪ್ರೀತಿ ಎಂಥವರನ್ನೂ ಬದಲಾಯಿಸುತ್ತೆ..! ಯಾರಿಂದಲೂ ಬದಲಾಗದ ಹುಡುಗರು ಹುಡುಗಿಯಿಂದ ಬದಲಾಗ್ತಾರೆ..!
ಒಂಟಿಕಾಲಲ್ಲೇ `ಮೌಂಟ್ ಎವರೆಸ್ಟ್’ ಏರಿದ ಸಾಹಸಿ..!
ಒಂದೇ ಇನ್ನಿಂಗ್ಸ್ ನಲ್ಲಿ 1009 ರನ್ ಬಾರಿಸದ ಪೋರ..! ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಆಟೋ ಚಾಲಕನ ಮಗ..!
ಕನ್ನಡದವರು ಅಂದ್ರೆ ಏನಂದುಕೊಂಡಿದ್ದಾರೆ..? ಅಷ್ಟಕ್ಕೂ ಪರಿಸ್ಥಿತಿ ಯಾಕೆ ಹೀಗಾಗಿದೆ ಗೊತ್ತಾ..? ಈ ವೀಡಿಯೋ ನೋಡಿ..!
6ನೇ ಕ್ಲಾಸ್ ಫೇಲ್ ಆದವಳು ಐಎಎಸ್ ಪರೀಕ್ಷೆಯಲ್ಲಿ ದೇಶಕ್ಕೆ ಟಾಪ್ 2 ರ್ಯಾಂಕ್ ಪಡೆದಳು..!
ಕಳ್ಳನಿಂದ ಅಮ್ಮನನ್ನು ಕಾಪಾಡಿದ 13ರ ಪೋರ..! ಕೆಚ್ಚೆದೆಯ ಬಾಲಕನಿಗೆ ನ್ಯಾಷನಲ್ ಬ್ರೇವರಿ ಅವಾರ್ಡ್..!
ಹೆಂಡತಿಗಾಗಿ ಸರ್ವಸ್ವವನ್ನೇ ತ್ಯಾಗ ಮಾಡಿದ ಪತಿದೇವ..! ಇವರು ಕಳೆದ 59 ವರ್ಷದಿಂದಲೂ ಹೆಂಡತಿಯ ಸೇವೆ ಮಾಡ್ತಿದ್ದಾರೆ..!
ಕಿಲ್ಲಿಂಗ್ ವೀರಪ್ಪನ್ ಸಿನಿಮಾ ನೀವಿನ್ನೂ ನೋಡಿಲ್ವಾ..?
800 ವರ್ಷ ಇತಿಹಾಸ ಇರೋ ಮೊಬೈಲ್..! ನೀವಿನ್ನೂ 800 ವರ್ಷ ಇತಿಹಾಸದ ಮೊಬೈಲ್ ನೋಡಿಲ್ವಾ..?!