No menu items!
12.4 C
Munich
Wednesday, April 29, 2026

ಒಬ್ಬ ಹುಡುಗಿ ಆರು ಜನರಿಗೆ ಜೀವ ಉಳಿಸಿದಳು..! ಸಾವಿನಲ್ಲೂ ಸಾರ್ಥಕತೆ ಮೆರೆದ 6 ವರ್ಷದ ಬಾಲಕಿ..!

Must read

ಆಕೆ ಒಂದನೇ ತರಗತಿಯಲ್ಲಿ ಓದುತ್ತಿದ್ದ ಹುಡುಗಿ. ಶಾಲೆಯಲ್ಲಿ ಚುರುಕಾಗಿದ್ದಳು. ಓದಿನಲ್ಲಿ ಮುಂದಿದ್ದಳು. ಆದರೆ ಆ ದೇವರಿಚ್ಛೆ ಬೇರೆಯಿತ್ತು. ಇದೇ ಜನವರಿ 2ರಂದು ಶಾಲೆಗೆ ತೆರಳುವಾಗ ಯಮನಂತೆ ಬಂದ ವಾಹನವೊಂದು ಆಕೆಗೆ ಗುದ್ದಿತು. ಗುದ್ದಿದ ರಭಸಕ್ಕೆ ಗಂಭೀರವಾಗಿ ಗಾಯಗೊಂಡಿದ್ದ ಆಕೆಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಜನವರಿ 5ರಂದು ಇಲ್ಲಿನ ಕೊವೈ ಮೆಡಿಕಲ್ ಸೆಂಟರ್ ಅಂಡ್ ಹಾಸ್ಪಿಟಲ್ಗೆ ದಾಖಲಿಸಲಾಯಿತು. ಅಲ್ಲಿ ಚಿಕಿತ್ಸೆಗೆ ಸಕಾರಾತ್ಮಕವಾಗಿ ಸ್ಪಂದಿಸದ ಆಕೆಯನ್ನು ವೈದ್ಯರು ‘ಬ್ರೈನ್ ಡೆಡ್’ ಎಂದು ಘೋಷಿಸಿದರು. ಬದುಕಿಯೂ ಸತ್ತಂತೆ ಎಂದು ಷರಾ ಬರೆದರು. ಯಾವುದೇ ಕ್ಷಣದಲ್ಲಿ ಬೇಕಾದರೂ ಸಾವನ್ನಪ್ಪಬಹುದು ಎಂದು ಹೇಳಿದರು. ಬಳಿಕ ಆಕೆ ಸಾವಿನ ಮನೆಯನ್ನೂ ಸೇರಿದಳು. ಆದರೆ ಆ ಪುಟ್ಟ ಜೀವ ಸಾಯುವ ಮುನ್ನ ದೊಡ್ಡ ಮಟ್ಟದ ಉಪಕಾರ ಮಾಡಿತು. 6 ಜನರ ಜೀವ ಉಳಿಸಿತು..!
ಯೆಸ್.. ಕರೂರಿನ ಜನಶೃತಿ ಎಂಬ ಬಾಲಕಿ ತಾನು ಸಾಯುವ ಮುನ್ನ ಸುಮಾರು 6 ಜನರ ಜೀವ ಉಳಿಸಿದ್ದಾಳೆ. ಆಕೆಯ ಬ್ರೈನ್ ಡೆಡ್ ಆದ ಕಾರಣ ಅಂಗಾಂಗ ದಾನ ಮಾಡಲು ಆಕೆಯ ಪೋಷಕರು ಒಪ್ಪಿಗೆ ನೀಡಿದ್ದರು. ನಂತರ ಇಲ್ಲಿನ ಸರ್ಕಾರಿ ಆಸ್ಪತ್ರೆ ಮತ್ತು ಕೆಎಂಹೆಚ್ಸಿ ಆಸ್ಪತ್ರೆಯ ವೈದ್ಯರು ಆಕೆಯ ಕಿಡ್ನಿ, ಹೃದಯ ಕವಾಟ, ಲಿವರ್ ಮತ್ತು ಕಣ್ಣುಗಳನ್ನು ತೆಗೆದು ಅಗತ್ಯ ಇರುವವರಿಗೆ ಕಳುಹಿಸಿದ್ದಾರೆ.
ಹೃದಯ ಕವಾಟ, ಒಂದು ಕಿಡ್ನಿ ಮತ್ತು ಲಿವರ್ನ್ನು ವಿಶೇಷ ವಿಮಾನದ ಮೂಲಕ ಚೆನ್ನೈನ ಮದ್ರಾಸ್ ಮೆಡಿಕಲ್ ಮಿಷನ್, ಫೋರ್ಟಿಸ್ ಮತ್ತು ಅಪೊಲೊ ಆಸ್ಪತ್ರೆಗಳಿಗೆ ಕಳುಹಿಸಲಾಗಿದೆ. ಇನ್ನೊಂದು ಕಿಡ್ನಿಯನ್ನು ಕೆಎಂಸಿಹೆಚ್ನಲ್ಲಿ ಅಳವಡಿಸಲಾಗುವುದು. ಎರಡು ಕಣ್ಣಗಳನ್ನು ಕೊಯಮತ್ತೂರಿನ ಅರವಿಂದ್ ಐ ಹಾಸ್ಪಿಟಲ್ಗೆ ಕಳುಹಿಸಿಕೊಡಲಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಬಾಲಕಿ ಜನಶೃತಿಯ ತಂದೆ ಪರಮತಿವೆಲ್ಲುರ್ `ಈ ಅಂಗಾಂಗಗಳನ್ನು ಅಳವಡಿಸಿಕೊಳ್ಳುವವರ ರೂಪದಲ್ಲಿ ನನ್ನ ಮಗಳು ಜೀವಂತವಾಗಿ ಇರುತ್ತಾಳೆ’ ಎಂದು ಅವರು ಹೆಮ್ಮೆಯಿಂದ ಹೇಳುತ್ತಾರೆ. ಕೆಎಂಸಿಹೆಚ್ನ ಡಾ. ಅರುಣ್ ಎನ್.ಪಳನಿಸ್ವಾಮಿ ಹೇಳುವ ಪ್ರಕಾರ, ಜನಶೃತಿಯು ಚೆನ್ನೈನ ಹೊರಗೆ ಅಂಗಾಂಗ ದಾನ ಮಾಡಿದ ಅತ್ಯಂತ ಕಿರಿಯ ವ್ಯಕ್ತಿ ಎಂದಿದ್ದಾರೆ.
ವಯಸ್ಸು ಚಿಕ್ಕದಾದರೂ ಜನಶೃತಿಯು ಮಾಡಿದ ಉಪಾಕಾರ ಮಾತ್ರ ದೊಡ್ಡದು. ಸಾವಿನ ಮನೆ ಸೇರಿದರೂ ಕೂಡಾ ಆಕೆ ಒಬ್ಬರಿಗೆ ಹೃದಯ ಕೊಟ್ಟು ಉಸಿರಾಗಿ, ಕಣ್ಣು ಕೊಟ್ಟು ಬೆಳಕಾಗಿ ಇಂದಿಗೂ ನಮ್ಮ ಜೊತೆಗಿದ್ದಾಳೆ..!

  • ರಾಜಶೇಖರ ಜೆ

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

ಗನ್ ಕಲ್ಚರ್ ಎಫೆಕ್ಟ್, ದೊಡ್ಡಣ್ಣನ್ ಕಣ್ಣಲ್ಲಿ ಕಣ್ಣೀರು..!

ಚಾರ್ಟೆಡ್ ಅಕೌಟೆಂಟ್ ಆಗಬೇಕೆಂದಿದ್ದ `ಪ್ರಿನ್ಸ್’ ಬಡ ಮಕ್ಕಳಿಗೆ ಗುರುವಾದ..!

ಎಂ.ಎನ್.ಸಿ ಕೆಲಸ ತೊರೆದು ಪೊಲೀಸ್ ಆದ..! ಇವರು ಪೊಲೀಸ್ ಆಗೋಕೆ ಎಂ.ಎನ್.ಸಿ ಕೆಲಸ ಬಿಟ್ಟಿದ್ದೇಕೆ..?

ಪ್ರೀತಿ ಎಂಥವರನ್ನೂ ಬದಲಾಯಿಸುತ್ತೆ..! ಯಾರಿಂದಲೂ ಬದಲಾಗದ ಹುಡುಗರು ಹುಡುಗಿಯಿಂದ ಬದಲಾಗ್ತಾರೆ..!

ಒಂಟಿಕಾಲಲ್ಲೇ `ಮೌಂಟ್ ಎವರೆಸ್ಟ್’ ಏರಿದ ಸಾಹಸಿ..!

ಒಂದೇ ಇನ್ನಿಂಗ್ಸ್ ನಲ್ಲಿ 1009 ರನ್ ಬಾರಿಸದ ಪೋರ..! ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಆಟೋ ಚಾಲಕನ ಮಗ..!

ಕನ್ನಡದವರು ಅಂದ್ರೆ ಏನಂದುಕೊಂಡಿದ್ದಾರೆ..? ಅಷ್ಟಕ್ಕೂ ಪರಿಸ್ಥಿತಿ ಯಾಕೆ ಹೀಗಾಗಿದೆ ಗೊತ್ತಾ..? ಈ ವೀಡಿಯೋ ನೋಡಿ..!

6ನೇ ಕ್ಲಾಸ್ ಫೇಲ್ ಆದವಳು ಐಎಎಸ್ ಪರೀಕ್ಷೆಯಲ್ಲಿ ದೇಶಕ್ಕೆ ಟಾಪ್ 2 ರ್ಯಾಂಕ್ ಪಡೆದಳು..!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article