ಕಣ್ಣಾಟದ ಬೆಡಗಿ,ಮಲಯಾಳಂ ನಟಿ ಪ್ರಿಯಾ ಪ್ರಕಾಶ್ ವಾರಿಯರ್….ಒಂದೇ ಒಂದು ಕಣ್ಣ ಸನ್ಹೆಯ ವೀಡಿಯೋ ತುಣುಕಿನ ಮೂಲಕ ರಾತ್ರೋ ರಾತ್ರಿ ಫೇಮಸ್ ಆದ ಚೆಲುವೆ. ಕಣ್ಣಾಟದಲ್ಲೇ ಹುಡುಗರ ನಿದ್ರೆಗೆಡಿಸಿದ ಸುರಸುಂದರಾಂಗಿ.
ಇದೀಗ ಇವರಿಗೆ ಸೆಡ್ಡು ಹೊಡೆಯಲು ಬಿಗ್ ಬಾಸ್ ಖ್ಯಾತಿಯ ಒಳ್ಳೆಯ ಹುಡುಗ ಪ್ರಥಮ್ ಇನ್ನೊಬ್ಬ ಚೆಲುವೆಯನ್ನು ಕರೆತರ್ತಿದ್ದಾರಂತೆ. ನ್ಯಾಷನಲ್ ಕ್ರಶ್ ಪ್ರಿಯಗೆ ಸೆಡ್ಡು ಹೊಡೆಯಲು ಇಂಟರ್ ನ್ಯಾಷನಲ್ ಕ್ರಶ್ ಕರೆತರ್ತಾರಂತೆ ಪ್ರಥಮ್.
ಬಿಗ್ ಬಾಸ್ ಸೀಸನ್ 4 ರ ವಿನ್ನರ್ ಪ್ರಥಮ್ ತಮ್ಮ ಫೇಸ್ ಬುಕ್‌ನಲ್ಲಿ, “ಎಲ್ಲರಿಗೂ ನಮಸ್ಕಾರ.ನಾನು ನೋಡ್ತಾನೇ ಇದೀನಿ #Priya_Prakash_carrier ನ national crush ಅಂತ ಕೊಂಡಾಡಿದ್ದೇ ಕೊಂಡಾಡಿದ್ದು…
ಸ್ವಲ್ಪ ಕಾಯಿರಿ…ನಾಳಿದ್ದು ನನ್ನ birthday…international crush ನ ಕರ್ಕೊಂಡು ಬರ್ತೀನಿ.ಎಲ್ಲಾ ಹುಡುಗರು ಎದೆ ಒಡ್ಕೊಂಡು ಸಾಯೋದು ಗ್ಯಾರಂಟಿ….
ಮುಖ್ಯವಾಗಿ troll page ಗಳಿಗೆ ಹಬ್ಬ..
ನೀವೆಲ್ಲರೂ ಆರಾಧಿಸುತ್ತಿರೋ international crush heroine ಆಗಿ ಬರ್ತಾ ಇದಾರೆ…
ಹುಡುಗರೇ…ನಿಮ್ಮ heart ಹುಷಾರು…” ಎಂದು ಪೋಸ್ಟ್ ಮಾಡಿದ್ದಾರೆ.
ಇವರು ಯಾರನ್ನು ಕರ್ಕೋಂಡು ಬರ್ತಾರೋ ಅನ್ನೋ ಕುತೂಹಲ ಎಲ್ಲರಲ್ಲಿದೆ.