ಹಿಂದಿ ಹಾಡನ್ನು ಕನ್ನಡಕ್ಕೆ ತಂದ‌ ಆಳ್ವಾಸ್ ವಿದ್ಯಾರ್ಥಿಗಳು…! ಅಲ್ಲಿ ‘ಜೀನ ಜೀನ’ ಇಲ್ಲಿ ‘ಮೌನ ಮೌನ’…!

Must read

ಸಾಮಾಜಿಕ ಜಾಲತಾಣಗಳು ಕೇವಲ ಟೈಮ್ ಪಾಸ್ ತಾಣಗಳಾಗದೆ ಒಂದು ರೀತಿ ಪ್ರಯೋಗಾತ್ಮಕ ಚಿಂತನೆಯನ್ನ ಮೂಡಿಸುವ ವೇದಿಕೆಯಾಗಿ ಮಾರ್ಪಡುತ್ತಿವೆ. ಇಂದು ಸೋಶಿಯಲ್ ಮೀಡಿಯಾ ಅನೇಕರಿಗೆ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸುವ ವೇದಿಕೆಯಾಗಿದೆ.


ಹೌದು, ಇದಕ್ಕೆ ಉದಾಹರಣೆಯಾಗಿ ಆಳ್ವಾಸ್ ಮಲ್ಟಿ ಮೀಡಿಯಾ ಬ್ಯಾನರ್ ಅಡಿಯಲ್ಲಿ ಮೂಡಿ ಬಂದಿರುವ ಹಿಂದಿ ಹಾಡಾದ ಬದ್ಲಪುರ್ ಸಿನಿಮಾದ ‘ಜೀನ ಜೀನ’ ಹಾಡಿನ ಹಿಂದಿ ಸಾಹಿತ್ಯವನ್ನ ಕನ್ನಡ ಸಾಹಿತ್ಯವನ್ನಾಗಿ ‘ಮೌನ ಮೌನ’ ಎಂದು ರಚಿಸಿ, ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು ವಿಭಿನ್ನ ಪ್ರಯತ್ನ ಮಾಡಿದ್ದಾರೆ.

ಹಿಂದಿಯಲ್ಲಿರುವ ಬದ್ಲಪುರ್ ಸಿನಿಮಾದ ಜೀನ ಜೀನ ಹಾಡಿನ ಸಂಗೀತಕ್ಕೆ ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿಯಾದ ಮಂಜುನಾಥ ನಾಯ್ಕ ಮೌನ ಮೌನ ಎಂದು ಕನ್ನಡ ಹಾಡಿದ್ದಾರೆ. ಸಾಹಿತ್ಯವನ್ನು ದೃವ ಜೈನ್ ರಚಿಸಿದ್ದಾರೆ. ಈ ಹಾಡಿಗೆ ತಕ್ಕಂತೆ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳಾದ ಅಂಕಿತ್ ಬೆಕಲ್ ಮತ್ತು ಶುಭ ಶ್ರೀ ಜೈನ್ ಅಭಿನಯಿಸಿದ್ದಾರೆ, ನರೇಂದ್ರ , ಕೃಷ್ಣಪ್ರಶಾಂತ್, ಪ್ರಯಾಗ್ ಮತ್ತು ಇಂದುಧರ್ ಇವರ ಮೂಲಕ ಕ್ಯಾಮೆರಾ ಚಳಕ ಮೂಡಿಬಂದಿದೆ, ಹಾಡಿಗೆ ತಕ್ಕಂತೆ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಕೃಷ್ಣಪ್ರಶಾಂತ್ ಅಭಿನಯದ ಸಂಕಲನವನ್ನ ಮಾಡಿದ್ದಾರೆ, ಈ ಹಾಡು ಫೇಸ್‍ಬುಕ್, ಯೂಟ್ಯೂಬ್‍ನಲ್ಲಿ ವೈರಲ್ ಆಗುತ್ತಿದ್ದು, ವಿದ್ಯಾರ್ಥಿಗಳ ಪ್ರಯತ್ನಕ್ಕೆ ಎಲ್ಲೆಡೆ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ.

- Advertisement -spot_img

More articles

- Advertisement -spot_img

Latest article