ಕಿರುತೆರೆ ನಟಿ ಪ್ರಿಯಾಂಕ ಚಿಂಚೋಳಿ ವಿರುದ್ಧ ವಂಚನೆ ಆರೋಪ ಕೇಳಿಬಂದಿದೆ. ಪ್ರಿಯಾಂಕ ಪ್ರೀತಿ ಹೆಸರಲ್ಲಿ ಮೋಸ ಮಾಡಿದ್ದಾಳೆ. ಹಣ ವಂಚಿಸಿದ್ದಾಳೆ ಎಂದು ಮಾಡೆಲ್ ಒಬ್ಬರು ಆರೋಪಿಸಿದ್ದಾರೆ.
ಮಾಡೆಲ್ ಸಾಯಿರಾಮ್ ಪ್ರಿಯಾಂಕ ವಿರುದ್ಧ ಆರೋಪ ಮಾಡಿದವರು. ನಟಿ ಪ್ರಿಯಾಂಕ ಜೊತೆಗಿನ ಒಂದಿಷ್ಟು ಫೋಟೋ ಮತ್ತು ಮೆಸೆಂಜರ್ ಸಂಭಾಷಣೆಯನ್ನಿಟ್ಟುಕೊಂಡು ಆರೋಪ ಮಾಡುತ್ತಿದ್ದಾರೆ.

ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಪ್ರಿಯಾಂಕ , ‘ಸಾಯಿರಾಮ್ ಕೇವಲ ನನಗೆ ಸ್ನೇಹಿತ. ಆತ ನನ್ನ ಮೇಲೆ ದುರುದ್ದೇಶವಿಟ್ಟುಕೊಂಡು ಹೀಗೆ ಮಾಡಿದ್ದಾನೆ ಎಂದು ಹೇಳಿದ್ದಾರೆ.






