ಮರಿ ಸಚಿನ್ ಪೃಥ್ವಿ ಶಾ. ಕೇವಲ ಎರಡೇ ಎರಡು ಮ್ಯಾಚ್ ನಿಂದ ಸ್ಟಾರ್ ಪಟ್ಟ ಅಲಂಕರಿಸಿದ ಕ್ರಿಕೆಟಿಗ. ಇತ್ತೀಚೆಗೆ ಮುಕ್ತಾಯವಾದ ವೆಸ್ಟ್ ಇಂಡೀಸ್ ವಿರುದ್ಧದ ಸರಣಿ 18ರ ಪೋರ ಪೃಥ್ವಿ ಶಾ ಅವರ ಚೊಚ್ಚಲ ಅಂತರರಾಷ್ಟ್ರೀಯ ಸರಣಿ. ಮೊದಲ ಪಂದ್ಯದಲ್ಲೇ ಶತಕ ಸೇರಿದಂತೆ ಆಡಿದ ಎರಡೂ ಪಂದ್ಯಗಳಿಂದ ಸಾಕಷ್ಟು ದಾಖಲೆಗಳನ್ನು ತನ್ನ ಹೆಸರಿಗೆ ಬರೆಸಿಕೊಂಡ ಪೃಥ್ವಿ ಈಗ ಆಸ್ಟ್ರೇಲಿಯಾ ಸರಣಿಯನ್ನು ಎದುರು ನೋಡ್ತಿದ್ದಾರೆ. ಆದರೆ, ಈಗಾಗಲೇ ಪೃಥ್ವಿ ಶಾ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ. ಮಹಾರಾಷ್ಟ್ರ ನವ ನಿರ್ಮಾಣ ಸೇನೆ (ಎಂಎನ್ ಎಸ್) ಕ್ರಿಕೆಟ್ ಆಡದಂತೆ ಪೃಥ್ವಿ ಶಾಗೆ ಎಚ್ಚರಿಕೆ ನೀಡಿದೆ.
ಪೃಥ್ವಿ ತನ್ನ ಮೂಲ ಬಿಹಾರ ಎಂದಿದ್ದೇ ಇದಕ್ಕೆ ಕಾರಣ. ಮಹಾರಾಷ್ಟ್ರದಲ್ಲಿ ಬೆಳೆದು, ಕ್ರಿಕೆಟ್ ಕಲಿತು, ಆಡಿ ಮಹಾರಾಷ್ಟ್ರದಿಂದಲೇ ಟೀಂ ಇಂಡಿಯಾಕ್ಕೆ ಆಯ್ಕೆಯಾಗಿರುವ ಶಾ, ನಾನು ಮೂಲತಃ ಬಿಹಾರದವನು ಅಂತ ಹೇಳಿದ್ದೇ ಇದಕ್ಕೆಕಾರಣ.
ಈ ಹೇಳಿಕೆಯಿಂದ ಪೃಥ್ವಿ ಶಾ ಎಂಎನ್ ಎಸ್ ನ ಕೆಂಗೆಣ್ಣಿಗೆ ಗುರಿಯಾಗಿದ್ದಾರೆ.
“ಪೃಥ್ವಿ ಶಾ ಮೂಲತಃ ಬಿಹಾರದವರು. ನಾನು ಇತ್ತೀಚೆಗಷ್ಟೇ ಅವರಿಗೆ ಕರೆ ಮಾಡಿದ್ದೆ. ಆ ವೇಳೆ ಎಂಎನ್ ಎಸ್ ಪೃಥ್ವಿಗೆ ಕರೆಮಾಡಿ, ನೀವು ಕ್ರಿಕೆಟ್ ಕಲಿತಿದ್ದು ಮಹಾರಾಷ್ಟ್ರದಲ್ಲಿ. ಆದರೆ, ಮೂಲತಃ ಬಿಹಾರದವರು ಅಂತ ಹೇಳ್ತಾ ಇದ್ದೀರ. ಹಾಗಾದ್ರೆ ನೀವು ಟೆಸ್ಟ್ ತಂಡದಲ್ಲಿ ಸ್ಥಾನಪಡೆದಿದ್ದು ಎಲ್ಲಿಂದ? ಇನ್ನೊಮ್ಮೆ ನೀವು ಬಿಹಾರದವರು ಎಂದರೆ ಮಹಾರಾಷ್ಟ್ರದಲ್ಲಿ ನೆಲೆಸಲು ಬಿಡುವುದಿಲ್ಲ ಎಂದು ಬೆದರಿಕೆಯೊಡ್ಡಿದ್ದಾರೆ. ಇದನ್ನು ಪೃಥ್ವಿ ನನ್ನಲ್ಲಿ ಹೇಳಿಕೊಂಡಿದ್ದಾರೆ” ಎಂದು ಕಾಂಗ್ರೆಸ್ ಸಂಸದ ಅಖಿಲ್ ಪ್ರಸಾದ್ ಸಿಂಗ್ ಹೇಳಿದ್ದಾರೆ.