ಬೆಂಗಳೂರಿಗೆ ಬಂದಿದ್ದಾನೆ ಮಹಿಳೆಯರ ಒಳ ಉಡುಪು ಕದಿಯೋ ಸೈಕೋ…!

Date:

ಮಹಿಳೆಯರೇ ಎಚ್ಚರ… ಬೆಂಗಳೂರಿಗೆ ಬಂದಿದ್ದಾನೆ ಒಳ ಉಡುಪು ಕದಿಯೋ ಸೈಕೋ…!
ಸೈಕೋ ಒಬ್ಬ ಮೆಟ್ರೋ ರೈಲಿನ ಚಾಲಕಿಯರಿಗೆ ಕಿರುಕುಳ ನೀಡಿರೋ ಘಟನೆಗೆ ಬೆಂಗಳೂರಿನ ಬೈಯಪ್ಪನಹಳ್ಳಿಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.


ಜನವರಿ 10ರಂದು ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಬೈಯಪ್ಪನಹಳ್ಳಿಯ ಬಿಎಂಆರ್‍ಸಿಎಲ್ ಕ್ವಾಟ್ರಸ್‍ನಲ್ಲಿ ನಾಲ್ವರು ಯುವತಿಯರಿದ್ದ ಫ್ಲಾಟ್ ಗೆ ನುಗ್ಗಿ ಕಿರುಕುಳ ನೀಡಿದ್ದಾನೆ ಸೈಕೋ.
ಯುವತಿಯರು ಮಲಗಿದ್ದಾಗ ಅವರ ಬಳಿ ಹೋಗಿ ಕುಳಿತುಕೊಂಡಿದ್ದು, ಓರ್ವ ಯುವತಿಗೆ ಎಚ್ಚರವಾಗಿ ಕಿರುಚಿಕೊಂಡಿದ್ದಾರೆ. ನಂತರ ಯುವತಿಯರೆಲ್ಲ ಸೇರಿ ಆತನನ್ನು ವಿಚಾರಿಸಿದಾಗ ತಾನು ವಾಚ್ ಮನೆ ಅಂತ ಹೇಳಿದ್ದಾನೆ. ನಂತರ ತಾನು ಕಳ್ಳ ಆದ್ದರಿಂದ ನನ್ನನ್ನು ಮನೆಯಿಂದ ಆಚೆಗೆ ಹಾಕಿದ್ದಾರೆಂದು ಹೇಳಿಕೊಂಡಿದ್ದಾನೆ. ಈತನ ವರ್ತನೆಯಿಂದ ಯುವತಿಯರಿಗೆ ಭಯವಾಗಿದೆ.


ಅಷ್ಟರಲ್ಲೇ ಚಾಕು ಹಿಡಿದು ಬಾಲ್ಕನಿಗೆ ಹೋಗಿ ಯುವತಿಯರ ಒಳ ಉಡುಪುಗಳನ್ನು ಮೂಸಿ, ಇದು ನಿನ್ನದ, ನಿನ್ನದ ಅಂತ ಕೆಲವು ಯುವತಿಯರಲ್ಲಿ ಕೇಳಿದ್ದಾನೆ. ಯುವತಿಯರು ನಮ್ಮದಲ್ಲ ಎಂದಿದ್ದಕ್ಕೆ ಅವುಗಳನ್ನು ಎಸೆದು ಕಾಲ್ಕಿತ್ತಿದ್ದಾನೆ.
ಈತ ಮನೆಯಲ್ಲೇ ಸಿಗರೇಟ್ ಸೇದಿದ್ದಾನೆ, ಉಗುಳಿದ್ದಾನೆ. ಇಬ್ಬರು ಯುವತಿಯರು ಹೋಗಿ ಸೆಕ್ಯುರಿಟಿಯನ್ನು ಕರೆತರುವಷ್ಟರಲ್ಲಿ ಸೈಕೋ ಎಸ್ಕೇಪ್ ಆಗಿದ್ದ. ಮೆಟ್ರೋ ಚಾಲಕಿಯೊಬ್ಬರು ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಹಿಂದೆ ಇಂತಹ ವಿಕೃತಕಾಮಿಯೊಬ್ಬ ಮಹಾರಾಣಿ ಕಾಲೇಜಿನ ಹಾಸ್ಟೆಲ್ ನಲ್ಲಿ ಕಾಣಿಸಿಕೊಂಡಿದ್ದ. ಹುಡುಗಿಯರ ಒಳ ಉಡುಪುಗಳನ್ನು ಧರಿಸಿ ಅರೆ ನಗ್ನವಾಗಿ ಆತ ಹಾಸ್ಟೆಲ್ ನಲ್ಲಿ ಓಡಾಡುತ್ತಿದ್ದುದು, ಹುಡುಗಿಯರ ರೂಂ ಇಣುಕಿ ನೋಡೋದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಹೈಗ್ರೌಂಡ್ ಠಾಣೆ ಪೊಲೀಸರು ಸೈಕೋನನ್ನು ಬಂಧಿಸಿದ್ದರು.

Share post:

Subscribe

spot_imgspot_img

Popular

More like this
Related

ಡಿ ಕೆ ಶಿವಕುಮಾರ್ ಬೆಂಗಳೂರು ಅಭಿವೃದ್ಧಿಯ ಹೊಣೆ ಹೊತ್ತಿರುವುದು ನಮ್ಮ ಪುಣ್ಯ: ನಾಗರಿಕರ ಪ್ರಶಂಸೆ

ಡಿ ಕೆ ಶಿವಕುಮಾರ್ ಬೆಂಗಳೂರು ಅಭಿವೃದ್ಧಿಯ ಹೊಣೆ ಹೊತ್ತಿರುವುದು ನಮ್ಮ ಪುಣ್ಯ:...

ಜಾರ್ಖಂಡ್‌ನಲ್ಲಿ ವೈದ್ಯಕೀಯ ನಿರ್ಲಕ್ಷ್ಯ — ರಕ್ತ ಪಡೆದ ಐದು ಮಕ್ಕಳಿಗೆ ಎಚ್‌ಐವಿ ಸೋಂಕು

ಜಾರ್ಖಂಡ್‌ನಲ್ಲಿ ವೈದ್ಯಕೀಯ ನಿರ್ಲಕ್ಷ್ಯ — ರಕ್ತ ಪಡೆದ ಐದು ಮಕ್ಕಳಿಗೆ ಎಚ್‌ಐವಿ...

ಬೆಳಿಗ್ಗೆ ಎದ್ದಾಕ್ಷಣ ಇವುಗಳನ್ನು ನೋಡಿದರೆ ಅದೃಷ್ಟ – ಆದರೆ ಈ ಕೆಲಸ ತಪ್ಪದೇ ಬಿಡಿ!

ಬೆಳಿಗ್ಗೆ ಎದ್ದಾಕ್ಷಣ ಇವುಗಳನ್ನು ನೋಡಿದರೆ ಅದೃಷ್ಟ – ಆದರೆ ಈ ಕೆಲಸ...

ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತೆ, ಖರ್ಚಿಲ್ಲದೆ ಖಾತಾ ಮಾಡಿಕೊಡುತ್ತೇವೆ: HDK

ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತೆ, ಖರ್ಚಿಲ್ಲದೆ ಖಾತಾ ಮಾಡಿಕೊಡುತ್ತೇವೆ:...