ರೈತ ಮುಖಂಡ , ಶಾಸಕ ಕೆ.ಎಸ್ ಪುಟ್ಟಣ್ಣಯ್ಯ ಹೃದಯಘಾತದಿಂದ ವಿಧಿವಶರಾಗಿದ್ದಾರೆ.
ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಇವರು ಕಬ್ಬಡಿ ಪಂದ್ಯ ವೀಕ್ಷಿಸುತ್ತಿದ್ದ ವೇಳೆ ಕುಸಿದು ಬಿದ್ದರು. ಕೂಡಲೇ ವಿಮ್ಸ್ ಆಸ್ಪತ್ರೆ ಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಿಸಲಿಲ್ಲ. ಸರ್ವೋದಯ ಕರ್ನಾಟಕ ಪಕ್ಷದಿಂದ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕಾರಾಗಿ ಜನಾದೇಶ ಪಡೆದಿದ್ದ ಪುಟ್ಟಣ್ಣಯ್ಯ ಅವರು ರೈತ ಪರ ಹೋರಾಟದಲ್ಲಿ ಸದಾ ಮುಂದಿರುತ್ತಿದ್ದರು.