ಮದುವೆ ವಿಚಾರ ಕೇಳಿದ್ರೆ ಟಾರ್ಚಾರ್ ಆಗುತ್ತೆ ನನಗೆ ಎಂದಿದ್ಯಾಕೆ ಡಿಂಪಲ್ ಕ್ವೀನ್..
ಕನ್ನಡ ಚಿತ್ರರಂಗದಲ್ಲಿ ಡಿಂಪಲ್ ಕ್ವೀನ್ ಎಂದೇ ಹೆಸರು ಮಾಡಿದವರು ರಚಿತಾ ರಾಮ್. ಬುಲ್ ಬುಲ್, ರನ್ನ, ಪವರ್, ಅಯೋಗ್ಯ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿ ಎನಿಸಿಕೊಂಡಿರುವ ನಟಿ ಇವರು. ಇನ್ನ ಸ್ಯಾಂಡಲ್ ವುಡ್ ನಲ್ಲಿ ಸಾಲು ಸಾಲು ಮದುವೆ ನಡೆಯುತ್ತಿದೆ. ಮೊನ್ನೆಯಷ್ಟೇ ಧ್ರುವ ನಿಶ್ಚಿತಾರ್ಥ ಅದ್ಧೂರಿಯಾಗಿ ನೆರವೇರಿತು.
ಈ ಸಂದರ್ಭದಲ್ಲಿ ಐ ಲವ್ ಯೂ ಟ್ರೈಲರ್ ಲಾಂಚ್ ವೇಳೆ ಸಿಕ್ಕಾ ರಚಿತಾ ರಾಮ್ ಅವರನ್ನು ಮಾಧ್ಯಮದವರು ಮದುವೆ ವಿಚಾರ ಪ್ರಸ್ತಾಪಿಸಿದರು. ಈ ಸಂದರ್ಭದಲ್ಲಿ ರಚಿತಾ, ಪದೇ ಪದೇ ಮದುವೆ ವಿಚಾರ ನೀವೂ ಕೇಳಬೇಡಿ, ಮದುವೆ ಪ್ರಶ್ನೆ ಬಂದ್ರೆ ಸಾಕು ನನಗೆ ಟಾರ್ಚರ್ ಆಗುತ್ತೆ. ದಯವಿಟ್ಟು ಮದುವೆ ಸಮಯ ಬಂದಾಗ ಖಂಡಿತ ಹೇಳುತ್ತೇವೆ ಎಂದು ಸ್ಪಷ್ಟಪಡಿಸಿದರು.