ರಾಧಿಕ ಕುಮಾರ್ ಸ್ವಾಮಿ ಅವರಿಗೆ ತೀರ್ವ ಪೆಟ್ಟಾದ ಕಾರಣ ಇನ್ನೊಂದು ತಿಂಗಳ ನಡೆದಾಡುವಂತಿಲ್ಲ ಅಂತ ವೈದ್ಯರು ತಿಳಸಿದ್ದಾರೆ.. ಹೌದು, ಎಡವಿ ಬಿದ್ದ ಪರಿಣಾಮ ಸ್ಪೈನಲ್ ಕಾರ್ಡ್ ಗೆ ತೀರ್ವ ಪೆಟ್ಟಾಗಿದ್ದು ನಡೆಯಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದಾರೆ..
ಆಗಿದ್ದೇನು..?
ಸದ್ಯ ಸ್ಯಾಂಡಲ್ ವುಡ್ ನ ಸ್ವೀಟಿ ಈಗ ಮತ್ತೆ ಚಿತ್ರರಂಗದಲ್ಲಿ ಸಕ್ರೀಯಾರಾಗಿದ್ದಾರೆ.. ಒಂದಾದ ಮೇಲೆ ಒಂದರಂತೆ ಸಿನಿಮಾವನ್ನ ಒಪ್ಪಿಕೊಂಡಿದ್ದು, ಬ್ಯಾಕ್ ಟೂ ಬ್ಯಾಕ್ ಶೂಟಿಂಗ್ ನಲ್ಲಿ ಬ್ಯೂಸಿಯಾಗಿದ್ದಾರೆ.. ಸದ್ಯ ನಿಮಗೆಲ್ಲ ಗೊತ್ತಿರುವ ಹಾಗೆ ಭೈರಾದೇವಿ ಚಿತ್ರೀಕರಣದಲ್ಲಿ ತೊಡಗಿಕೊಂಡಿರುವ ರಾಧಿಕ, ಇದೇ ಚಿತ್ರದ ಶೂಟಿಂಗ್ ಸಮಯದಲ್ಲಿ ಪೆಟ್ಟು ಮಾಡಿಕೊಂಡಿದ್ದಾರೆ..
ಕಳೆದ ಬುಧವಾರ ರಾತ್ರಿ ಬೆಂಗಳೂರಿನ ಶಾಂತಿನಗರದ ಸ್ಮಶಾನದಲ್ಲಿ ಚಿತ್ರೀಕರಣ ಮಾಡ್ತಾ ಇದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ಗೋರಿಯೊಂದರ ಮೇಲೆ ತ್ರಿಶೂಲ ಹಿಡಿದು ಡ್ಯಾನ್ಸ್ ಮಾಡುವ ವೇಳೆಯಲ್ಲಿ ರಾಧಿಕಾ ಕುಮಾರಸ್ವಾಮಿ ಕಾಲು ಜಾರಿ ಬಿದ್ದಿದ್ದಾರೆ.. ಬಿದ್ದ ರಬಸಕ್ಕೆ ಸ್ಟೈನಲ್ ಕಾರ್ಡ್ ಗೆ ತೀರ್ವ ಪೆಟ್ಟಾಗಿದೆ..ವೈದ್ಯರು ಇನ್ನೊಂದು ತಿಂಗಳು ರಾಧಿಕಾ ಓಡಾಡಲು ಸಾಧ್ಯವಿಲ್ಲ ಅಂತ ಹೇಳಿದ್ದು, ಸಿನಿಮಾದ ಚಿತ್ರೀಕರಣವನ್ನ ಮುಂದೂಡಲಾಗಿದೆ..