ಚುನಾವಣಾ ಸಂಬಂಧ ಅಭಿಯಾನಕ್ಕೆ ವಿಶ್ವ ಶ್ರೇಷ್ಠ ಕ್ರಿಕೆಟಿಗ, ಹೆಮ್ಮೆಯ ಕನ್ನಡಿಗ ರಾಹುಲ್ ದ್ರಾವಿಡ್ ಅವರನ್ನು ರಾಯಭಾರಿಯಾಗಿ ನೇಮಿಸಿಕೊಳ್ಳಲು ಚುನಾವಣಾ ಆಯೋಗ ಚಿಂತನೆ ನಡೆಸಿದೆ…!
ಮತದಾನ ಕಡ್ಡಾಯ ಹಕ್ಕು ಎಂದು ಸಾರಲು ಆಯೋಗ ಅಭಿಯಾನ ಆರಂಭಿಸಲಿದೆ. ಕ್ರಿಕೆಟಿಗರು, ಸಿನಿಮಾ ತಾರೆಗಳನ್ನು ಅಭಿಯಾನದಲ್ಲಿ ಬಳಸಿಕೊಳ್ಳಲು ಉದ್ದೇಶಿಸಿದೆ.
ಭಾರತ ಅಂಡರ್ 19 ವಿಶ್ವಕಪ್ ಗೆಲ್ಲುವಲ್ಲಿ ಗುರುವಾಗಿ ದ್ರಾವಿಡ್ ಪ್ರಮುಖ ಪಾತ್ರವಹಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರೂ ಸಹ ದ್ರಾವಿಡ್ ಅವರನ್ನು ಪ್ರಶಂಸಿಸಿದ್ದರು.
ಈ ಕಾರಣದಿಂದ ಅಭಿಯಾನಕ್ಕೆ ರಾಹುಲ್ ಸೂಕ್ತ ವ್ಯಕ್ತಿ. ಅವರನ್ನು ರಾಯಭಾರಿಯಾಗಿ ಮಾಡಿಕೊಳ್ಳಲು ಆಯೋಗ ಉದ್ದೇಶಿಸಿದೆ ಎನ್ನಲಾಗಿದ್ದು ಅವರ ಜೊತೆ ಮಾತುಕತೆ ನಡೆಸಬೇಕಿದೆ.