ರಾಹುಲ್ ಗಾಂಧಿ ಸದಾ ಒಂದಿಲ್ಲೊಂದು ಸುದ್ದಿಯಿಂದ ಸದ್ದು ಮಾಡ್ತಿರ್ತಾರೆ. ಇವತ್ತು ಲೋಕಸಭೆಯಲ್ಲಿ ಕಣ್ಣಾಟವಾಡಿ ಸುದ್ದಿಯಾಗಿದ್ದಾರೆ…!
ಇವತ್ತು ಲೋಕಸಭೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದ ರಾಹುಲ್ ಗಾಂಧಿ, ತಮ್ಮ ಮಾತು ಮುಗಿಸಿದ ಬಳಿಕ ತಿಳಿಹಾಸ್ಯ ಮಾಡಿದರು.
ನನ್ನ ಬಗ್ಗೆ ನಿಮ್ಮಲ್ಲಿ ದ್ವೇಷವಿದೆ. ನೀವು ನನ್ನನ್ನು ಪಪ್ಪು ಹೆಸರಿನಿಂದ ಕರೆದಿದ್ದೀರಿ. ಅನೇಕ ಬಾರಿ ಗೇಲಿ ಮಾಡಿದ್ದೀರಿ. ನಾನು ನಿಮ್ಮಗಳ ಬಗ್ಗೆ ದ್ವೇಷ ಸಾಧಿಸಲ್ಲ ಎಂದು ಮಾತು ಮುಗಿಸಿದರು ರಾಹುಲ್. ನಂತರ ಮೋದಿ ಬಳಿ ಹೋಗಿ ಅವರನ್ನು ತಬ್ಬಿಕೊಂಡರು…!
ಬಳಿಕ ತಮ್ಮ ಸೀಟಿನಲ್ಲಿ ಕುಳಿತು ತಮ್ಮ ಪಕ್ಷದವರತ್ತ ತಿರುಗಿ ಕಣ್ಣು ಮಿಟುಕಿಸಿದರು.
ಈಗ ಅದು ಟ್ರೋಲ್ ಆಗ್ತಿದೆ. ಕಣ್ಣೋಟದ ಬೆಡಗಿ ಪ್ರಿಯವಾರಿಯರ್ ನಾಚುಚಂತೆ ರಾಹುಲ್ ಕಣ್ಣಾಟವಾಡಿದ್ದಾರೆ.