ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿರುವ ರಾಹುಲ್ ಗಾಂಧಿ ಹವಾ ಜೋರಾಗ್ತಾ ಇದ್ಯಾ..? ಸೋಶಿಯಲ್ ಮೀಡಿಯಾದಲ್ಲಿ ರಾಹುಲ್ ಗಾಂಧಿ ಸಿಕ್ಕಾಪಟ್ಟೆ ಫೇಮಸ್ ಆಗ್ತಿದ್ದಾರ..? ಇವ್ರು ಏನೇ ಮಾತಾಡಿದ್ರು ಅದು ಹಾಸ್ಯಕ್ಕೆ ಅಥವಾ ವಿವಾದಕ್ಕೀಡಾಗೋದು ಸಾಮಾನ್ಯವಾಗ್ಬಿಟ್ಟಿದೆ.. ಪದೇ ಪದೇ ಕಾಂಗ್ರೆಸ್ ಯುವರಾಜ ನಗೆಪಾಟಿಲಿಗೆ ಈಡಾಗ್ತಿದ್ದಾರೆ..! ಈ ನಡುವೆಯೂ ಅವ್ರು ಸೋಶಿಯಲ್ ಮೀಡಿಯಾದಲ್ಲಿ ಅಬ್ಬರಿಸ್ತಾ ಇದ್ದಾರೆ..!
ರಾಹುಲ್ ಸ್ಪೀಡ್ ನೋಡಿದ್ರೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನ ಹಿಂದಿಕ್ತಾರ..? ಅನ್ನೋ ಪ್ರಶ್ನೆ ಕೂಡ ಮೂಡಿದೆ.
ಹೌದು, ರಾಹುಲ್ ಟ್ವೀಟರ್‍ನಲ್ಲಿ ತುಂಬಾ ಆ್ಯಕ್ಟಿವ್ ಆಗಿದ್ದಾರೆ.. ಅವರ ಟ್ವೀಟ್‍ಗೆ ಹೆಚ್ಚು ಹೆಚ್ಚು ರೀಟ್ವೀಟ್ ಬರ್ತಿದೆ..!
ಪ್ರಧಾನಿ ನರೇಂದ್ರ ಮೋದಿ ಮತ್ತು ನವದೆಹಲಿ ಸಿಎಂ ಅರವಿಂದ ಕೇಜ್ರಿವಾಲ್‍ಗಿಂತಲೂ ರಾಹುಲ್ ಟ್ವೀಟ್‍ಗೆ ರೀಟ್ವೀಟ್‍ಗಳ ಸಂಖ್ಯೆ ಅಜಗಜಾಂತರ ಇಳಿಕೆ ಇತ್ತು. ಆದ್ರೆ, ಇದೀಗ ರಾಹುಲ್ ಟ್ವೀಟ್‍ನ ರೀ ಟ್ವೀಟ್‍ಗಳ ಸಂಖ್ಯೆ ಏರಿಕೆಯಾಗಿದೆ..
ಸದ್ಯ ರಾಹುಲ್ ಟ್ವೀಟ್‍ಗೆ ರೀಟ್ವೀಟ್‍ಗಳ ಸರಾಸರಿ 3800 ಇದ್ದರೆ, ಮೋದಿ ಟ್ವೀಟ್‍ಗೆ ರೀಟ್ವೀಟ್‍ಗಳ ಸಂಖ್ಯೆಯ ಸರಾಸರಿ 2300 ಇದೆ..!
ಜೂನ್‍ನಲ್ಲಿ ಅರವಿಂದ್ ಕೇಜ್ರಿವಾಲ್ ಅವರನ್ನು ಈ ವಿಷ್ಯಾದಲ್ಲಿ ಹಿಂದಿಕ್ಕಿದ್ದ ಕಾಂಗ್ರೆಸ್ ಯುವರಾಜ ಸೆಪ್ಟೆಂಬರ್ ಅಂತ್ಯದಲ್ಲಿ ಪಿಎಂ ಮೋದಿಯವರನ್ನೇ ಹಿಂದಾಕಿದ್ದಾರೆ..!
ಮೋದಿ ಮತ್ತೆ ರಾಹುಲ್ ಅವರನ್ನು ಹಿಂದಿಕ್ಕುತ್ತಾರ? ಕಾದು ನೋಡ್ಬೇಕು..