ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೇನೆ ಎಂದು ಬರೆದುಕೊಟ್ಟಪತ್ರಕ್ಕೆ ಕೆಪಿಸಿಸಿಎಲ್ ಸಿಬ್ಬಂದಿ ಸ್ವೀಕೃತಿ ಸೀಲ್ ಹಾಕಿ ಕೊಟ್ಟಿದ್ದಾರೆ…!
ಅಚ್ಚರಿಯಾದ್ರು ಇದು ಸತ್ಯ…!ರಾಯಚೂರಿನ ಯರಮರಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರಕ್ಕೆ ಭೂಮಿ ಕಳೆದುಕೊಂಡ ರೈತನ ಮಗ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪತ್ರ ಬರೆದಿದ್ದ. ಈ ಪತ್ರ ಓದದೇ ಸ್ವೀಕೃತಿ ಸೀಲ್ ಹಾಕಿದ್ದಾರೆ ಆದರೆ ಎನ್ನಲಾಗುತ್ತಿದೆ.
ಯರಮರಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರಕ್ಕೆ ರೈತನ ಮಗ ಭೂಮಿ ಕೊಟ್ಟಿದ್ದರು. 2016ರಲ್ಲೇ ಅರ್ಜಿ ಸಲ್ಲಿಸಿದರೂ ಇದುವರೆಗೆ ಉತ್ತರ ಸಿಕ್ಕಿಲ್ಲ. ಈ ಕುಟುಂಬದ ಜೀವನ ನಿರ್ವಹಣೆ ಕಷ್ಟವಾಗಿದೆ. ಆದ್ದರಿಂದ ಉದ್ಯೋಗ ನೀಡಿ, ಇಲ್ಲವೇ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಯುವ ರೈತ ಪತ್ರಬರೆದಿದ್ದರು.