ಮುಂದಿನ 3 ಗಂಟೆಗಳ ಕಾಲ ಬಿರುಗಾಳಿ ಸಹಿತ ಭಾರಿ ಮಳೆ

Date:

ಬೆಂಗಳೂರು : ಈಗಾಗಲೇ ಧೂ ಎಂದು ಮಳೆ ಶುರುವಾಗಿದೆ . ಮುಂದಿನ 3 ಗಂಟೆಗಳ ಕಾಲ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ರಾತ್ರಿ 9 ಗಂಟೆಯವರೆಗೆ ಮಳೆ ಇರಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ರಾಮನಗರ, ಮಂಡ್ಯ, ಕೋಲಾರ ಜಿಲ್ಲೆಗಳಿಗೂ ಮಳೆಯಾಗಲಿದೆ ಎಂದು ಎಚ್ಚರಿಕೆ ನೀಡಲಾಗಿದೆ. 40-50 ಕಿ.ಮೀ ವೇಗದಲ್ಲಿರುವ ಗಾಳಿ, ಮಿಂಚು ಸಹಿತ ಮಳೆ ಸಾಧ್ಯತೆ ಎನ್ನಲಾಗುತ್ತಿದೆ. ಬೆಂಗಳೂರಿನಲ್ಲಿ ಈಗಾಗ್ಲೇ ಕೆಲವೆಡೆ ಮಳೆ ಆರಂಭವಾಗಿದ್ದು, ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ. ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನ ಹಲವು ಸ್ಥಳಗಳಲ್ಲಿ ಗುಡುಗು ಸಹಿತ ಮಳೆಯಾಗಲಿದ್ದು, ಕರಾವಳಿ ಕರ್ನಾಟಕದ ಬಹುತೇಕ ಪ್ರದೇಶಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಅರಬ್ಬಿ ಸಮುದ್ರ, ಬಂಗಾಳ ಕೊಲ್ಲಿಯಲ್ಲಿ ಮಳೆಯ ವಾತಾವರಣ ಇರುವುದರಿಂದ ಮುಂದಿನ 3-4 ದಿನ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

Share post:

Subscribe

spot_imgspot_img

Popular

More like this
Related

ಕೇಂದ್ರದ ಅರಣ್ಯ ಸಚಿವರ ಜತೆ ಮಹತ್ವದ ಮಾತುಕತೆ ನಡೆಸಿದ ಹೆಚ್.ಡಿ. ಕುಮಾರಸ್ವಾಮಿ

ಕೇಂದ್ರದ ಅರಣ್ಯ ಸಚಿವರ ಜತೆ ಮಹತ್ವದ ಮಾತುಕತೆ ನಡೆಸಿದ ಹೆಚ್.ಡಿ. ಕುಮಾರಸ್ವಾಮಿ ನವದೆಹಲಿ:...

ಅಬಕಾರಿ ಸಚಿವರ ರಾಜೀನಾಮೆ ಪಡೆದು ತನಿಖೆ ನಡೆಸಲಿ: ಬಿ.ವೈ. ವಿಜಯೇಂದ್ರ ಒತ್ತಾಯ

ಅಬಕಾರಿ ಸಚಿವರ ರಾಜೀನಾಮೆ ಪಡೆದು ತನಿಖೆ ನಡೆಸಲಿ: ಬಿ.ವೈ. ವಿಜಯೇಂದ್ರ ಒತ್ತಾಯ ಬೆಂಗಳೂರು:...

ಗರ್ಭಾವಸ್ಥೆಯಲ್ಲಿ ಕಂಡುಬರುವ ಖಿನ್ನತೆ ತಡೆಯಲು ಈ ರೀತಿ ಮಾಡಿ!

ಗರ್ಭಾವಸ್ಥೆಯಲ್ಲಿ ಕಂಡುಬರುವ ಖಿನ್ನತೆ ತಡೆಯಲು ಈ ರೀತಿ ಮಾಡಿ! ಗರ್ಭಾವಸ್ಥೆಯಲ್ಲಿ ಮಹಿಳೆ ಅನುಭವಿಸುವ...

ತೀರ್ಪು ವಿಳಂಬಕ್ಕೆ ಸುಪ್ರೀಂ ಕೋರ್ಟ್ ಕಿಡಿ: ಹೈಕೋರ್ಟ್ಗಳ ಕಾರ್ಯವೈಖರಿಯ ಮೇಲೆ ಅಸಮಾಧಾನ

ತೀರ್ಪು ವಿಳಂಬಕ್ಕೆ ಸುಪ್ರೀಂ ಕೋರ್ಟ್ ಕಿಡಿ: ಹೈಕೋರ್ಟ್ಗಳ ಕಾರ್ಯವೈಖರಿಯ ಮೇಲೆ ಅಸಮಾಧಾನ ನವದೆಹಲಿ:...